ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮಲೆನಾಡು ಉತ್ಸವ

Last Updated 30 ಜನವರಿ 2017, 6:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಟ್ರಸ್ಟ್‌ನಿಂದ ಇದೇ 30ರಿಂದ ಫೆ.1ರವರೆಗೆ ಮಲೆ ನಾಡು ಉತ್ಸವವನ್ನು ನಗರದ ಕುವೆಂಪು ಕಲಾಮಂದಿ ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ರಮೇಶ್ ಬೇಗಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಸಂಜೆ 5.30ಕ್ಕೆ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಸಂಸ್ಥಾಪಕ ಮಣೂರು ವಾಸದೇವಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರು ಸುಬ್ಬರಾವ್‌ಅರಸ್ ಹಾಗೂ ಡಾ.ಜೆ.ಪಿ.ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಗುವುದು. ಉತ್ಸವದ ಸಂಚಾಲಕ ಡಿ.ಎಚ್. ನಟರಾಜ್, ಕಲ್ಕಟ್ಟೆ ಪುಸ್ತಕ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜ್ ಭಾಗವಹಿಸಲಿದ್ದಾರೆ ಎಂದರು.

ಅಂದು ಡಿಂಕು ಶೋ ಖ್ಯಾತಿಯ ಇಂದುಶ್ರೀ ಅವರಿಂದ ಮಾತನಾಡುವ ಗೊಂಬೆ, ಮಿಮಿಕ್ರಿ ಕಲಾವಿದ ಗೋಪಿ ಮತ್ತು ಪಟ್ಟಾಭಿರಾಮ್ ಸುಳ್ಯ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

30ರಂದು ಜಾನಪದ ಮಲೆನಾಡು ಎಂಬ ವಿಶಿಷ್ಟ ಜಾನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ. ಕೊಪ್ಪದ ನಾದಬ್ರಹ್ಮ ಸಂಸ್ಥೆಯ ಎಂ.ಕೆ.ಶ್ರೀನಿಧಿ ನಿರ್ದೇಶನದಲ್ಲಿ ದೇಸಿವಾದ್ಯ ಅಳವಡಿಸಿ ಜಾನಪದ ಹಾಡು ಹಬ್ಬದಲ್ಲಿ ಮಲ್ಲಿಗೆ ಸುಧೀರ್, ಬಿ. ರಶ್ಮಿ, ರೇಖಾ ಮೊದಲಾದವರು ಹಾಡಲಿದ್ದಾರೆ.

ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ಕಲಾವಿದೆ ಬಿ.ರಶ್ಮಿ ಮತ್ತು ಕೊಪ್ಪ ಗ್ರಾಮೀಣ ಪ್ರದೇಶದ ರಂಗ ಕಲಾವಿದ ಕೊ.ಸು.ನಾಗೇಶ್‌ ಅವರನ್ನು ಗೌರವಿಸಲಾಗುತ್ತಿದೆ. ಭಾರತೀ ತೀರ್ಥ ಟ್ರಸ್ಟ್ ನಿರ್ಮಿಸಿರುವ ಯಕ್ಷಗಾಯನ ಘರಾಣ ಎಂಬ ಆಡಿಯೋ ದಾಖಲೀಕರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಲೋಕಾರ್ಪಣೆ ಗೊಳಿಸುವರು. ಎಂ.ಎಸ್ ನಾಗೇಂದ್ರ, ಕಿರುತೆರೆ ಧಾರವಾಹಿ ಖ್ಯಾತಿಯ ವಿಕ್ರಂಸೂರಿ, ಮನೀತರಾವ್ ದಂಪತಿ ತಂಡದಿಂದ ಮೋಹಿನಿ ಭಸ್ಮಾಸುರ ಮತ್ತು ಪುಣ್ಯಕೋಟಿ ನೃತ್ಯನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಫೆ.1ರಂದು ಸಂಜೆ 5.30ಕ್ಕೆ ಯಕ್ಷಸಂಗೀತ ಕಾರ್ಯಕ್ರಮ, ಶಿವಕುಮಾರ್ ಆಚಾರ್ ಉಡುಪಿ ಅವರಿಂದ ಏಕಕಾಲಕ್ಕೆ ಏಳುಮದ್ದಲೆಗಳ ವಾದನ ನಡೆಯಲಿದೆ. ಜಯಪುರದ ಎ.ಜಿ.ಶಿವಾನಂದಭಟ್ ಹೇರೂರು ಭಾಗವತಿಕೆ ನಡೆಸುವರು.

ದಿ.ಕಲ್ಕುಳಿ ದೇವೇಂದ್ರ ಹೆಗ್ಡೆ ಸ್ಮಾರಕ ಕೃಷಿ ಪ್ರಶಸ್ತಿಯನ್ನು ಬಿ.ಸಿ.ಅರವಿಂದ್ ಭೂತನಕಾಡು ಅವರಿಗೆ ಪತ್ರಕರ್ತ ಸ.ಗಿರಿಜಾ ಶಂಕರ್ ಪ್ರದಾನ ಮಾಡಲಿದ್ದಾರೆ. ಕಲ್ಕುಳಿ ಜಗದೀಶ್‌ ಹೆಗ್ಡೆ ಪಾಲ್ಗೊಳ್ಳುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT