ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಕ್ಯುಮೆಂಟ್‌ಗೆ ಸಹಕಾರಿ ಗೂಗಲ್ ಡಾಕ್ಸ್

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆಲ್ಲಾ ಅಂತರ್ಜಾಲದ ಅನುಕೂಲಗಳೂ ಹೆಚ್ಚಾಗಿವೆ. ಬಹುತೇಕರು ಇಮೇಲ್ ಚೆಕ್ ಮಾಡುವುದು ಈಗ ಸ್ಮಾರ್ಟ್‌ಫೋನ್‌ಗಳ ಮೂಲಕವೇ. ಇಮೇಲ್ ಚೆಕ್ ಮಾಡುವುದು, ರಿಪ್ಲೇ ಬರೆಯುವುದು ಮೊಬೈಲ್‌ಗಳ ಮೂಲಕ ಈಗ ಸುಲಭ ಸಾಧ್ಯ.
ಆದರೆ ಇಮೇಲ್‌ಗಳ ಮೂಲಕ ಬರುವ ಡಾಕ್ಯುಮೆಂಟ್ ಫೈಲ್‌ಗಳನ್ನು ತೆರೆಯಲು ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಸಪೋರ್ಟಿಂಗ್ ರೀಡರ್ ಇನ್‌ವೋಲ್ಟ್ ಇರುವುದಿಲ್ಲ. ಅಂತಹ ಸ್ಮಾರ್ಟ್‌ಫೋನ್‌ ಹೊಂದಿರುವವರು ಡಾಕ್ಯುಮೆಂಟ್ ಫೈಲ್ ಗಳನ್ನು ತೆರೆಯಲು ಲ್ಯಾಪ್‌ಟಾಪ್ ಇಲ್ಲವೇ ಪಿಸಿ ಬಳಸುವುದು ಅನಿವಾರ್ಯ. ಆದರೆ, ಮೊಬೈಲ್‌ಗಳಲ್ಲಿ ಡಾಕ್ಯುಮೆಂಟ್ ಫೈಲ್ ತೆರೆಯುವಂತಹ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡರೆ ಇಂತಹ ಫೈಲ್ ತೆರೆಯುವ ಸಲುವಾಗಿಯೇ ಪಿಸಿ ಮೊರೆ ಹೋಗುವುದನ್ನು ತಪ್ಪಿಸಬಹುದು.


ಡಾಕ್ಯುಮೆಂಟ್ ಫೈಲ್‌ಗಳನ್ನು ತೆರೆಯಲು ಗೂಗಲ್ ಡಾಕ್ಸ್ ಆ್ಯಪ್ ಸಹಕಾರಿ. ಬಹುತೇಕ ವರ್ಡ್ ಫೈಲ್‌ಗಳನ್ನು ತೆರೆಯಲು ಗೂಗಲ್ ಡಾಕ್ಸ್ ಸಪೋರ್ಟ್ ಮಾಡುತ್ತದೆ. ಡಾಕ್ಯುಮೆಂಟ್ ಫೈಲ್ ತೆರೆಯುವ ಜತೆಗೆ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದರೆ ಅದನ್ನು ತಿದ್ದುವ (edit) ಅವಕಾಶವೂ ಗೂಗಲ್ ಡಾಕ್ಸ್‌ನಲ್ಲಿದೆ. ಗೂಗಲ್ ಡಾಕ್ಸ್‌ನಲ್ಲಿ ಪ್ರಿಂಟ್ ಲೇಔಟ್ ನೋಡುವ ಆಯ್ಕೆಯೂ ಇರುವುದರಿಂದ ಡಾಕ್ಯುಮೆಂಟ್ ಫೈಲ್ ಪುಟ ಹೇಗೆ ಕಾಣುತ್ತದೆ ಎಂಬುದನ್ನು ಮೊಬೈಲ್‌ನಲ್ಲೇ ನೋಡಬಹುದು. ಅಲ್ಲದೆ ಡಾಕ್ಯುಮೆಂಟ್ ಫೈಲ್‌ನಲ್ಲಿ ಟೆಕ್ಸ್ಟ್‌ ಫಾಂಟ್ ಹಾಗೂ ಗಾತ್ರವನ್ನು ಬದಲಿಸಬಹುದು. ಫೈಲ್ ಅನ್ನು ಪಿಡಿಎಫ್ ಆಗಿ ಕೂಡ ಸೇವ್ ಮಾಡಿಕೊಳ್ಳಬಹುದು.

ಗೂಗಲ್ ಡಾಕ್ಸ್ ಆ್ಯಪ್ ಮೂಲಕವೇ ಹೊಸ ವರ್ಡ್ ಫೈಲ್ ರಚಿಸಬಹುದು. ಮೊಬೈಲ್‌ನಲ್ಲಿ ರಚಿಸಿದ ಈ ಫೈಲ್‌ಗಳನ್ನು ಇಮೇಲ್ ಮೂಲಕ ಬೇಕೆಂದವರಿಗೆ ಕಳಿಸಬಹುದು. ನಿಮ್ಮ ಮೊಬೈಲ್ ಡಾಕ್ಯುಮೆಂಟ್ ಫೈಲ್‌ಗಳಿಗೆ ಸಪೋರ್ಟ್ ಮಾಡುತ್ತಿಲ್ಲವಾದರೆ ಗೂಗಲ್ ಸ್ಟೋರ್‌ಗೆ ಹೋಗಿ ಡಾಕ್ಸ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ, ಅದರ ಅನುಕೂಲ ಪಡೆಯಿರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT