ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಅವಾಂತರ

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ತಮಿಳುನಾಡು ರಾಜಕೀಯದಲ್ಲಿ ಎಂಜಿಆರ್ ಕಾಲದಿಂದಲೂ ನಡೆದುಕೊಂಡು ಬಂದ ವ್ಯಕ್ತಿಪೂಜೆಯೇ ಇಂದಿನ ಎಲ್ಲ ಅವಾಂತರಕ್ಕೆ ಕಾರಣ. ಜಯಲಲಿತಾ ಅವರಿಂದ ಶಶಿಕಲಾ ಅವರವರೆಗೂ ಮುಂದುವರಿದಿರುವ ವ್ಯಕ್ತಿಪೂಜೆಯ ಕಾರಣದಿಂದ ಅಲ್ಲಿಯ ಹೆಚ್ಚಿನ ಜನ ಹಾಗೂ ಶಾಸಕರು ತಮಗೆ ಯೋಗ್ಯವಾದ ರಾಜಕೀಯ ನಾಯಕರು ಯಾರಾಗಬೇಕೆಂಬ ವಿವೇಚನೆಯನ್ನು ಹೊಂದಿಲ್ಲ.

ಅದೇ ಕಾರಣದಿಂದ ಹಾಲಿ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಅವರು ಜಯಲಲಿತಾ ಅಸ್ವಸ್ಥರಾದಾಗಲೇ ಶಶಿಕಲಾ ವಿರುದ್ಧ ಬಂಡೇಳುವ ಅವಕಾಶವನ್ನು ಉಪಯೋಗಿಸಿ ಕೊಳ್ಳಲಿಲ್ಲ. ಅವರು ಬಂಡೆದ್ದಾಗ ತೀರ ತಡವಾಗಿ ಹೋಗಿತ್ತು! ಈಗ ಅಲ್ಲಿಯ ರಾಜಕೀಯ ಕಗ್ಗಂಟು ಸುಲಭದಲ್ಲಿ ಹಾಗೂ ಸದ್ಯದಲ್ಲಿ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ.
-ಜಯರಾಮ ಹೆಗಡೆ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT