ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಅಕಾಡೆಮಿ ಶಿಷ್ಯವೇತನ; ಕೆಎಲ್ಇ ವಿದ್ಯಾರ್ಥಿಗಳು ಆಯ್ಕೆ

Last Updated 2 ಫೆಬ್ರುವರಿ 2017, 5:57 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಈ ವರ್ಷದ ಶಿಷ್ಯವೇತನಕ್ಕೆ ಕೆಎಲ್ಇ ವಿಶ್ವವಿದ್ಯಾಲ ಯದ ಸಂಗೀತ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಯೋಗೇಶ್ ರಾಮದಾಸ (ಹಿಂದೂಸ್ತಾನಿ ಸಂಗೀತದಲ್ಲಿ ಹಾರ್ಮೋ ನಿಯಂ), ಮೃತ್ಯುಂಜಯ ಮಾಸ್ತಮರಡಿ (ಹಿಂದೂಸ್ತಾನಿ ಗಾಯನ), ರೂಪಾ ಖಡಗಾಂವಿ (ಸುಗಮ ಸಂಗೀತ), ಕಲ್ಯಾಣಿ ಗಜಗೇಶ್ವರ (ಹಿಂದೂಸ್ತಾನಿ ಗಾಯನ) ಅವರು ಆಯ್ಕೆಯಾಗಿದ್ದಾರೆ.

ಶಿಷ್ಯವೇತನದ ಮೊತ್ತ ₹ 10,000 ಸರ್ಕಾರ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ತಿಳಿಸಿದೆ. ಈ ಸಾಧನೆಗೆ ಕೆಎಲ್ಇ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರಭಾಕರ ಕೋರೆ,  ಕುಲಪತಿ ಡಾ. ಚಂದ್ರಕಾಂತ ಕೋಕಾಟೆ, ಕುಲಸಚಿವ ವಿ.ಡಿ. ಪಾಟೀಲ ಹಾಗೂ ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT