ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕಗಳ ವಿವಾದ ಅಂತ್ಯ

ಮದುವೆ ಕಾರ್ಯಕ್ರಮದಲ್ಲಿ ಒಂದಾದ ದಲಿತ ಮತ್ತು ಸವರ್ಣೀಯರು
Last Updated 8 ಫೆಬ್ರುವರಿ 2017, 9:24 IST
ಅಕ್ಷರ ಗಾತ್ರ

ಬನಹಟ್ಟಿ: ದಲಿತರು ಮತ್ತು ಸವರ್ಣೀ ಯರು ವೈಮನಸ್ಸು ಮರೆತು, ಸುಮಾರು 20 ವರ್ಷಗಳ ನಂತರ ಒಂದಾದ ಘಟನೆ ಮಂಗಳವಾರ ಇಲ್ಲಿಗೆ ಸಮೀಪದ ಜಗದಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಯಾವುದೇ ಕಾರ್ಯ ಕ್ರಮವಿರಲಿ, ಯಾರದೇ ಮನೆಯಲ್ಲಿ ಮದುವೆ ಇರಲಿ, ಹಬ್ಬ ಇರಲಿ ಊರ ವರೆಲ್ಲರೂ ಒಟ್ಟಾಗಿಯೇ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಊರದು. ದಲಿತರು ಸವರ್ಣೀಯರ ಮನೆಯ ಕಾರ್ಯಕ್ರಮ ದಲ್ಲಿ, ಸವರ್ಣೀಯರು ದಲಿತರ ಮನೆ ಯಲ್ಲಿ ಊಟ ಮಾಡುತ್ತಿದ್ದರು. ಆದರೆ, 20 ವರ್ಷಗಳ ಹಿಂದೆ ನಡೆದ ಕ್ಷುಲ್ಲಕ ಘಟನೆಯೊಂದು ಇಡೀ ಊರವರನ್ನು ಮನಸ್ಸಿನಲ್ಲಿ ಕಹಿ ಬಿತ್ತಿತ್ತು. 

ಸವರ್ಣೀ ಯರ ಮದುವೆ ಕಾರ್ಯಕ್ರಮದಲ್ಲಿ ದಲಿತರು ಹಲಗೆ ಬಾರಿಸುತ್ತ ಬಂದು ಸಿಡಿಸಿದ ಬಣ್ಣ ಸಮಾರಂಭದಲ್ಲಿ ಪಾಲ್ಗೊಂಡವರ ಮೇಲೆ ಬಿದ್ದಿತ್ತು. ಇದೇ ನೆಪವಾಗಿ ದೊಡ್ಡ ವಿವಾದವಾಗಿತ್ತು. ಅಂದಿನಿಂದ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ದಲಿತರಿಗೆ ನಿಷೇಧ ಹೇರಲಾಗಿತ್ತು. ಅದೇ ವೈಮನಸ್ಸಿನಿಂದ ಇಲ್ಲಿಯವರೆಗೂ ಎರಡೂ ಸಮುದಾ ಯದವರು ಒಟ್ಟಾಗಿ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ.

ಆದರೆ, ಸೋಮವಾರ ಸಂಜೆ ಉಭಯ ಸಮುದಾಯದ ಮುಖಂಡರ ನಡುವಿನ ಮಾತುಕತೆಯು ಮುರಿದ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿ ಯಾಗಿದೆ. ಮಂಗಳವಾರ ಇಲ್ಲಿನ ಗಂಗಪ್ಪ ಉಳ್ಳಾಗಡ್ಡಿಯ ಅವರ ಕುಟುಂಬದ ಮದುವೆ ಸಮಾರಂಭದಲ್ಲಿ ಊರವರೆಲ್ಲ ಒಟ್ಟಾಗಿ ಊಟ ಮಾಡಿದ್ದಾರೆ.

ಗ್ರಾಮದ ಹಿರಿಯರಾದ ಮಲ್ಲಪ್ಪ ನೀಲಕಂಠ (ಮಗದುಮ್), ಭೀಮನ ಗೌಡ ಬಿರಾದಾರ ಪಾಟೀಲ, ಗಂಗಪ್ಪ ಉಳ್ಳಾಗಡ್ಡಿ, ಗಿರಿಮಲ್ಲಪ್ಪ ಉಳ್ಳಾಗಡ್ಡಿ, ಅಲ್ಲಪ್ಪ ಹೊಸೂರ, ಬನಹಟ್ಟಿಯ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ದಲಿತ ಮುಖಂಡರಾದ ಯಮನಪ್ಪ ದೊಡ್ಡಮನಿ, ದುರ್ಗಪ್ಪ ದೊಡ್ಡಮನಿ, ಮಹಾದೇವ ಗಾಂಜಾಗೋಳ, ಶಿವಪ್ಪ ದೊಡ್ಡಮನಿ ಮುಂತಾದವರ ಸಮ್ಮುಖದಲ್ಲಿ ಸಮಸ್ಯೆ ಇತ್ಯರ್ಥಗೊಂಡಿತು.

*
20 ವರ್ಷಗಳ ಹಿಂದೆ ನಡೆದ ಘಟನೆ ಸಂಬಂಧ ಗ್ರಾಮದಲ್ಲಿ ದಲಿತ ಕುಟುಂಬಗಳಿಗೆ ನಿಷೇಧವಿತ್ತು. ಈಗ ಎಲ್ಲರೂ ಒಂದಾಗಿರುವುದು ಸಂತೋಷದ ಸಂಗತಿ.
-ಪರಶುರಾಮ ಬಸವ್ವಗೋಳ,
ಜಿಲ್ಲಾ ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT