ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್‌ ಪ್ರಮಾಣದಲ್ಲಿ ಮನೆ ಮಂಜೂರು

ಆಶ್ರಯ ಮನೆ ಪಟ್ಟಿಗೆ ಪಾಲಿಕೆ ಸದಸ್ಯರ ಆಕ್ಷೇಪ
Last Updated 6 ಫೆಬ್ರುವರಿ 2017, 6:37 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ–ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ವಿಜಯಪುರ ನಗರದಲ್ಲಿ ಆಶ್ರಯ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡು ದಶಕ ಗತಿಸಿದೆ. ಈಚೆಗಿನ ವರ್ಷಗಳಲ್ಲಿ ಬೆರಳೆಣಿಕೆ ಮನೆ ನಿರ್ಮಾಣಗೊಂಡಿ ದ್ದರೆ ಹೆಚ್ಚು. ಇದೀಗ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಪ್ರಧಾನಮಂತ್ರಿ ಹೌಸ್‌ ಫಾರ್‌ ಆಲ್‌ ಯೋಜನೆಯಡಿ 3750 ಆಶ್ರಯ ಮನೆಗಳು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಂಜೂರಾಗಿವೆ.

ಜಿ + 1 ಮಾದರಿ: ಪ್ರಧಾನಮಂತ್ರಿ ಹೌಸ್‌ ಫಾರ್‌ ಆಲ್‌ ಯೋಜನೆ ಯಡಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಮನೆಗಳು ಮಂಜೂರಾಗಿವೆ. ಶೇ 50 ಭಾಗ ಸಾಮಾನ್ಯ ವರ್ಗಕ್ಕೆ, ಶೇ 30 ಭಾಗ ಪರಿಶಿಷ್ಟ ಜಾತಿಗೆ, ತಲಾ ಶೇ 10 ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ನೀಡಬೇಕು ಎಂಬ ನಿಯಮಾವಳಿ ಯೋಜನೆಯಲ್ಲಿದೆ.

ಇದರ ಜತೆಗೆ ಸಾಮಾನ್ಯ ವರ್ಗದ ಮೀಸಲು ಕೋಟಾದಲ್ಲಿಯೇ ಅಂಗವಿಕಲರು, ವಿಧವೆಯರು, ಮಾಜಿ ಸೈನಿಕರಿಗೆ ತಲಾ ಶೇ 1ರಷ್ಟು ಮೀಸಲಾತಿ ನೀಡಬೇಕು ಎಂಬ ನಿಯಮಾವಳಿಯಿದೆ. ಇದರಿಂದ ಶೇ 50ರಲ್ಲಿ 3ರಷ್ಟು ಈ ಮೂರು ವರ್ಗದವರಿಗೆ ಕಡ್ಡಾಯ.

ಅರ್ಹ ಫಲಾನುಭವಿಗಳು ತಲಾ ₨ 80 ಸಾವಿರ ಪಾವತಿಸಿದರೆ, ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡಲಾಗುವುದು. ಈ ಮನೆಗಳು ಜಿ +1 ಮಾದರಿಯಲ್ಲಿರುತ್ತವೆ. ನೆಲ ಮಹಡಿ, ಅದರ ಮೇಲೆ ಮೊದಲ ಅಂತಸ್ತು ನಿರ್ಮಿಸಲಾಗಿರುತ್ತದೆ. ಅಡುಗೆ ಕೋಣೆ, ಮಲಗುವ ಕೋಣೆ, ಹಾಲ್‌ ಸೇರಿದಂತೆ ಸ್ನಾನ, ಶೌಚಗೃಹವಿರಲಿದೆ ಎಂದು ಮಹಾನಗರ ಪಾಲಿಕೆಯ ಹೆಸರು ಬಹಿರಂಗ ಪಡಿಸಲಿಚ್ಚಿ ಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಅಲ್‌ಅಮೀನ್ ವೈದ್ಯಕೀಯ ಕಾಲೇಜು ಮುಂಭಾಗ ಅಥವಾ ಭೂತನಾಳ ಕೆರೆ ಬಳಿ ಯೋಜನೆಯಡಿ ಮನೆ ನಿರ್ಮಿಸ ಲಾಗುವುದು. ಈ ಯೋಜನೆಗೆ ಮಹಾನಗರ ಪಾಲಿಕೆ ಆಡಳಿತ ಅಥವಾ ಜಿಲ್ಲಾಡಳಿತ ಉಚಿತವಾಗಿ ಸರ್ಕಾರಕ್ಕೆ ಭೂಮಿ ಒದಗಿಸಿ ಕೊಡಬೇಕು. ನಂತರ ಫಲಾನುಭವಿಗಳಿಂದ ವಂತಿಗೆ ಪಡೆದು ಮನೆ ನಿರ್ಮಿಸಲಾಗುವುದು ಎಂದು  ಮಾಹಿತಿ ನೀಡಿದರು.

ನಿಯಮ ಪಾಲನೆ ಅಗತ್ಯ
ವಿಜಯಪುರ:
ಯಾವುದೇ ಸಮುದಾಯಕ್ಕೆ ಅನ್ಯಾಯ ವಾಗದಂತೆ, ನಿಯಮಾವಳಿಗಳ ಪ್ರಕಾರ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎನ್ನುತ್ತಾರೆ ಮಹಾನಗರ ಪಾಲಿಕೆ ಸದಸ್ಯ ಪರಶುರಾಮ ರಜಪೂತ.

ಚಿಗುರಿದ ಮನೆ ಆಸೆ
ಸರ್ಕಾರದ ಈ ಕೊಡುಗೆ ಬಡವರ ಕಂಗಳಲ್ಲಿ ಬತ್ತಿ ಹೋಗಿದ್ದ ಕನಸುಗಳಿಗೆ ಮತ್ತೊಮ್ಮೆ ಜೀವ ಕೊಟ್ಟಂತಾಗಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿರುವುದು ಕಮರಿ ಹೋಗಿದ್ದ ಉತ್ಸಾಹಕ್ಕೆ ನೀರೆರೆದು ಪೋಷಿಸಿದಂತಾಗಿದೆ ಎನ್ನುತ್ತಾರೆ ನಾಗರಿಕರು.

ಮಾರ್ಗದರ್ಶಿ ಸೂತ್ರ ಬಂದಿಲ್ಲ
ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಅಂತಿಮ ಮಾರ್ಗದರ್ಶಿ ಪತ್ರ ಬಂದಿಲ್ಲ. ಅದು ಬಂದ ಬಳಿಕ ಫಲಾನುಭವಿಗಳ ವಂತಿಗೆ ಎಷ್ಟು ಎಂಬುದು ಅಂತಿಮಗೊಳ್ಳಲಿದೆ ಎಂದು ಹೆಸರು ಹೇಳಲು ಇಚ್ಚಸದ ಪಾಲಿಕೆ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.

* 375 ತಲಾ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ಮೀಸಲು  *ತಲಾ 50 ಮನೆಗಳಿಗೆ ಸದಸ್ಯರ ಪಟ್ಟು  * ಶಾಸಕರ ಮನೆಯಲ್ಲಿ ತಯಾರಾದ ಪಟ್ಟಿ: ಆರೋಪ.

ರಾಜ್ಯ ಸರ್ಕಾರ ಸಹಭಾಗಿತ್ವ 
ಪ್ರಧಾನಮಂತ್ರಿ ಹೌಸ್‌ ಫಾರ್‌ ಆಲ್‌: ಯೋಜನೆ ಅಡಿ ಮಂಜೂರು , ಸರ್ವರಿಗೂ ಸಮಪಾಲು ನೀಡಲು ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT