ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ: ಮುನ್ನೆಚ್ಚರಿಕೆ ಅಗತ್ಯ

ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆಗೆ ಆರೋಗ್ಯಾಧಿಕಾರಿಗಳ ಸೂಚನೆ
Last Updated 6 ಫೆಬ್ರುವರಿ 2017, 6:04 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ನಾಪೋಕ್ಲು ಸೇರಿದಂತೆ ಮತ್ತಿತರ ಭಾಗಗಳಲ್ಲಿ ಮಕ್ಕ ಳಲ್ಲಿ ಜಾಂಡೀಸ್‌ ಮತ್ತಿತರ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿರುವ ಹಿನ್ನೆಲೆ ಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಇಲಾಖೆಯು ಕೆಲವೊಂದು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಶುದ್ಧ ಕುಡಿಯುವ ನೀರಿಗೆ ಬಣ್ಣ ಮತ್ತು ವಾಸನೆ ಇರುವುದಿಲ್ಲ. ಕಲುಷಿತ ನೀರು ಕುಡಿಯುವುದರಿಂದ ಸಾರ್ವಜ ನಿಕರಿಗೆ ಅನೇಕ ರೋಗರುಜಿನಗಳಿಗೆ ತುತ್ತಾಗುವ ಸಾಧ್ಯತೆಯಿದ. ಕಾಲರಾ, ಕರಳುಬೇನೆ, ಟೈಫಾಯ್ಡ್ (ವಿಷಮಶೀತ ಜ್ವರ), ಹೆಪಟೈಟಿಸ್, ಇಲಿಜ್ವರ, ಜಂತು ಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮತ್ತಿತರ ರೋಗಗಳು ಹರಡುವ ಸಾಧ್ಯತೆಯಿದ್ದು, ನೀರನ್ನು ಕಾಯಿಸಿ ಕುಡಿದರೆ ಸಾಂಕ್ರಾಮಿಕ ರೋಗ ಗಳಿಂದ ದೂರ ಉಳಿಯಲು ಸಾಧ್ಯವಾಗ ಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ. ಶಿವಕುಮಾರ್ ಕೋರಿದ್ದಾರೆ.

ಕುಡಿಯುವ ನೀರಿನ ಮೂಲಗಳ ಹತ್ತಿರ ಬಳಸಿದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಲ ವಿಸರ್ಜನೆ, ದನಕರುಗಳನ್ನು ಸ್ವಚ್ಛಗೊಳಿಸುವುದು ಹಾಗೂ ಬಟ್ಟೆ ಪಾತ್ರೆ ತೊಳೆದನೀರು, ಕುಡಿಯುವ ನೀರಿನ ಮೂಲಗಳಿಂದ ದೂರವಿರುವ ಹಾಗೆ ವ್ಯವಸ್ಥೆ ಮಾಡಿಕೊ ಳ್ಳಬೇಕು. ಹತ್ತು ದಿನಗಳಿಗೊಮ್ಮೆ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿಕೊಳ್ಳಿ.

ನೀರು ತುಂಬಿದ ಮೇಲೆ ಕ್ಲೋರಿನೇಷನ್ ಮಾಡುವುದೂ ಅಗತ್ಯ. ನೀರು ಪೂರೈಕೆ ನಲ್ಲಿಗಳು ಎತ್ತರದ ಸ್ಥಳದಲ್ಲಿ ಇರುವಂತೆ ಹಾಗೂ ಮುಚ್ಚಳವಿರುವ ನಲ್ಲಿಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳು ವುದೂ ಅಗತ್ಯ ಎಂದು ಸಲಹೆ ನೀಡಿದ್ದಾರೆ.

ಜ್ವರ, ಚಳಿ, ತಲೆನೋವು, ಆಯಾಸ, ದೇಹ ಪೂರ್ಣ ನಿಶ್ಯಕ್ತಿ, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಹಳದಿ ಬಣ್ಣದ ಮೂತ್ರ ಹೋಗುವುದು ಕಂಡುಬಂದರೆ ತಕ್ಷಣೆವೇ ಹತ್ತಿರ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ನೀರನ್ನು ಕುದಿಸಿ ಆರಿಸಿ ಕುಡಿಯು ವುದು ಒಳ್ಳೆಯದು. ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ಪಾನೀಯ ಹಾಗೂ ಹಣ್ಣು ಹಂಪಲು, ತರಕಾರಿಗಳನ್ನು ಉಪ ಯೋಗಿಸಬಾರದು. ಕೊಳೆತ ಆಹಾರ, ಮೀನು, ಮಾಂಸ, ಐಸ್‌ಕ್ರೀಂ, ಶೀತಲೀಕ ರಿಸಿದ ಆಹಾರ ಇತ್ಯಾದಿಗಳನ್ನು ಉಪ ಯೋಗಿಸಬಾರದು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಸೂಪರ್ ಕ್ಲೋರಿನೇಶನ್ ಮಾಡುವುದು ಅಗತ್ಯ ಎಂದು ಅವರು ಮನವಿ ಮಾಡಿದ್ದಾರೆ.

ದೂಳುಮಯವಾದ ಮಂಜಿನನಗರಿ
ಮಡಿಕೇರಿ:
ಒಳಚರಂಡಿ ಕಾಮಗಾರಿಯಿಂದ ಇಡೀ ಮಡಿಕೇರಿ ನಗರ ದೂಳುಮಯವಾಗಿದೆ. ಎಲ್ಲಿ ನೋಡಿದರೂ ದೂಳು. ಅಗೆದ ರಸ್ತೆಗಳಿಗೆ ಜಲ್ಲಿ, ಡಾಂಬರ್‌ ಹಾಕಿ ದುರಸ್ತಿ ಮಾಡದಿರುವುದೇ ಇದಕ್ಕೆ ಕಾರಣ. ರಸ್ತೆಗಳನ್ನು ಬೇಕಾಬಿಟ್ಟು ಅಗೆದು ಹಾಕುತ್ತಿದ್ದರೂ ಆಯಾ ವಾರ್ಡ್‌ನ ನಗರಸಭೆ ಸದಸ್ಯರು ಸಾರ್ವಜನಿಕರ ಅಳಲು ಆಲಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಯುಜಿಡಿ ಪೈಪ್‌ ಅಳವಡಿಸಲು ಅಲ್ಲಲ್ಲಿ ನೀರಿನ ಪೈಪ್‌ಗಳನ್ನು ಒಡೆದು ಹಾಕಲಾಗಿದೆ. ಅವುಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿಲ್ಲ ಎಂಬ ಆರೋಪಗಳು ಕೇಳಿಬರು ತ್ತಿವೆ. ಶೌಚಾಲಯಗಳನ್ನು ಯುಜಿಡಿಗೆ ಸಂಪರ್ಕ ಕಲ್ಪಿಸಿಕೊಂಡರೆ ಬಹುತೇಕ ಕಡೆ ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಸೇರುವ ಸಾಧ್ಯತೆಯಿದೆ ಎಂಬುದು ನಾಗರಿಕರ ಅಳಲು.

ಮುನ್ನಚ್ಚರಿಕೆ ಕ್ರಮಗಳೇನು?
* ನೀರಿನ ಪೂರೈಕೆ ಪೈಪ್‌ ಸೋರಿಕೆಯಾದರೆ ತಕ್ಷಣ ದುರಸ್ತಿ ಮಾಡಿಕೊಳ್ಳಬೇಕು.
* ಕೊಳವೆಬಾವಿಯ 100 ಮೀಟರ್ ಆಸುಪಾಸಿನಲ್ಲಿ ತಿಪ್ಪೆಗುಂಡಿ, ಗೊಬ್ಬರದ ಗುಂಡಿಯಿದ್ದಲ್ಲಿ ಸ್ಥಳಾಂತರಿಸುವುದೇ ಸೂಕ್ತ.
* ಚರಂಡಿಯ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಕುಡಿಯುವ ನೀರಿನ ಮಾದರಿಗಳನ್ನು ಶುದ್ಧೀಕರಿಸಿದ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುವುದು.
* ಅಶುದ್ಧ ಎಂದು ಕಂಡುಬಂದ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸಿ 15 ದಿನಗಳ ನಂತರ ಪುನಃ ಪರೀಕ್ಷೆಗೆ ಒಳಪಡಿಸುವುದು.
* ಹೊರಗಡೆಯಿಂದ ಬಂದ ಕೂಡಲೇ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತಿಕ್ಕಿ ತೊಳೆಯಬೇಕು. ಇಲ್ಲವೆ, ಸ್ವಚ್ಛಕಾರಕಗಳನ್ನು ಬಳಸಿ ತೊಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT