ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕೌಟ್ಸ್ ನಿಂದ ಶಿಸ್ತು, ನಾಯಕತ್ವ’

Last Updated 31 ಜನವರಿ 2017, 9:19 IST
ಅಕ್ಷರ ಗಾತ್ರ
ಆನೇಕಲ್‌:  ‘ಭಾರತ್ ಸ್ಕೌಟ್‌್ಸ ಮತ್ತು ಗೈಡ್‌್ಸನಲ್ಲಿ ಭಾಗಿಗಳಾಗುವುದರಿಂದ ಶಿಸ್ತು, ದಕ್ಷತೆ, ನಾಯಕತ್ವ ಗುಣಗಳು ಬೆಳೆಯುತ್ತವೆ. ಸರ್ಕಾರಿ ಶಾಲೆಗಳಲ್ಲಿ ಸ್ಕೌಟ್‌್ಸ ಚಟುವಟಿಕೆಗಳು ಸುಗಮವಾಗಿ ನಡೆಯಲು ದಾನಿಗಳ ನೆರವು ಅವಶ್ಯಕ’ ಎಂದು  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಚಿನ್ನಸ್ವಾಮಿ ರೆಡ್ಡಿ ನುಡಿದರು. 
 
ಪಟ್ಟಣದ ಗುರುಭವನದಲ್ಲಿ ತಾಲ್ಲೂಕಿನ ಸರ್ಕಾರಿ ಶಾಲೆಗಳ ಸ್ಕೌಟ್, ಗೈಡ್ ವಿದ್ಯಾರ್ಥಿಗಳಿಗೆ ಉಚಿತ ಸ್ಕೌಟ್ ಗೈಡ್ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.  
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳ ಪೈಕಿ ಕೇವಲ ಶೇಕಡ ಎರಡರಷ್ಟು ಮಕ್ಕಳು ಮಾತ್ರ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯಲ್ಲಿ ಸೇರಿದ್ದಾರೆ. ಎಲ್ಲರೂ ಈ ಸಂಸ್ಥೆಯಲ್ಲಿ ಸೇರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳೂ ಇದ್ದು ಬಡ ಕುಟುಂಬದ ಹಿನ್ನೆಲೆಯಿಂದ ಬರುವ ಮಕ್ಕಳು ಸಮವಸ್ತ್ರ ಹೊಲಿಸಿಕೊಳ್ಳಲು ಆಗದೇ ಇರುವುದೂ ಸಹ ಒಂದು ಕಾರಣವಾಗಿದೆ ಎಂದರು.
 
ಇದನ್ನು ಮನಗಂಡಿರುವ ಅರಕೆರೆಯ ಮಾರುತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡಿರುವುದು ಸ್ಕೌಟ್‌್ಸ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ ಎಂದರು.
 
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎ.ಎನ್. ನರೇಂದ್ರ ಕುಮಾರ್ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮಕ್ಕಳ ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಬಾಂಧವ್ಯಗಳ ಅಭಿವೃದ್ದಿಗೆ ಪೂರಕವಾಗಿದೆ. ಮಕ್ಕಳು ಇಲ್ಲಿ ಶಿಸ್ತು, ಸಮಾನತೆ, ಮಾನವೀಯತೆ, ಸಹಬಾಳ್ವೆಗಳಂತಹ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸ್ವಾವಲಂಬನೆಯ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ  ಎಂದು ಅವರು ತಿಳಿಸಿದರು.
 
ಕ್ಷೇತ್ರ ಸಮನ್ವಯಾಧಿಕಾರಿ ಶಂಕರ್ ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ. ಗವಿರಂಗಯ್ಯ, ಎ.ಇ.ಸಿ.ಎಸ್ ಮ್ಯಾಗ್ನೋಲಿಯಾ ಮಾರುತಿ ಪಬ್ಲಿಕ್ ಶಾಲೆಯ ಪೋಷಕರಾದ ಪರಶುರಾಮ್ ಕುಲಕರ್ಣಿ, ಮಹೇಶ್ ಹೆಬ್ಬಾರ್, ಶೈಲ ಮದ್ದಾಲಿ, ಸ್ಕೌಟ್ ಸಂಸ್ಥೆಯ ತಾಲ್ಲೂಕು ಖಜಾಂಚಿ ಸಿ. ಲಕ್ಷ್ಮೀಕಾಂತ ರಾಜು, ಜಂಟಿ ಕಾರ್ಯದರ್ಶಿ ಆರ್. ಸುಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಶಾಂತಮ್ಮ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT