ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 2–2–1967

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ರಾಷ್ಟ್ರದೆಲ್ಲೆಡೆ ಸಕ್ಕರೆ ಬೆಲೆ ಏರಿಕೆ
ನವದೆಹಲಿ, ಫೆ. 1–
ಸಕ್ಕರೆಯ ಕಾರ್ಖಾನೆ ಬೆಲೆಗಳನ್ನು ಹೆಚ್ಚಿಸಿ ಕೇಂದ್ರ ಸರ್ಕಾರವು ಇಂದು ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ.
ಮೈಸೂರಿನ ಬಹುತೇಕ ಭಾಗಗಳಲ್ಲಿ ಬೆಲೆಗಳು ಕ್ವಿಂಟಾಲ್‌ಗೆ ಸುಮಾರು 12 ರೂಪಾಯಿನಷ್ಟು ಹೆಚ್ಚಲಿದೆ.

ಚೀನದಿಂದ ರಷ್ಯನರ ಕುಟುಂಬಗಳ ಸಾಗಣೆ
ಪೀಕಿಂಗ್‌, ಫೆ. 1–
ಪೀಕಿಂಗ್‌ನಲ್ಲಿರುವ ರಷ್ಯನ್‌ ರಾಜತಂತ್ರಜ್ಞರ ಮತ್ತು ಪತ್ರಿಕೋದ್ಯೋಗಿಗಳ ಕುಟುಂಬದವರನ್ನು ಕ್ರಮೇಣ ಚೀನದಿಂದ ಸಾಗಿಸಲಾಗುವುದೆಂದು ಅಧಿಕೃತ ವಲಯಗಳು ಇಂದು ತಿಳಿಸಿದುವು. ಈ ಸಾಗಣೆ ಕಾರ್ಯ ಶನಿವಾರ ಆರಂಭವಾಗುವುದು. ಹೀಗೆ ಚೀನ ಬಿಡುವವರಲ್ಲಿ ಪತ್ರಕರ್ತರ ಕುಟುಂಬದವರೇ ಮೊದಲಿಗರು.

ರಾಯಭಾರಿ ಕಚೇರಿಯಲ್ಲಿರುವ ಸೋವಿಯತ್‌ ಶಾಲೆಯನ್ನು ಈ ವಾರಾಂತ್ಯದಲ್ಲಿ ಮುಚ್ಚಿಬಿಡಲಾಗುವುದು. ಈ ಶಾಲೆಯಲ್ಲಿ ಪೂರ್ವ ಯೂರೋಪ್‌ ರಾಷ್ಟ್ರೀಯರ ಮಕ್ಕಳೂ ಕಲಿಯುತ್ತಿದ್ದಾರೆ. ಆರು ದಿನಗಳಿಂದ ಪ್ರತಿನಿತ್ಯ ಸೋವಿಯತ್‌ ಮತ್ತಿತರ ರಾಷ್ಟ್ರಗಳ ರಾಯಭಾರಿ ಕಚೇರಿಗಳ ಮುಂದೆ ಪ್ರದರ್ಶನಗಳು ನಡೆಯುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT