ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

ದಲಿತ ಸಂಘರ್ಷ ಸಮಿತಿ ಕೆಂಪು ಸೇನೆಯಿಂದ ಪ್ರತಿಭಟನೆ
Last Updated 31 ಜನವರಿ 2017, 9:18 IST
ಅಕ್ಷರ ಗಾತ್ರ
ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಅಬಕಾರಿ ನಿಯಮಗಳ ವಿರುದ್ಧ ಸೋಮವಾರ ದಲಿತ ಸಂಘರ್ಷ ಸಮಿತಿ ಕೆಂಪುಸೇನೆ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 
 
ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ.ರಾಜಣ್ಣ ,  ರಾಜ್ಯ ಸಮಿತಿ ಸದಸ್ಯರಾದ ಗುರುಸ್ವಾಮಿ, ಎಚ್‌.ಕೆ.ರಾಮದಾಸ್‌ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿನ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಕುಡುಕರ ಹಾವಳಿ ಮೀತಿ ಮೀರಿ ಬೆಳೆದಿದೆ. ಸಂಜೆ ವೇಳೆ ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡಲು  ಆಗದಂತಹ ಸ್ಥಿತಿ ಎದುರಾಗಿದೆ ಎಂದರು. 
 
ಪೊಲೀಸ್ ಕ್ರಮಕ್ಕೆ ಬೇಸರ: ತಾಲ್ಲೂಕಿನ 60ಕ್ಕೂ ಹೆಚ್ಚಿನ ಗ್ರಾಮ ಶಾಖೆಗಳನ್ನು ಹೊಂದಿರುವ ದಲಿತ ಸಂಘರ್ಷ ಸಮಿತಿಯ ಯಾವುದಾದರು ಸದಸ್ಯರಿಗೆ ತೊಂದರೆಯಾದಾಗ ಠಾಣೆಗೆ ದೂರುಗಳು ಹೋದರೆ ಸಾಧ್ಯವಾದಷ್ಟು ರಾಜಿ ಸಂಧಾನಗಳ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗಿದೆ. ಆದರೆ ಇದಕ್ಕೆ ಅವಕಾಶ ನೀಡದೆ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್‌ ಯಶವಂತಕುಮಾರ್‌, ಕಾನ್‌ಸ್ಟೆಬಲ್‌ ರಾಧಾಕೃಷ್ಣ ಇವರು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡುವ ಮೂಲಕ ಗ್ರಾಮಗಳಲ್ಲಿ ಶಾಂತಿ ಕದಡುವಂತೆ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.
 
ಜೆಡಿಎಸ್‌ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಮುಖಂಡರಾದ ಕೆಂಪಣ್ಣ, ಓಬಳೇಶ್‌, ಸಿದ್ದೇನಾಯಕನಹಳ್ಳಿ ಮುನಿರಾಜು, ಡಾ.ಬಿ.ಶ್ರೀನಿವಾಸ್‌, ವೀರಭದ್ರಗೌಡ, ಮುನಿರಾಜು, ಮನೋಹರ್‌, ಜಿ. ಗುರುಸ್ವಾಮಿ, ಸುಬ್ಬಣ್ಣ, ವೆಂಕಟಾ ಚಲಪತಿ ಮತ್ತಿತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT