ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರ ಪ್ರಚೋದಕ ಗೋಷ್ಠಿಗಳ ಅಗತ್ಯ: ರಮೇಶ್

ಬೂದಿಗೆರೆಯಲ್ಲಿ ದೇವನಹಳ್ಳಿ ತಾಲ್ಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 30 ಜನವರಿ 2017, 8:51 IST
ಅಕ್ಷರ ಗಾತ್ರ

ವಿಜಯಪುರ: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ಫೆಬ್ರುವರಿ 3 ರಂದು ನಡೆಯುವ ಇಪ್ಪತ್ತೆರಡನೇ  ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ ನಡೆಯಲಿದ್ದು ಸಕಲ ಸಿದ್ಧತೆಗಳೂ ನಡೆದಿವೆ.

ಬೂದಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ದಿನಪೂರ್ತಿ ಕನ್ನಡ ನಾಡು, ನುಡಿ, ಭಾಷೆ, ನೆಲ ಜಲ, ಸಾಹಿತ್ಯ ಕುರಿತಾದ ನಾನಾ ಕಾರ್ಯಕ್ರಮಗಳು ನಡೆಯಲಿವೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವಿಜಯಪುರದ ಪ್ರಭಂಜನ ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಹಾಗೂ ಸಾಹಿತಿ ಡಾ. ವಿ.ನಾ. ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಜತೆ ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗಳು ಇಂತಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಜೀವನದ ಸ್ಥಿತಿಗತಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದರೂ ಮೂಲ ಸೌಕರ್ಯಗಳಿಗಾಗಿ ಜನರು ಪರದಾಡುವಂತಾಗಿದೆ. ಅಭಿವೃದ್ಧಿಯಿಂದ ಹಿಂದುಳಿದಿದೆ.

ನಿಮ್ಮ ದಿನನಿತ್ಯದ ಹವ್ಯಾಸಗಳೇನು ? ನಿಮ್ಮ ನೆಚ್ಚಿನ ಸ್ನೇಹಿತ ಯಾರು?

ದಿನಪತ್ರಿಕೆಗಳನ್ನು ಓದುವುದು ನನ್ನ ನೆಚ್ಚಿನ ಹವ್ಯಾಸ, ಹಾಗೂ ಭಾಷಣಗಳನ್ನು ಕೇಳುವುದು ತುಂಬಾ ಇಷ್ಟವಾಗುತ್ತದೆ. ನನ್ನ ನೆಚ್ಚಿನ ಸ್ನೇಹಿತ ನನ್ನ ತಂದೆ.
ನೀವು ಇಷ್ಟ ಪಡುವ ಪುಸ್ತಕ ಮತ್ತು ಸಿಹಿತಿಂಡಿ?

ಜರಗಹಳ್ಳಿ ಶಿವಶಂಕರ್ ಅವರ ಕೃತಿಗಳನ್ನು ಇಷ್ಟಪಡುತ್ತೇನೆ. ಕನ್ನಡ ಸಾಹಿತ್ಯದಲ್ಲಿನ ಆಧುನಿಕ ಶೈಲಿಗಳ ಅಧ್ಯಯನದಲ್ಲೀಗ ನಿರತನಾಗಿದ್ದೇನೆ. ಹಾಲು ಹೋಳಿಗೆ ಇಷ್ಟದ ಸಿಹಿ ತಿಂಡಿ.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯದ ಚಟುವಟಿಕೆ ಬಗ್ಗೆ ನಿಮ್ಮ ಅಭಿಪ್ರಾಯ? ಮನೆಮನೆ ಕವಿಗೋಷ್ಠಿಯ ಆಳ ಮತ್ತು ಹೂರಣವನ್ನು ಸಮಾಜಮುಖಿಯಾಗಿಸಬೇಕು. ವಿಚಾರ ಪ್ರಚೋದಕ ಗೋಷ್ಠಿಗಳ ಅಗತ್ಯವಿದೆ. ಮುಖ್ಯವಾಗಿ ಸಾಹಿತ್ಯ ಜನರ ನಡುವೆ ಅರಳಬೇಕಿದೆ ಎಂದರು.

ಡಾ. ರಮೇಶ್ ಪರಿಚಯ
ವಿಜಯಪುರದ  ವಿ.ರಾ. ನಾರಾಯಣಪ್ಪ ಹಾಗೂ ಟಿ. ವೆಂಕಟಮ್ಮನವರ ಪುತ್ರನಾಗಿ 1967 ರಲ್ಲಿ   ವಿಜಯಪುರ ಪಟ್ಟಣದಲ್ಲಿ ಜನನ. ಗುರಪ್ಪನಮಠದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶೈಕ್ಷಣಿಕ ಜೀವನ ಆರಂಭಿಸಿದ ಅವರು, ಜಿ.ಕೆ.ಬಿ.ಎಂ.ಎಸ್ ಸರ್ಕಾರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ಸರ್ಕಾರಿ  ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ್ದಾರೆ.

ಬೆಂಗಳೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಕೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪೂರೈಕೆ. ಜೆಸಿಐ ಸಂಸ್ಥೆಯ ಮೂಲಕ ಸೇವಾ ಕ್ಷೇತ್ರಕ್ಕೆ ಪಾದಾರ್ಪಣೆ. 2 ಬಾರಿ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
20 ವರ್ಷಗಳ ಕಾಲ ದೇವನಹಳ್ಳಿ ತಾಲ್ಲೂಕಿನ ಹರವನಹಳ್ಳಿ, ಕೋರಮಂಗಲ, ಬೈರಾಪುರ, ಧರ್ಮಪುರ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ಪುರಸ್ಕಾರ, ಪ್ರಶಸ್ತಿ ಬಂದಿವೆ. 2017 ರಲ್ಲಿ ಇಂಡಿಯನ್ ವರ್ಚುಯಲ್ ಯೂನಿರ್ವಸಿಟಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT