ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷದ ವಿರುದ್ಧ ಹೇಳಿಕೆ: ಹೈಕಮಾಂಡ್ ಕ್ರಮ’

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆ
Last Updated 2 ಫೆಬ್ರುವರಿ 2017, 6:29 IST
ಅಕ್ಷರ ಗಾತ್ರ

ಉಡುಪಿ: ಹಿರಿಯ ಮುಖಂಡರು ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿರುವ ವಿಷಯವನ್ನು ಎಐಸಿಸಿ ಗಮನಕ್ಕೆ ತರಲಾಗಿದ್ದು, ಅಂತಹವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ಹೈಕ ಮಾಂಡ್‌ ನಿರ್ಧರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಜನಾರ್ದನ ಪೂಜಾರಿ, ಜಾಫರ್‌ ಷರೀಫ್‌, ಎಸ್‌.ಎಂ. ಕೃಷ್ಣ ಅವರು ಪಕ್ಷ ಹಾಗೂ ಮುಖ್ಯಮಂತ್ರಿ ಅವರ ವಿರುದ್ಧ ಹೇಳಿಕೆ ನೀಡುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಪಕ್ಷದಲ್ಲಿ ದೊಡ್ಡ ಸ್ಥಾನ ಅಲಂಕ ರಿಸಿದ ಹಾಗೂ ಈಗ ಕಿರಿಯರಿಗೆ ಮಾರ್ಗದರ್ಶನ ನೀಡುವಂತಹ ಸ್ಥಾನದ ಲ್ಲಿರುವವರೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ನಿಜವಾಗಿಯೂ ಪಕ್ಷದ ಅನುಯಾಯಿಗಳಾಗಿದ್ದರೆ ಹಾಗೂ ಪಕ್ಷಕ್ಕೆ ಯಾವುದೇ ರೀತಿಯ ಧಕ್ಕೆ ಆಗಬಾರದೆಂಬ ಉದ್ದೇಶ ಇದ್ದರೆ ಇಂತಹ ಹೇಳಿಕೆ ನೀಡಬಾರದು.
ಜನಾರ್ದನ ಪೂಜಾರಿ ಅವರು ಸಹ ಪಕ್ಷದ ದೊಡ್ಡ ಹುದ್ದೆಗಳಲ್ಲಿ ಇದ್ದವರು, ಅವರೇ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ವಿಷಯವನ್ನು ಈಗಾಗಲೇ ಎಐಸಿಸಿ ಗಮನಕ್ಕೆ ತರಲಾಗಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡಲು ಇಷ್ಟಪಡುವುದಿಲ್ಲ ಎಂದರು.

ಎಸ್‌.ಎಂ. ಕೃಷ್ಣ ಅವರು ಪಕ್ಷವನ್ನು ತ್ಯಜಿಸಿದ್ದು ತುಂಬಾ ನೋವಿನ ವಿಷಯ. ಈಗ ಅವರ ವಿರುದ್ಧವೇ ನಾವು ಮಾತನಾಡುವ ಸನ್ನಿವೇಶ ಸೃಷ್ಟಿ ಯಾಗಿರುವುದು ವಿಷಾದನೀಯ. ಅವ ರಿಗೂ ಸಹ ಪಕ್ಷ ಎಲ್ಲವನ್ನೂ ನೀಡಿದೆ, ಆದರೆ ಪ್ರಧಾನಮಂತ್ರಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಆಗುವ ಅವರ ಆಸೆಯನ್ನು ಈಡೇರಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಅದರಿಂದ ಅವರಿಗೆ ನೋವಾಗಿರಬಹುದು. ಅವರ ಆಸೆ ಗಳನ್ನು ಭಗವಂತ ಈಡೇರಿಸಲಿ, ಅವರು ಎಲ್ಲಿಗೇ ಹೋದರೂ ಒಳ್ಳೆಯ ಸ್ಥಾನಮಾನ ಸಿಗಲಿ ಎಂದು ಅವರು ಹೇಳಿದರು.

ಪಕ್ಷಕ್ಕಾಗಿ ಲಕ್ಷಾಂತರ ಕಾರ್ಯ ಕರ್ತರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿಗೆ ಯಾವುದೇ ಸ್ಥಾನ– ಮಾನ ಅಧಿಕಾರ ಸಿಕ್ಕಿಲ್ಲ. ಆದರೂ ಸಿದ್ಧಾಂತದ ಆಧಾರದ ಮೇಲೆ ಅವರು ಕೆಲಸ ಮಾಡುತ್ತಿದ್ದಾರೆ. ಪಕ್ಷದಿಂದ ಎಲ್ಲ ಅವಕಾಶವನ್ನು ಪಡೆದವರು ಪಕ್ಷದ ವಿರುದ್ಧವೇ ಹೇಳಿಕೆ ನೀಡುವುದು ಸರಿ ಯಲ್ಲ. ಕೆಲವು ಮುಖಂಡರಿಗೆ ಹೆಚ್ಚಿನ ನಿರೀಕ್ಷೆ ಇದ್ದರೆ ಏನೂ ಮಾಡಲಾಗದು  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT