ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸಪ್ತಾಹ

Last Updated 28 ಜನವರಿ 2017, 10:38 IST
ಅಕ್ಷರ ಗಾತ್ರ

ಬಾಗಲಕೋಟೆ: ಚಲನಚಿತ್ರಗಳು ಸಮಾಜದಲ್ಲಿ ನಡೆಯುವ ಘಟನಾವಳಿ ಪ್ರತಿಬಿಂಬಿಸುವ ಕೈಗನ್ನಡಿ ಆಗಿವೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ವಿಭಾಗದ ಆಯುಕ್ತ ಶಿವಯೋಗಿ ಕಳಸದ ಹೇಳಿದರು.

ವಾರ್ತಾ ಇಲಾಖೆ ವತಿಯಿಂದ  ನವನಗರದ ಚಂದನ ಚಲನಚಿತ್ರ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡ ಚಲನಚಿತ್ರೋತ್ಸವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಚಲನಚಿತ್ರ ಪ್ರಭಾವಶಾಲಿ ಮಾಧ್ಯ­ಮ. ಗ್ರಾಮೀಣ ಪ್ರದೇಶದ ಜಾನಪದ ನೃತ್ಯ, ಸಂಗೀತವು ಪ್ರಚಲಿತವಾಗಿದ್ದರೂ, ಚಲನಚಿತ್ರಗಳು ಜನರಿಗೆ ಹೆಚ್ಚು ಪರಿಣಾಮ ಬಿರುವ ಮಾಧ್ಯಮವಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.

ಚಲನಚಿತ್ರ ನಿರ್ಮಾಪಕ ಘನಶ್ಯಾಮ ಭಾಂಡಗೆ ಮಾತನಾಡಿ, ಇಂದು ತಯಾ­ರಾಗುತ್ತಿರುವ ಹಲವು ಚಲನಚಿತ್ರಗಳಲ್ಲಿ ಹೆಚ್ಚು ಕ್ರೂರತೆ ಇರುತ್ತೆ. ಅದರ ಮದ್ಯ ಹಲವು ಒಳ್ಳೇಯ ಸಿನಿಮಾಗಳು ಬರುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ, ಸಾರ್ವಜನಿಕರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಿಸುವ ಹಾಗೂ ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳು ಪ್ರದರ್ಶಿಸಲಾಗುತ್ತಿದೆ. ವಿದ್ಯಾರ್ಥಿ, ಯುವಕರು ಹಾಗೂ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಬಿ.ಗೊರವರ, ಕ್ಷೇತ್ರ ಸಮನ್ವಯಾಧಿಕಾರಿ ಪಾಟೀಲ, ಸಿ. ಮಣಿಯಾರ್, ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಪ್ರಹ್ಲಾದರಾವ್, ಸಂಜೀವ್ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT