ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ನೀರು ತುಂಬಿಸಲು ಒತ್ತಾಯ

ಕಪ್ಪತಗುಡ್ಡ: ಸಂರಕ್ಷಿತ ಮೀಸಲು ಸ್ಥಾನಮಾನ ಮುಂದುವರಿಸುವಂತೆ ಆಗ್ರಹ
Last Updated 2 ಫೆಬ್ರುವರಿ 2017, 5:51 IST
ಅಕ್ಷರ ಗಾತ್ರ

ಗದಗ: ಮುಂಡರಗಿ ತಾಲ್ಲೂಕಿನ ಗ್ರಾಮ­ಗಳ ಕೆರೆಗಳಿಗೆ ನೀರು ತುಂಬಿಸಬೇಕು, ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ಮೀಸಲು ಅರಣ್ಯ ಸ್ಥಾನಮಾನ ಮುಂದು­ವರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸ್ಥಳೀಯ ಕಿತ್ತೂರು ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಡಳಿತ ಭವನದ ಮುಖ್ಯದ್ವಾರ ಎದುರು ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮುಂಡರಗಿ ತಾಲ್ಲೂಕಿನ ಚಿಕ್ಕವ­ಡ್ಡಟ್ಟಿ, ಕೆಲೂರು, ಮುರಡಿ ಹಾಗೂ ಮುರಡಿ ತಾಂಡಾ, ಗುಡ್ಡದ ಬೂದಿ­ಹಾಳ, ಬಾಗೇವಾಡಿ, ಮಲ್ಲಿಕಾರ್ಜುನ­ಪುರ, ಜಾಲವಾಡಗಿ ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಲ್ಲ. ಹತ್ತು ವರ್ಷಗಳಿಂದ ಸಂಬಂಧಪಟ್ಟ ಅಧಿ­ಕಾರಿಗಳಿಗೆ ಒತ್ತಾಯಿಸಿದರೂ ಪ್ರಯೋ­ಜನ­ವಾಗಿಲ್ಲ ಎಂದು ಪ್ರತಿಭಟ­ನಾಕರರು ಆರೋಪಿಸಿದರು.

ಮಳೆ ಕೊರತೆಯಿಂದ ಗ್ರಾಮಗಳಲ್ಲಿ ನೀರಿನ ಮೂಲಗಳೇ ಇಲ್ಲದಂತಾಗಿವೆ. ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಕೃಷಿ, ಜನ-, ಜಾನು­ವಾರುಗಳಿಗೂ ನೀರಿನ ಸಮಸ್ಯೆ ಉಂಟಾ­ಗಿದೆ. ಗ್ರಾಮಗಳ ಕೆಲವರು ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ ಎಂದರು.

ನಂತರ ಆಕ್ರೋಶಗೊಂಡ ರೈತರು ಜಿಲ್ಲಾಡಳಿತ ಭವನ ಮುಂಭಾಗದ ಹೆದ್ದಾರಿ ತಡೆಯಲು ಮುಂದಾದರು. ಆಗ ಪೊಲೀಸರು ರಸ್ತೆ ತಡೆ ನಡೆಸದಂತೆ ರೈತರಿಗೆ ತಿಳಿಸಿದರು. ಈ ವೇಳೆ ಪೊಲೀ­ಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಹತ್ತು ನಿಮಿಷ ಹೆದ್ದಾರಿ ತಡೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ.ಗದ್ಯಾಳ ರೈತ ಮುಖಂಡರನ್ನು ಕರೆಸಿಕೊಂಡು, ಅಹವಾಲು ಆಲಿಸಿದ ಅವರು, ಮುಂಡರಗಿ ತಾಲ್ಲೂಕಿನ ಗ್ರಾಮಗಳ ಕೆರೆಗಳಿಗೆ ನದಿ ನೀರು ತುಂಬಿಸುವ ಕ್ರಿಯಾ ಯೋಜನೆ ಸಿದ್ಧಪ­ಡಿಸಲಾಗಿದೆ. ಅನುದಾನ ಬೇಡಿಕೆ ಒಳಗೊಂಡ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ, ಮಲ್ಲಿಕಾರ್ಜುನ ಹಣಜಿ, ನಾಗಪ್ಪ ವಾರದ, ವಿ.ಬಿ.ಪಾಟೀಲ, ಲೋಕನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಸವರಾಜ ತಿಮ್ಮಾಪುರ, ಬಸಣ್ಣ ಬೋಳಗುಂಡಣ್ಣವರ, ನಾಗರಾಜ ಇಟಗಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT