ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌಲಿಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿ’

Last Updated 31 ಜನವರಿ 2017, 6:50 IST
ಅಕ್ಷರ ಗಾತ್ರ
ಬೀದರ್‌: ಸಾಹಿತ್ಯದ ಆಳವಾದ ಅಧ್ಯಯನ ಮಾಡುವ ಮೂಲಕ ಮಹಿಳೆಯರು ಮೌಲಿಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹುಮನಾಬಾದ್ ಪುರಸಭೆ ಮುಖ್ಯಾಧಿಕಾರಿ  ಮೀನಾ ಬೋರಾಳಕರ್ ಸಲಹೆ ನೀಡಿದರು.
 
ಜಿಲ್ಲಾ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ  ‘ಮಹಿಳಾ ಕಾವ್ಯಮೇಳ’ ಉದ್ಘಾಟಿಸಿ ಅವರು ಮಾತನಾಡಿದರು. 
 
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲೀಲಾವತಿ ನಿಂಬೂರೆ ಮಾತನಾಡಿ,  ಕವಯತ್ರಿಯರು ಬದುಕಿನ ಮೌಲ್ಯಗಳನ್ನು ಹೆಚ್ಚಿಸುವ ಸಾಹಿತ್ಯ ರಚಿಸಬೇಕು ಎಂದರು.
 
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ  ಎಂ.ಎಸ್. ಮನೋಹರ ಮಾತನಾಡಿ,  ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಸಾಹಿತ್ಯ ರಚನೆಯಾಗಬೇಕು ಎಂದರು. 
 
ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿ, ಶಿಕ್ಷಕರಲ್ಲಿರುವ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ  ‘ಮಹಿಳಾ ಕಾವ್ಯಮೇಳ’ ವೇದಿಕೆಯಾಗಲಿದೆ ಎಂದು ಹೇಳಿದರು.
 
ಡಾ. ವಜ್ರಾ ಪಾಟೀಲ, ಪುಷ್ಪ ಕನಕ, ಉಮಾದೇವಿ ಬಾಬುರೆ, ರಾಜಮ್ಮ ಚಿಕ್ಕಪೇಟೆ, ಶ್ರೀದೇವಿ ಪಾಟೀಲ, ಸುನೀತಾ ಬಿರಾದಾರ, ಶೋಭಾ ಮಂಗಳೂರೆ, ಶ್ರೀದೇವಿ ಹೂಗಾರ, ಮಂಗಲ ಪೋಳ, ಮಲ್ಲಮ್ಮ ಚಿಂಚೋಳೆ, ಸಿದ್ದಮ್ಮ ಬಸಣೋರ, ಜಗದೇವಿ ದುಬಲಗುಂಡೆ, ವಿದ್ಯಾವತಿ ಹಿರೇಮಠ, ಡಾ. ಜಗದೇವಿ ತಿಪಶೆಟ್ಟಿ, ಗೌರಮ್ಮ ವಿರಕ್ತಮಠ, ವೇದಾವತಿ ಮಠಪತಿ, ಸುನೀತಾ ಕೂಡಲಿಕರ, ಪ್ರಭಾವತಿ ಪಾಟೀಲ, ಸಾಧನಾ ರಂಜೋಳಕರ, ವಚನಶ್ರೀ ಮೈನಳ್ಳಿ, ಸಂಗೀತಾ ಹುಡಗೆ, ಪುಣ್ಯಾವತಿ ವಿಸಾಜಿ  ಸ್ವರಚಿತ ಕವನ ವಾಚಿಸಿದರು. 
 
ಶಿಕ್ಷಣ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸುನೀತಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಸುನೀತಾ ದಾಡಗೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ವಿದ್ಯಾವತಿ ಬಲ್ಲೂರ ವಂದಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT