ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5.35 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ

ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಪ್ರಶ್ನೆಗೆ ಉತ್ತರ
Last Updated 8 ಫೆಬ್ರುವರಿ 2017, 7:00 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿ ಫೆಬ್ರುವರಿ 2ರವರೆಗೆ ಒಟ್ಟಾರೆ 19,220 ರೈತರಿಂದ 5.35ಲಕ್ಷ ಕ್ವಿಂಟಲ್‌ ಎಫ್‌.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಸಲಾಗಿದೆ. ಇದಕ್ಕೆ ₹24.10 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಅವರು ವಿಧಾನ ಪರಿಷತ್‌ಗೆ ಲಿಖಿತ ಉತ್ತರ ನೀಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ತೊಗರಿ ಬೆಲೆ ಕುಸಿದಿರುವುದು ಸರ್ಕಾರದ ಗಮ­ನಕ್ಕೆ ಬಂದಿದೆ. 2016ನೇ ಸಾಲಿನಲ್ಲಿ ಬಫರ್‌ಸ್ಟಾಕ್‌ ಯೋಜನೆಯಡಿ ಎಫ್‌.ಎ.ಕ್ಯೂ ಗುಣಮಟ್ಟದ ತೊಗರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ  ಬೆಂಬಲ ಬೆಲೆ ಹಾಗೂ ಬೋನಸ್‌ ಒಳಗೊಂಡಂತೆ ಪ್ರತಿ ಕ್ವಿಂಟಲ್‌ಗೆ ₹5,050ರಂತೆ ರೈತರಿಂದ ಖರೀದಲಾಗುತ್ತಿದೆ.

ನ್ಯಾಫೆಡ್‌, ಭಾರತೀಯ ಆಹಾರ ನಿಗಮ, ಸ್ಮಾಲ್‌ ಫಾರ್ಮರ್ಸ್‌ ಅಗ್ರಿಕಲ್ಚರ್‌ ಕನ್‌ಸೋರ್ಟಿಯಂ ಸಂಸ್ಥೆಗಳು ಖರೀದಿ ಆರಂಭಿಸಿವೆ ಎಂದು ವಿವರ ನೀಡಿದ್ದಾರೆ.

ತೊಗರಿ ಬೆಳೆಯಲು ರಸ ಗೊಬ್ಬರ, ಬೀಜ, ಕಾರ್ಮಿ­ಕರ ಕೂಲಿ ಮತ್ತಿತರ ವೆಚ್ಚ ಹಾಗೂ ರೈತರು ನೇರವಾಗಿ ಭರಿಸುವ ವೆಚ್ಚವನ್ನು ಪರಿಗಣಿಸಿದರೆ ಎಕರೆಗೆ ₹21,687 ವೆಚ್ಚ ತಗಲುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಪ್ರತಿ ಕ್ರಿಂಟಲ್‌ ತೊಗರಿಗೆ ಸರಾಸರಿ ಮಾದರಿ ಬೆಲೆಯು 2013–14ರಲ್ಲಿ ₹3,939, 2014–15ರಲ್ಲಿ ₹4,713, 2015–16ರಲ್ಲಿ ₹7,647, 2016–17 (ಫೆಬ್ರುವರಿ 3ರಿಂದ ಈ ವರೆಗೆ) ₹6,347 ಇದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT