ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಸಂಸ್ಕೃತಿ ಜಗತ್ತಿಗೆ ಮಾದರಿ’

Last Updated 30 ಜನವರಿ 2017, 5:31 IST
ಅಕ್ಷರ ಗಾತ್ರ
ಬಾಗಲಕೋಟೆ: ಇಲ್ಲಿನ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ ಆರ್‌ಸೆಟ್ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.
 
ಆರ್‌ಡಿಎಫ್ ಸಂಸ್ಥೆ ನಿದೇರ್ಶಕ ಡಾ.ಎಸ್.ಎನ್.ಹಂಚಿನಾಳ ಹಾಗೂ ಆರ್‌ಸೆಟ್ ಸಂಸ್ಥೆಯ ತರಬೇತಿ ನಿರ್ದೇಶಕ ಎಸ್.ಸಿ. ಬಿರಾದಾರ ನೆರವೇರಿಸಿದರು. ಈ ವೇಳೆ ಮಾತನಾಡಿದ ಎಸ್.ಸಿ. ಬಿರಾದಾರ, ದೇಶದ ಬೆಳವಣಿಗೆ, ಧರ್ಮ ಸಂಸ್ಕ್ರತಿ, ಕಲೆ ಜಗತ್ತಿಗೆ ಮಾದರಿಯಾಗಿದೆ ಎಂದರು.  
 
ಆಧ್ಯಕ್ಷತೆ ವಹಿಸಿದ್ದ ಡಾ. ಎಸ್. ಎನ್. ಹಂಚಿನಾಳ ಮಾತನಾಡಿ, ನಮ್ಮ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಈಗಿರುವ ಅನಿಷ್ಟಪದ್ದತಿಗಳಾದ ಭ್ರಷ್ಠಾಚಾರ, ಸ್ತ್ರೀಯರ ಮೇಲೆ ದೌರ್ಜನ್ಯ, ಬಾಲ್ಯ ವಿವಾಹ ವರದಕ್ಷಿಣೆ ಪಿಡುಗುಗಳನ್ನು ಹೊಗಲಾಡಿಸಬೇಕು ಎಂದರು.   
 
ಸಮಾರಂಭದ ಮಹಾನಂದಾ ಬಾಡ ನಿರೂಪಣೆ ಮಾಡಿದರು. ಬಿ.ಎಲ್. ಜಂಬಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT