ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಪ್ರತಿಮೆಗೆ ಅವಮಾನ: ಖಂಡನೆ

ವೀರಶೈವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ
Last Updated 30 ಜನವರಿ 2017, 7:24 IST
ಅಕ್ಷರ ಗಾತ್ರ
ಮಂಡ್ಯ: ವಿಜಯಪುರ ಜಿಲ್ಲೆಯ ನಿಡೋಣಿ ಗ್ರಾಮದಲ್ಲಿ ಬಸವಣ್ಣನವರ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ವಿರೋಧಿಸಿ ಹಾಗೂ ‘ಅಲ್ಲಮ’ ಕನ್ನಡ ಸಿನಿಮಾದಲ್ಲಿ ಅಲ್ಲಮ ಪ್ರಭು ಅವರ ವಚನಕ್ಕೆ ಧಕ್ಕೆ ತರುವ ರೀತಿ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ವೀರಶೈವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ಮಾಡಿದರು.
 
ಸಮಾಜಕ್ಕೆ ಶ್ರೇಷ್ಠ ಸಂದೇಶ ಸಾರಿದ ಹಾಗೂ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿದ್ದ ಬಸವಣ್ಣನವರ ಪ್ರತಿಮೆಗೆ ವಿಜಯಪುರ ಜಿಲ್ಲೆಯ ನಿಡೋಣಿ ಎಂಬ ಗ್ರಾಮದಲ್ಲಿ ಅಪಮಾನ ಮಾಡಿರುವುದು ಖಂಡನೀಯ. ಅಪಮಾನ ಮಾಡಿದವ ರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
 
‘ಅಲ್ಲಮ’ ಕನ್ನಡ ಸಿನಿಮಾದಲ್ಲಿ ಅಲ್ಲಮ ಪ್ರಭು ಅವರ ವಚನಗಳನ್ನು ತಿರುಚುವ ಮೂಲಕ ಶರಣರ ಧಾರ್ಮಿಕ ತೆಗೆ ಧಕ್ಕೆ ತರುವಂತೆ ನಡೆದುಕೊಂಡಿ ರುವುದು ಎದ್ದು ಕಾಣುತ್ತದೆ. ರಾಜ್ಯ ಹಾಗೂ ಕೆಂದ್ರ ಸರ್ಕಾರ ಶರಣರ ತತ್ವ ಹಾಗೂ ವಚನಗಳನ್ನು ಉಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 
ಯುವ ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿವೆ. ಅಂತಹ ಸಂದೇಶಗಳನ್ನು ಸಮಾಜಕ್ಕೆ ನೀಡುವ ಮಂದಿಗೆ ಕಡಿವಾಣ ಹಾಕುವುದು ಅವಶ್ಯವಾಗಿದೆ. ಶರಣರ ಭಕ್ತಿ ಭಾವಕ್ಕೆ ಧಕ್ಕೆ ತರುವಂತ ಕೆಲಸಗಳನ್ನು ಯಾರೂ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
 
ಮಾಜಿ ಶಾಸಕರಾದ ಚಂದ್ರಶೇಖ ರಪ್ಪ, ಎಚ್‌.ಸಿ. ಬಸವರಾಜು, ಮಡಿಕೇರಿ ಜಿ.ಪಂ. ಸದಸ್ಯೆ ಕುಮುದಾ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಗುರುಪ್ರಸಾದ್‌, ಮಲ್ಲಿಕಾರ್ಜುನಯ್ಯ, ಆನಂದಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT