ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆಗೆ ಭರದ ಸಿದ್ಧತೆ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
Last Updated 4 ಫೆಬ್ರುವರಿ 2017, 5:19 IST
ಅಕ್ಷರ ಗಾತ್ರ
ನರಸಿಂಹರಾಜಪುರ: ಇದೇ 11ರಿಂದ ನಡೆಯುವ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಪಿ.ಜೆ.ಅಂಟೋಣಿ ತಿಳಿಸಿದರು.
 
ಇಲ್ಲಿನ ಸೂರ್ಯ ಸಿಟಿ ಕಾಂಪ್ಲೆಕ್ಸ್ ನಲ್ಲಿ  ಶುಕ್ರವಾರ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
 
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೀತೂರು ಅನಂತ ಪದ್ಮನಾಭ ಅವರನ್ನು ಆಹ್ವಾನಿಸಲಾಗಿದೆ. ಗೌರವ ಅಧ್ಯಕ್ಷರಾಗಿ ಶಾಸಕ ಡಿ.ಎನ್.ಜೀವರಾಜ್ ಆಯ್ಕೆಯಾಗಿದ್ದಾರೆ. ಇದೇ 11ರ ಮಧ್ಯಾಹ್ನ 3ಗಂಟೆಗೆ ಬಸ್ತಿಮಠದಿಂದ ಸಮ್ಮೇಳನದ ಮಂಟಪಕ್ಕೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ ಡಿ.ಎನ್. ಜೀವರಾಜ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ನಾ. ಡಿಸೋಜ ಆಶಯ ಭಾಷಣ ಮಾಡಲಿದ್ದಾರೆ.
 
ಕೆ.ಟಿ.ವಿಜಯ ಕುಮಾರ್ ರಚಿಸಿರುವ ಕವನ ಸಂಕಲನ ಬಿಡುಗಡೆಯಾಗಲಿದೆ ಎಂದರು.
 
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್‌.ಎಸ್. ಸಂತೋಷ್ ಅವರು ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿದೆ. ಶನಿವಾರ ಸಂಜೆ ಜನಪದ ವೈಭವ ಗೋಷ್ಠಿ ನಡೆಯಲಿದೆ. ಸಮ್ಮೇಳನದ ಎರಡನೇ ದಿನ ನೇಗಿಲ ಧ್ವನಿ, ಮಕ್ಕಳ ಗೋಷ್ಠಿ ನಡೆಯಲಿದೆ. ಹಿರೇಮಗಳೂರು ಕಣ್ಣನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಸ್ತ್ರೀ ಸಂವೇದನೆ ಮಹಿಳಾ ಗೋಷ್ಠಿ ನಡೆಯ ಲಿದ್ದು ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭ ಮರವಂತೆ ಉಪನ್ಯಾಸ ನೀಡಲಿದ್ದಾರೆ. 
 
ಸಂಜೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ  ಸಾಹಿತಿ ಬೆಳವಾಡಿ ಮಂಜುನಾಥ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡು ದಿನ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಭಿಮಾನಿಗಳು  ಭಾಗವಹಿ ಸಬೇಕೆಂದು ಮನವಿ ಮಾಡಿದರು.
 
ಕನ್ನಡ ಸಾಹಿತ್ಯ ಪರಿಷತ್‌ನ ರಾಜ ಕುಮಾರ್, ಭಾಗ್ಯ ನಂಜುಂಡಸ್ವಾಮಿ, ಎನ್.ಎಂ. ಕಾಂತರಾಜ್, ಚಕ್ರಪಾಣಿ, ನಂಜುಂಡಪ್ಪ, ಪೂರ್ಣೇಶ್, ರವಿ ಕುಮಾರ್, ತಿಮ್ಮೇಶ್ ಇದ್ದರು.
 
**
ನರಸಿಂಹರಾಜಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಹಾವೀರ ಭವನದ ಬದಲಾಗಿ ಪಟ್ಟಣ ನೀರಿನ ಟ್ಯಾಂಕ್ ವೃತ್ತದ ಸಮುದಾಯ ಭವನದಲ್ಲಿ ನಡೆಯಲಿದೆ.
-ಪಿ.ಜೆ.ಅಂಟೋಣಿ
ಅಧ್ಯಕ್ಷರು, ಸಮ್ಮೇಳನದ ಸ್ವಾಗತ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT