ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಲೇಬೇಕಾದ ಸಿನಿಮಾಗಳು

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಈ ಯಾವ ಸಿನಿಮಾಗಳನ್ನೂ ನಾನು ಈ ಮೊದಲು ನೋಡಿಲ್ಲ. ಆದರೆ ಕಥಾಸಾರವನ್ನು ಓದಿದಾಗ ಕುತೂಹಲ ಹುಟ್ಟಿತು. ಈ ಕಥೆಗಳ ಮೂಲಕ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನಿಸಿದೆ.

ಸಾಮಾನ್ಯವಾಗಿ ಇರಾನ್‌ ಸಿನಿಮಾಗಳು ವಿಶಿಷ್ಟವಾಗಿರುತ್ತವೆ. ಕಡಿಮೆ ಹಣದಲ್ಲಿ ಅತ್ಯದ್ಭುತ ಸಿನಿಮಾಗಳನ್ನು ಅವರು ಮಾಡುತ್ತಾರೆ.
ಸ್ಥಳೀಯತೆಯನ್ನು ಮೀರಿದ್ದು ಸಿನಿಮಾ. ನಿರೂಪಣಾ ಕ್ರಮವು ಕಾಲಾಂತರದಲ್ಲಿ ಅನೇಕ ಪಲ್ಲಟ, ಹೊಸ ಸ್ವರೂಪಗಳನ್ನು ಪಡೆದುಕೊಂಡಿದೆ. ಸಿನಿಮಾಗಳು ಕಥನ ಕ್ರಮದ ಮೂಲಕ ಸ್ಥಳೀಯ ಸಂಸ್ಕೃತಿ, ರಾಜಕೀಯ, ಸಾಮಾಜಿಕ ಸಂದರ್ಭವನ್ನು ಹೇಳುತ್ತಾ ಅಲ್ಲಿನ ಜೀವನ ಕ್ರಮವನ್ನು ಬಿಚ್ಚಿಡುತ್ತವೆ.

ಸಿನಿಮಾ ವೀಕ್ಷಣೆಯಿಂದ ಹೊಸ ಸಿನಿಮಾಗಳು ಹುಟ್ಟಿಕೊಳ್ಳಬಹುದು, ನಾಟಕ ಪರಿಕಲ್ಪನೆ ಸಿಗಬಹುದು, ಅಥವಾ ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಯೊಂದು ಉಂಟಾಗಬಹುದು. ಆ ಕಾರಣಕ್ಕಾಗಿ ಸಿನಿಮಾಗಳು ಮುಖ್ಯವಾಗುತ್ತವೆ. 
***

ಮತ್ತೆ ಬಂತು ಬೆಂಗಳೂರು ಫ್ಯಾಷನ್‌ ವೀಕ್‌
ಬೆಂಗಳೂರು ಫ್ಯಾಷನ್‌ವೀಕ್‌ನ 16ನೇ ಆವೃತ್ತಿ ಫೆ.5ರವರೆಗೆ ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ನಡೆಯಲಿದೆ. ನಾಲ್ಕು ದಿನಗಳ ಈ ಫ್ಯಾಷನ್‌ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ವಿನ್ಯಾಸಕರು ತಾವು ವಿನ್ಯಾಸಗೊಳಿಸಿದ ದಿರಿಸುಗಳನ್ನು ಪ್ರದರ್ಶಿಸಲಿದ್ದಾರೆ.

‘ಇವೆಂಟ್‌ ಮ್ಯಾನೇಜ್‌ಮೆಂಟ್‌, ಫ್ಯಾಷನ್‌ ಹಾಗೂ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ನಮಗೆ ಇಲ್ಲಿನ ಫ್ಯಾಷನ್‌ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಯೋಚನೆ ಬಂತು. ಇದು 16ನೇ ಆವೃತ್ತಿಯಾಗಿದ್ದು ಜನರಿಂದ, ವಿನ್ಯಾಸಕರಿಂದ ಹಾಗೂ ಮಾಡೆಲ್‌ಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಮಾಹಿತಿ ನೀಡುತ್ತಾರೆ ಕಾರ್ಯಕ್ರಮವನ್ನು ಆಯೋಜಿಸಿರುವ ಫಿರೋಜ್‌ ಖಾನ್‌.

ಫ್ಯಾಷನ್‌ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ರಮೇಶ್‌ ದೆಮ್ಲಾ, ಸೆಹ್ರಿಶ್‌ ಕಬೀರ್‌, ಉನಾಯಿಸ್‌ ಮುಸ್ತಾಫಾ, ಅಭಿಷೇಕ್‌ ದತ್ತಾ ಅವರ ವಿನ್ಯಾಸದ ದಿರಿಸುಗಳೂ ಪ್ರದರ್ಶನಗೊಳ್ಳಲಿವೆ.
ಸ್ಥಳ: ಶೆರಟನ್‌ ಗ್ರಾಂಡ್‌ ಬೆಂಗಳೂರು ಹೋಟೆಲ್‌, ಬ್ರಿಗೇಡ್‌ ಗೇಟ್‌ವೇ, ರಾಜಕುಮಾರ್ ರಸ್ತೆ, ರಾಜಾಜಿನಗರ. ಮಧ್ಯಾಹ್ನ 2ರಿಂದ ರಾತ್ರಿ 9.
***

ಗ್ರೀಟಿಂಗ್ಸ್‌ ಫ್ರಂ ಫುಕುಶಿಮಾ
ಮೇರಿ, ತನ್ನ ಕನಸು ಈಡೇರದ ದುಃಖದಿಂದ ಹೊರಬರುವ ಸಲುವಾಗಿ ಜಪಾನಿಗೆ ಬರುತ್ತಾಳೆ. 2011ರಲ್ಲಿ ಘಟಿಸಿದ ಫುಕುಶಿಮಾ ಆಘಾತದಿಂದ ಹೊರಬರುವವರಿಗೆ ಸಹಾಯ ಮಾಡುವ ಸಂಸ್ಥೆಗೆ ಸೇರುತ್ತಾಳೆ. ಕೆಲವೇ ದಿನಗಳಲ್ಲಿ ಈ ಕೆಲಸಕ್ಕೆ ತಾನು ಸೂಕ್ತಳಲ್ಲ ಎಂಬುದು ಮೇರಿಗೆ ಮನವರಿಕೆಯಾಗುತ್ತದೆ. ವಾಪಸ್‌ ಹೊರಡಲು ಅನುವಾಗುತ್ತಾಳೆ.

ಈ ಹೊತ್ತಿನಲ್ಲಿ ತನ್ನ ಅಳಿದುಳಿದ ಮನೆಯಲ್ಲೇ ವಾಸಿಸಲು ಪ್ರಯತ್ನಿಸುವ ಸಾತೊನಿ, ಫುಕುಶಿಮಾದ ಗೀಷಾಳನ್ನು ಭೇಟಿಯಾಗುತ್ತಾಳೆ. ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಲೇ ತಮ್ಮ ಗತಿಸಿದ ದಿನಗಳು ಅವರನ್ನು ಕಾಡತೊಡಗುತ್ತವೆ.
ನಿರ್ದೇಶನ– ಡೋರಿಸ್‌ ಡಾರಿ, ಭಾಷೆ– ಜರ್ಮನ್. ನಿಮಿಷ –104. ಪರದೆ 9. ಸಮಯ– ಬೆಳಿಗ್ಗೆ 9.50.

ಗಿಲ್ಟಿ ಮೆನ್‌
ಕೊಲಂಬಿಯಾದ ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ರಚಿತವಾದ ಸೇನೆಯೊಂದು ವಿಸರ್ಜನೆಗೊಳ್ಳುತ್ತದೆ. ಆ ಸಂದರ್ಭದಲ್ಲಿ ಪಟ್ಟಣವನ್ನು ಅರೆಸೇನಾ ಪಡೆಯ ಸಿಬ್ಬಂದಿ ಮುತ್ತಿಕೊಂಡಿರುವಾಗಲೂ ನಗದು ಹಣವನ್ನು ಕೊಂಡೊಯ್ಯುವಂಥ ಅಪಾಯಕಾರಿ ಕೆಲಸಕ್ಕೆ ವಿಲ್ಲಿಂಗ್ಟನ್‌ ಮುಂದಾಗುತ್ತಾನೆ. ಈ ಸಂದರ್ಭ ಇಡೀ ಹೇಗೆ ಇಡೀ ಪರಿಸ್ಥಿತಿಯನ್ನು ಹದಗೆಡಿಸುತ್ತದೆ ಎನ್ನುವ ಬಗೆಗೆ ಚಿತ್ರದಲ್ಲಿ ಹೇಳಲಾಗಿದೆ.
ನಿರ್ದೇಶನ– ಇವಾನ್‌ ಡಿ ಗವೋನಾ. ಭಾಷೆ– ಸ್ಪಾನಿಶ್‌. ನಿಮಿಷ– 115. ಪರದೆ– 10. ಮಧ್ಯಾಹ್ನ 12.

ಡುಯೆಟ್‌
ವರ್ಷಗಳ ಹಿಂದೆ ತೀರಾ ಹಿತವಲ್ಲದ ರೀತಿಯಲ್ಲಿ ಬೇರ್ಪಟ್ಟ ಮಾಜಿ ಗೆಳತಿ ಸೆಫಿದಾಳ ಕ್ಷಮೆ ಯಾಚಿಸಲು ಬಯಸಿದ್ದ ತನ್ನ ಗಂಡ ಹಮೀದ್‌ನನ್ನು ಕರೆದುಕೊಂಡು ಮಿನೂ ಹೋಗುತ್ತಾಳೆ. ಆದರೆ ಈ ಪುನರ್ಮಿಲನ ಹಳೆಯ ನೆನಪುಗಳನ್ನು ಮರುಕಳಿಸಿ ಸೆಫಿದಾಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ನಿರ್ದೇಶನ– ನವಿದ್‌ ಡಾನಿಶ್‌. ಭಾಷೆ– ಪರ್ಷಿಯನ್‌. ನಿಮಿಷ– 103. ಪರದೆ–6, ರಾತ್ರಿ 8.15.

ದ ಏಜ್‌ ಆಫ್‌ ಶ್ಯಾಡೋಸ್‌
1920ರ ಉತ್ತರಾರ್ಧದಲ್ಲಿ ನಡೆಯುವ ಈ ಚಿತ್ರ ಬೆಕ್ಕು ಇಲಿ ಆಟದಂತೆ ನಡೆಯುತ್ತದೆ. ಸಿಯೋಲ್‌ನಲ್ಲಿರುವ ಜಪಾನೀ ಸೌಲಭ್ಯಗಳನ್ನು ನಾಶಪಡಿಸಲು ಶಾಂಘೈನಿಂದ ಸ್ಫೋಟಕಗಳನ್ನು ತರಲು ಬಂಡುಕೋರರ ಗುಂಪೊಂದು ಪ್ರಯತ್ನಿಸುತ್ತಿರುತ್ತದೆ. ಜಪಾನಿ ಏಜೆಂಟರು ಅವರನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಒಬ್ಬ ಕೊರಿಯನ್‌ ಮೂಲದ ಪ್ರತಿಭಾವಂತ, ಸ್ವತಃ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ, ಜಪಾನಿ ಪೊಲೀಸ್‌ ಅಧಿಕಾರಿಗೆ ವಾಸ್ತವದ ಬೇಡಿಕೆ ಮತ್ತು ಅದಕ್ಕೂ ಮಿಗಿಲಾದ ಆತ್ಮಸಾಕ್ಷಿಯ ನಡುವೆ ಆಯ್ಕೆಯ ಗೊಂದಲ ಎದುರಾಗಿದೆ.
ನಿರ್ದೇಶನ– ಜೀ ವೂನ್‌ ಕಿಂ. ಭಾಷೆ– ಕೊರಿಯನ್‌. ನಿಮಿಷ– 140. ಪರದೆ– 5. ಮಧ್ಯಾಹ್ನ 2.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT