ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕಡೆ ಶುದ್ಧ ನೀರಿನ ಘಟಕಗಳ ಸ್ಥಾಪನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಫೆ.11 ರಂದು ಶಂಕುಸ್ಥಾಪನೆ
Last Updated 2 ಫೆಬ್ರುವರಿ 2017, 6:50 IST
ಅಕ್ಷರ ಗಾತ್ರ
ಶಿರಾ: ಪರಿಶಿಷ್ಟ ಜಾತಿ ಮತ್ತು ಪಂಗಡ ದವರು ಹೆಚ್ಚಾಗಿ ವಾಸ ಮಾಡುತ್ತಿರುವ ವಾರ್ಡುಗಳಲ್ಲಿ  10 ಕಡೆ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸುವಂತೆ ಸಚಿವ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
ನಗರಸಭೆ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.
 
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಗತ್ಯ ಇರುವ ಕಡೆ ಕೊಳವೆಬಾವಿಗಳನ್ನು ಕೊರೆಸಿ ನೀರು ಪೂರೈಕೆ ಮಾಡಿ ಎಂದು ಸೂಚಿಸಿದರು. 
 
ಅಕ್ರಮ ಸಕ್ರಮ : ಅಕ್ರಮ ಸಕ್ರಮಕ್ಕಾಗಿ 94 ಸಿಸಿ ಅಡಿಯಲ್ಲಿ 2 ಸಾವಿರ ಅರ್ಜಿಗಳು ಬಂದಿವೆ ಎಂದು ತಹಶೀಲ್ದಾರ್ ಎಸ್.ಸಿ.ಹೊನ್ನಶ್ಯಾಮೇಗೌಡ ಹೇಳಿದಾಗ ಈ ಅಕ್ರಮ ಸಕ್ರಮದಲ್ಲಿ 30*20 ಅಡಿ ನಿವೇಶನವನ್ನು ನಗರ ಪ್ರದೇಶದಲ್ಲಿ ಸಕ್ರಮ ಮಾಡಲು ಅವಕಾಶ ಇದೆ. ಮುಂದಿನ ವಿಧಾನ ಸಭೆ ಅಧಿವೇಶನದಲ್ಲಿ ಇದಕ್ಕೆ ತಿದ್ದುಪಡಿ ತರಲು ಮಸೂದೆ ಮಂಡಿಸಿ 30*40 ನಿವೇಶನ ಸಕ್ರಮ ಮಾಡಿಕೊಡಲು ಕಾನೂನು ರೂಪಿಸಲಾಗುವುದು. ಈ ಬಗ್ಗೆ ಅರ್ಜಿ ಪರಿಶೀಲಿಸವಂತೆ  ಸೂಚಿಸಿದರು. 
 
ನಿವೇಶನ : ತಾಲ್ಲೂಕಿನಲ್ಲಿ 16500 ಮಂದಿ ನಿವೇಶನ ರಹಿತರಿದ್ದು ಈಗಾ ಗಲೇ 970 ಎಕರೆ ಜಾಗವನ್ನು ನಿವೇಶನ ಹಂಚಿಕೆಗಾಗಿ ಗುರ್ತಿಸಲಾಗಿದೆ. ಎಲ್ಲರಿ ಗೂ ನಿವೇಶನ ನೀಡಿ ಮನೆ ಕಟ್ಟಿಸಿ ಕೊಡಬೇಕು ಎನ್ನುವುದು ನನ್ನ ಕನ ಸಾಗಿದೆ ಮನೆ ಮಂಜೂರು ಮಾಡಿಸಲು ಪ್ರಯತ್ನ ನಡೆಸಲಾಗುವುದು ಎಂದರು. 
 
ಗುಂಪು ಮನೆ : ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಹಿಂಭಾಗವಿರುವ 14 ಎಕರೆ ಜಾಗದಲ್ಲಿ ಸುಮಾರು 1500 ಗುಂಪು ಮನೆಗಳ ನಿರ್ಮಾಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ನಗರದಲ್ಲಿ 12 ಎಕರೆ ಪ್ರದೇಶದಲ್ಲಿ ₹ 10 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ಕಾಲೇಜು ವಿದ್ಯಾರ್ಥಿಗಳಿಗೆ 7.80 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ, ಚಂಗಾವರ ರಸ್ತೆಯಲ್ಲಿ ₹ 2.80 ಕೋಟಿ ವೆಚ್ಚದಲ್ಲಿ ಬಿಸಿಎಂ ವಿದ್ಯಾರ್ಥಿ ನಿಲಯ ಮತ್ತು ಬರಗೂರು ಗ್ರಾಮದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಅಸ್ಪತ್ರೆ ಕಟ್ಟಡದ ಕಾಮಗಾರಿ ಗಳಿಗೆ ಫೆ.11 ರಂದು ಶಂಕುಸ್ಥಾಪನೆ ನಡೆಸಲಾಗುವುದು ಎಂದರು. 
 
ತಹಶೀಲ್ದಾರ್ ಎಸ್.ಸಿ.ಹೊನ್ನ ಶ್ಯಾಮೇಗೌಡ, ನಗರಸಭೆ ಪೌರಾಯುಕ್ತ ಯೋಗಾನಂದ್, ಅಧ್ಯಕ್ಷ ಅಮಾನುಲ್ಲಾ ಖಾನ್ ಇತರರು ಇದ್ದರು.
 
**
ಫೆ.20ರೊಳಗೆ ಕ್ರಿಯಾ ಯೋಜನೆ
ನಗರೋತ್ಥಾನ ಯೋಜನೆಯಲ್ಲಿ ಬಿಡುಗಡೆಯಾಗಿರುವ ಹಣಕ್ಕೆ ಇದುರೆಗೂ ಏಕೆ ಕ್ರಿಯಾ ಯೋಜನೆ ತಯಾರಿಸಿಲ್ಲ ಎಂದು ಸಚಿವರು ಪ್ರಶ್ನೆ ಮಾಡಿದಾಗ ಸಿಬ್ಬಂದಿಯ ಕೊರತೆಯಿಂದಾಗಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿ ದರು. ಸಣ್ಣ ನೀರಾವರಿ ಇಲಾಖೆಯಿಂದ ಒಬ್ಬ ಎಂಜಿನಿಯರ್  ನಿಯೋಜಿಸಲು ಸೂಚಿಸುತ್ತೇನೆ. ಫೆ. 20 ರೊಳಗೆ ₹ 31 ಕೋಟಿ ಕ್ರಿಯಾ ಯೋಜನೆ ತಯಾರಿಸಿದರೆ ಸ್ಥಳ ಪರಿಶೀಲಿಸಿ ಅನುಮೋದನೆ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT