ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಭಾರತಿಯ ಅಭ್ಯಾಸವರ್ಗ ಇಂದಿನಿಂದ

Last Updated 2 ಫೆಬ್ರುವರಿ 2017, 6:05 IST
ಅಕ್ಷರ ಗಾತ್ರ

ಶಿರಸಿ: ಸಹಕಾರಿ ಕ್ಷೇತ್ರದ ಸಂಘಟನೆಯ ಮೂಲಕ ಪರಿಣಾಮಕಾರಿ ನಾಯಕತ್ವ ನಿರ್ಮಾಣದ ಉದ್ದೇಶ ಹೊಂದಿರುವ ಸಹಕಾರ ಭಾರತಿ ಸಂಘಟನೆ ವತಿಯಿಂದ ಸಹಕಾರಿ ರಂಗದ ಕಾರ್ಯಕರ್ತರಿಗೆ ಇದೇ 3 ಮತ್ತು 4 ರಂದು ತಾಲ್ಲೂಕಿನ ಗೋಳಿಯ ಸಿದ್ಧಿವಿನಾಯಕ ದೇವಸ್ಥಾನ ದಲ್ಲಿ ಅಭ್ಯಾಸ ವರ್ಗ ಸಂಘಟಿಸಲಾಗಿದೆ ಎಂದು ಸಹಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನರೇಂದ್ರ ಹೊಂಡಗಾಶಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳ ಸಹಕಾರಿ ಕಾರ್ಯಕರ್ತರಿಗೆ ಈ ಅಭ್ಯಾಸ ವರ್ಗ ಆಯೋಜಿಸಲಾಗಿದೆ. ಸಹಕಾರಿ ರಂಗದಲ್ಲಿ ಆಸಕ್ತಿಯುಳ್ಳವರನ್ನು ಸದಸ್ಯರ ನ್ನಾಗಿ ಮಾಡಿಕೊಂಡು ರಾಷ್ಟ್ರೀಯ ಮತ್ತು ಸಾಮಾಜಿಕ ಜವಾಬ್ದಾರಿಯ ತಿಳಿ ವಳಿಕೆ, ಸಂಸ್ಕಾರವಂತ ಸಹಕಾರಿ ಕಾರ್ಯ ಕರ್ತರ ಪಡೆ ನಿರ್ಮಾಣ, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳನ್ನು ರಚಿಸಿ ಸಹಕಾರಿ ಕ್ಷೇತ್ರದಲ್ಲಿ ವ್ಯಕ್ತಿ ನಿರ್ಮಾಣದ ಉದ್ದೇಶದಿಂದ ಅಭ್ಯಾಸ ವರ್ಗಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ಕರುಣಾಕರ ನಂಬಿ ಯಾರ್, ಸಹಸಂಘಟನಾ ಪ್ರಮುಖ ಹರೀಶ ಆಚಾರ್, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಭಾಗವಹಿಸು ವರು. ನಾಯಕತ್ವ ಹಾಗೂ ಸಹಕಾರಿ ರಂಗ, ಕನಿಷ್ಠ ನಗದು ಆಧಾರಿತ ಆರ್ಥಿಕತೆ, ಸಹಕಾರಿ ಕಾನೂನು ಹಾಗೂ ಸಹಕಾರಿ ಕಾರ್ಯಕರ್ತ ವಿಷಯಗಳ ಮೇಲೆ ಗೋಷ್ಠಿ ನಡೆಯಲಿದೆ ಎಂದರು.

ಕೆ.ಡಿ.ಸಿ.ಸಿ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿ, ಸಹಕಾರಿ ಕ್ಷೇತ್ರದ ಸದಸ್ಯರಿಗೆ ಪ್ರಸಕ್ತ ಪರಿಸ್ಥಿತಿಯಲ್ಲಿ ವ್ಯವಹಾರ ಮತ್ತು ಕಾನೂನು ಬದಲಾ ವಣೆ ಪರಿಚಯ ಮಾಡುವ ಜೊತೆಗೆ ಅವರ ಕೌಶಲ ಅಭಿವೃದ್ಧಿಪಡಿಸಲು ಈ ಪ್ರಶಿಕ್ಷಣ ವರ್ಗ ಹಮ್ಮಿಕೊಳ್ಳಲಾಗಿದೆ. ಸುಮಾರು  150–-200 ಶಿಬಿರಾರ್ಥಿಗಳು ಘಟ್ಟದ ಮೇಲಿನ ತಾಲ್ಲೂಕುಗಳಿಂದ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಕದಂಬ ಮಾರ್ಕೆಟಿಂಗ್ ಸೌಹಾರ್ದ ಸೊಸೈಟಿ ಅಧ್ಯಕ್ಷ ಶಂಭುಲಿಂಗ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ ದಾಸ ನಾಯಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT