ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಗ್ರಾಮೀಣರ ಉಸಿರು’

ಜಾನಪದ ಪರಿಷತ್ ವತಿಯಿಂದ ಬನಶಂಕರಿ ಜಾತ್ರೆಯಲ್ಲಿ ಜಾನಪದ ಜಾತ್ರೆ
Last Updated 3 ಫೆಬ್ರುವರಿ 2017, 6:43 IST
ಅಕ್ಷರ ಗಾತ್ರ

ಬನಶಂಕರಿ (ಬಾದಾಮಿ): ಗ್ರಾಮೀಣ ಪ್ರದೇಶದಲ್ಲಿ ಜನಪದ ಕಲೆಯು ಜನ ಪದರ ಉಸಿರಾಗಿತ್ತು. ಜನಪದ ಕಲೆಯು ಈಚೆಗೆ ನಶಿಸಿ ಹೋಗುತ್ತಿದೆ. ಜನಪದ ಕಲೆಯನ್ನು ಜನತೆ ಪ್ರೋತ್ಸಾಹಿಸಬೇಕು ಎಂದು ರಂಗಭೂಮಿ ಹಿರಿಯ ಕಲಾವಿದೆ ಪ್ರೇಮಾ ಗುಳೇದಗುಡ್ಡ ಹೇಳಿದರು.

ಬನಶಂಕರಿ ಜಾತ್ರೆಯಲ್ಲಿ ಆಶಾಪುರ ಸಂಗಮೇಶ್ವರ ನಾಟ್ಯ ಸಂಘ ಮತ್ತು ತಾಲ್ಲೂಕು ಘಕಟದ ಜಾನಪದ ಪರಿಷತ್ತು ಆಶ್ರಯದಲ್ಲಿ ಗುರುವಾರ ಜಾನಪದ ಜಾತ್ರೆ ಮತ್ತು ರಂಗಭೂಮಿ ಕಲಾವಿದರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭಕ್ಕೆ ಅವರು ಚಾಲನೆ ನೀಡಿದರು.

ಗ್ರಾಮೀಣ ಪ್ರದೇಶದ ನಿರಕ್ಷರಿಗಳು ರೂಪಿಸಿದ ಜನಪದ ಸಾಹಿತ್ಯ ಇಂದಿಗೂ ಜನಮಾನಸದ ಹೃದಯದಲ್ಲಿ ಉಳಿಯುವ ಸಾಹಿತ್ಯವಾಗಿದೆ. ಜನಪದ ಸಾಹಿತ್ಯದ ಉಳಿವಿಗೆ ಸಂಘ ಸಂಸ್ಥೆಗಳು ಹೆಚ್ಚು ಪ್ರಮುಖ್ಯತೆ ಕೊಡಬೇಕು ಎಂದು ನಿವೃತ್ತ ಶಿಕ್ಷಕ ಎಸ್‌.ಎಂ. ಹಿರೇಮಠ ಹೇಳಿದರು.

ಇದೇ ಸಂದರ್ಭದಲ್ಲಿ ವೃತ್ತಿರಂಗ ಭೂಮಿ ಮತ್ತು ಹವ್ಯಾಸಿ ರಂಗ ಭೂಮಿಯ ಹಿರಿಯ ಕಲಾವಿದರಾದ ಮಮತಾ ಗುಡೂರ, ಈಶ್ವರಪ್ಪ  ಬೂದ ಗುಂಪ, ವಿಜಯಲಕ್ಷ್ಮಿ  ಕಟ್ಟಿ, ಸದಾ ಶಿವಯ್ಯ ಹಿರೇಮಠ, ಬಸವರಾಜ ಯಾಳ ವಾರ, ಪ್ರೇಮಾ ತಾಳಿಕೋಟಿ, ಭೀಮ ರಾವ್‌ ಕಲಬೇನೂರ, ಮುದ್ದಪ್ಪ ಗಿರಿ ಸಾಗರ, ಈಶ್ವರ ಗಾಡದ, ಶೇಖರಪ್ಪ ಹೊಸಮನಿ, ಸಂತೋಷ ಹೋಟಿ, ಗೀತಾ ಚಿಂತಾಕಲ, ತಾರಾ ಚಿಂತಾಕಲ ಮತ್ತು ನಾಟಕಕಾರ ಪ್ರಕಾಶ ಕಡಪಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರೇಮಾ ತಾಳಿಕೋಟಿ, ಮಮತಾ ಗೂಡೂರ, ಈಶ್ವರಪ್ಪ ಬೂದಗುಂಪ ನಾಟಕಗಳ ಸಂಭಾಷಣೆ ಪ್ರದರ್ಶಿಸಿದರು. ತಾರಾ, ಗೀತಾ ಚಿಂತಾಕಲ ರಂಗಗೀತೆ ಹಾಡಿದರು. ಕಮತಗಿಯ ಸಂತೋಷ ವೀರಗಾಸೆ ಕಲೆಯನ್ನು ಪ್ರದರ್ಶಿಸಿದರು. ಗುಳೇದಗುಡ್ಡ ಜ್ಞಾನ ಭಾರತಿ ಸಾಂಸ್ಕೃತಿಕ ಮಹಿಳಾ ಸಂಘದ ಸದಸ್ಯರು ಜಾನಪದ ಹಾಡುಗಳನ್ನು ಹೇಳಿದರು.

ಜಾನಪದ ಪರಿಷತ್‌ ಘಟಕದ ಅಧ್ಯಕ್ಷ ಡಾ. ಪ್ರಕಾಶ ನರಗುಂದ ಅಧ್ಯಕ್ಷತೆ ವಹಿಸಿದ್ದರು. ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಸದಸ್ಯ ಮಾಲತೇಶ ಪೂಜಾರ, ಎಂ.ಎಸ್‌. ಬೊಮ್ಮಸಾಗರ ಮತ್ತು ಕಲಾವಿದರು ಇದ್ದರು. ಬಿ.ಎಸ್‌. ಉಳ್ಳಾಗಡ್ಡಿ ಸ್ವಾಗತಿಸಿದರು. ಹುಚ್ಚೇಶ ಯಂಡಿಗೇರಿ ವಂದಿಸಿದರು.

‘ಕಲಾ ರಾಯಭಾರಿಗಳು’
ಕೆರೂರ:
ಸಾಂಸ್ಕೃತಿಕ ಲೋಕದ ರಾಯ ಭಾರಿಗಳೇ ಆಗಿರುವ ಕಲಾವಿದರು, ಆಧುನಿಕತೆಯ ಭರಾಟೆಯಲ್ಲೂ ಜಾನ ಪದ ಲೋಕದ ಸಿರಿವಂತಿಕೆ ಮೆರೆಸುವಲ್ಲಿ ಅವರ ಸೇವೆ, ಪರಿಶ್ರಮ ಅಪೂರ್ವ ವಾಗಿದೆ ಎಂದು ದೇವಾಂಗ ಮಠದ ರುದ್ರದಮುನಿ ಸ್ವಾಮೀಜಿ ಬಣ್ಣಿಸಿದರು.

ಸ್ಥಳೀಯ ಹೊಸಪೇಟೆಯ ಬನ ಶಂಕರಿ ದೇವಿ ದೇವಸ್ಥಾನ ಶತಮಾನೋ ತ್ಸವ ನಿಮಿತ್ತ ಬನಶಂಕರಿ ರಂಗಸಜ್ಜಿಕೆ ಯಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
                                                                               
ಈ ಪಟ್ಟಣವು ಸಂತೆ ಮತ್ತು ವಹಿ ವಾಟಿಗಿಂತಲೂ ಹೆಚ್ಚು ಕಲೆ, ಕಲಾವಿದರ ತವರೂರು ಎಂದು ಗತ ಕಾಲದಲ್ಲಿಯೇ ಹೆಗ್ಗಳಿಕೆ ಪಡೆದಿದ್ದು ಹೆಮ್ಮೆಯ ಸಂಗತಿ ಎಂದರು.

ಕಲಾವಿದ ಲಿಂಗರಾಜ ಕ್ವಾಣ್ಣೂರ್, ಧುರೀಣ ವಿಠ್ಠಲಗೌಡ ಗೌಡರ ಮಾತನಾ ಡಿದರು. ಹಿರಿಯ ಕಲಾವಿದ ಹನ ಮಂತಪ್ಪ ಕ್ವಾಣ್ಣೂರ್ ತಮ್ಮ ಪೌರಾಣಿಕ ಕಲೆಯನ್ನು ಪ್ರದರ್ಶಿಸಿ ನೆರೆದಿದ್ದ ಅಪಾರ ಸಭಿಕರಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿದರೆ, ಶತಮಾನೋತ್ಸವ ಗೀತೆ ಹಾಡಿದ ಕುಬೇರಪ್ಪ ನರಗುಂದ ಮತ್ತು 3 ವರ್ಷದ ಬಾಲಕ ರಾಮದುರ್ಗದ ದತ್ತು ನಾರಾ ಯಣ ಕಂದಗಲ್ಲರ ಗಾನ ಮಾಧುರ್ಯ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಕಲಾವಿದ ಕುಶಾಲಪ್ಪ ಸಣ್ಣಕ್ಕಿ, ಲಾಕೋಪತಿ ಹೊಸ ಪೇಟಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸದಾ ನಂದ ಮದಿ, ಹನಮಂತಪ್ಪ ಕ್ವಾಣೂರು, ಸಂಕಣ್ಣ ಹೊಸಮನಿ, ಪರಶುರಾಮ ಮಲ್ಲಾಡದ, ಶೇಖರಾಜ ಧುತ್ತರಗಿ, ರಾಘವೇಂದ್ರ ರಾಮದುರ್ಗ, ಘನಶ್ಯಾಂ ಬೋರಣ್ಣವರ, ಗುಂಡಣ್ಣ ಬೋರಣ್ಣವರ ಇತರರು ಇದ್ದರು.

ಪಟ್ಟಣದ ಹಲವು ಜಾನಪದ ಕಲಾ ತಂಡಗಳು ಕರಡಿ ಮಜಲು, ಹಂತಿಪದ, ಸೋಬಾನೆ, ಬೀಸುವ ಪದಗಳು ಸೇರಿ ದಂತೆ ವಿವಿಧ ಕಲಾ ಪ್ರದರ್ಶನಗಳು ಸರಿ ರಾತ್ರಿಯವರೆಗೆ ನೆರವೇರಿದವು. ಇದೇ ವೇಳೆ ಅಗಲಿದ ಹಿರಿಯ ಕಲಾವಿದ ಪಾಂಡಪ್ಪ ಕ್ವಾಣೂರು ಹಾಗೂ ಚೋಳಪ್ಪ ಲ್ಯಾವಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT