ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮೀಣ ಜನರ ಸೇವೆಗೆ ವೈದ್ಯರು ಆದ್ಯತೆ ನೀಡಿ’

Last Updated 28 ಜನವರಿ 2017, 8:43 IST
ಅಕ್ಷರ ಗಾತ್ರ

ಗಜೇಂದ್ರಗಡ: ಈ ದೇಶವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷರು ಮತ್ತು ವೈದ್ಯರ ಪಾತ್ರ ಅತ್ಯಂತ ಹಿರಿದಾದುದು. ದೇಸದ ನಾಗರೀಕರನ್ನು ಶಿಕ್ಷಕರು ನಿರ್ಮಾಣ ಮಾಡಿದರೆ, ವೈದ್ಯರು ಸಾವಿನ ದವಡೆಯಲ್ಲಿರುವವವರನ್ನು ಪಾರಾಗಿಸು ತ್ತಾರೆ. ಸಮಾಜದಲ್ಲಿ ವೈದ್ಯರನ್ನು ಜನರು ದೇವರ ಸಮಾನವಾಗಿ ಕಾಣುತ್ತಾರೆ. ಅದನ್ನು ಬಾವಿ ದೈದ್ಯರು ಅರ್ಥೈಸಿ ಕೊಂಡು ತಮ್ಮ ಚಿತ್ತವನ್ನು ನಗರಕ್ಕಿಂತ ಹಳ್ಳಗಳ ಕಡೆಗೆ ಹರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕರೆ ನೀಡಿದರು.

ಅವರು ಇಲ್ಲಿನ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜದ ವಾರ್ಷಿಕೋತ್ಸವ ಮತ್ತು ಪ್ರಶಸ್ಥಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ಇಂದಿನ ಕೆಲವು ವೈದ್ಯರು ನಗರಗಳಲ್ಲಿ ರೋಗಿ ಗಳನ್ನು ಶೋಷಿಸಿಸುತ್ತಿದ್ದಾರೆ. ರೋಗಿಗಳು ವೈದ್ಯರನ್ನು ದೇವರೆಂದು ಬಗೆದು ಆಸ್ಪತ್ರೆಗೆ ಹೋದರೆ ಅವರು ರೋಗಿ ಗಳನ್ನು ವಿನಾ ಕಾರಣ ಹಿಂಸಿಸುತ್ತಾರೆ. ಇದು ವೈದ್ಯ ವೃತ್ತಿಗೆ ಕಳಂಕ,  ಅವರು ವೈದ್ಯಕೀಯ ವೃತ್ತಿಯನ್ನು ಸಮಾಜ ಸೇವೆ ಎಂದು ಸ್ವೀಕಾರಿಸಬೇಕು. ಇಂದಿನ ತರುಣ ವೈದ್ಯರು ಸೇವಾ ಮನೋ ಭಾವನೆಯಿಂದ, ನಿಸ್ವಾರ್ಥ ಸೇವೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಭಾರತದಲ್ಲಿ ವೈದ್ಯರ ಸೇವೆ ಎಲ್ಲಿ ಅವಶ್ಯಕತೆ ಇದೆಯೋ ಆ ಹಳ್ಳಿಗಳಲ್ಲಿ ವೃತ್ತಿಯನ್ನು ಆರಂಭಿಸಬೇಕು. ಖಾಸಗಿ ವೈದ್ಯರು ಇದರ ಕಡೆಗೆ ಗಮನಿಸಬೇಕು. ಆಯುರ್ವೇದ ವೈದ್ಯರು ಆಯು ರ್ವೇದವನ್ನು  ಜನಪ್ರೀಯಗೊಳಿಸ ದಿದ್ದರೆ ಇನ್ನಾರು ಅದನ್ನು ಜನಪ್ರೀಯಗೊ ಳಿಸಬೇಕು?,  ಇದರಲ್ಲಿ ದೊಡ್ಡ ಶಕ್ತಿ ಇದೆ. ಚರಕ, ಶುಶೃತ ರಂತಹ ಋಷಿಗಳಿಂದ ಆವಿಷ್ಕಾರಗೊಂಡ ಈ ಪದ್ದತಿಯನ್ನು ಮುಂದುವರಿಸಿದಿದ್ದರೆ ಇದಕ್ಕೆ ದ್ರೋಹ ಬಗೆದಂತೆ. ಅನಿವಾರ್ಯವಾದಾಗ ಮಾತ್ರ ಆಲೋಪತಿ ಪದ್ದತಿಯನ್ನು ಉಪಯೋಗಿಸಬೇಕು ಎಂದು ತಿಳಿಸಿದರು.

ಆಲೋಪತಿಯಂತೆ ಆಯುರ್ವೇ ದದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿಲ್ಲ ನಿಜ. ಆದರೆ ಇದು ನಮ್ಮ ದೇಶದ ದೊಡ್ಡ ಕೊಡುಗೆ ಇದನ್ನು ನಾವು ಬೆಳೆಸದಿದ್ದರೆ ಇದನ್ನು ಇನ್ನಾರು ಬೆಳೆಸುತ್ತಾರೆ?, 5ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ ಆಯುರ್ವೇದವನ್ನು ಕಡೆಗಣಿಸಬಾರದು. ನಮ್ಮ ಹಳ್ಳಿಗರಲ್ಲಿರುವ ವಿಶೇಷವಾದ ಆಯುರ್ವೇದ ಜ್ಞಾನವನ್ನು ವೈದ್ಯರು ಬಳಸಿಕೊಳ್ಳಬೇಕು ಎಂದರು.

ಈ ಕಾಲೇಜು ಬಡವರಿಗೆ  ಚಿಕಿತ್ಸೆ ಮತ್ತು ಉಚಿತ  ಆಯುರ್ವೇದಿ ಔಷಧಿಯನ್ನು ಉಚಿತವಾಗಿ ನೀಡಿ,  ಆಯುರ್ವೇದದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಈ ಕಾಲೇಜು ಮಾಡಬೇಕು ಎಂದು ಮನವಿ ಮಾಡಿದರು.

ಗದಗ ಜಿಲ್ಲಾ ಪರಿಷತ್ ಅಧ್ಯಕ್ಷ ವಾಸಣ್ಣ ಕುರಡಗಿಯವರು,ಶಿಕ್ಷಣವು ಗುಣಾತ್ಮಕವಾಗಿರಬೇಕು. ಆದರೆ ಅದು ವ್ಯಾಪಾರೀಕರಣಕ್ಕೆ ಇಳಿಯ ಬಾರದು. ಆಯುರ್ವೇದ ವೈದ್ಯರು ಆಯು ರ್ವೇದವನ್ನು ಜನರಲ್ಲಿ ವಿಶ್ವಾಸ ಮೂಡಿಸುವತ್ತ ಪ್ರಯತ್ನ ಮಾಡಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಭವಗಾನ ಮಹಾವೀರ ಆಯುರ್ವೇದಿಕ್ ಕಾಲೇಜ ಅಧ್ಯಕ್ಷ ಅಶೊಕಕುಮಾರ ಬಾಗಮಾರ ವಹಿಸಿದ್ದರು. ವೇದಿಕೆಯಲ್ಲಿ ಮಹಾವೀರ ಗೋಶಾಲೆಯ ಅಧ್ಯಕ್ಷ ರಿಕಬ್ ಚಂದ ಬಾಗಮಾರ, ಕಾಲೇಜ ಕಾರ್ಯದರ್ಶಿ ಅಝಿತ ಬಾಗಮಾರ, ನೇಮಿಚಂದ ಕಿವ್ಹಾಸರ, ಪ್ರಾಚಾರ್ಯ ಡಾ.ರವಿಂದ್ರ ಅರಹುಣಸಿ, ವಿದ್ಯಾರ್ಥಿ ಪ್ರತಿನಿಧಿ ಅಶ್ವಿನಿ ಅಜ್ಜಣ್ಣವರ ಇದ್ದರು. ಕಾರ್ಯಕ್ರಮವನ್ನು ಎ.ಡಿ.ಕೋಲ ಕಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT