ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಕಲ್ಯಾಣವೇ ಧರ್ಮಗಳ ಉದ್ದೇಶ

‘ತರಳಬಾಳು ಹುಣ್ಣಿಮೆ’ಯಲ್ಲಿ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
Last Updated 12 ಫೆಬ್ರುವರಿ 2017, 8:56 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಧರ್ಮ ಬೇರೆ, ಮತ ಧರ್ಮ ಬೇರೆ. ಧರ್ಮಕ್ಕೆ ಯಾವುದೇ ಜಾತಿ–ಮತಗಳ ಸೋಂಕಿಲ್ಲ. ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದು, ಅವೆಲ್ಲವೂ ಜನರ ಒಳಿತಿಗಾಗಿ ಆರಂಭವಾಗಿವೆ. ಸಾತ್ವಿಕ ಆಶಯ ಅರ್ಥ ಮಾಡಿ ಕೊಳ್ಳುವುದೇ ಎಲ್ಲ ಧರ್ಮಗಳ ಮೂಲ. ಆದರೆ, ಅನುಯಾಯಿಗಳ ಸಂಕುಚಿತ ಮತಿಯಿಂದ ಧರ್ಮ, ಮತ ಧರ್ಮವಾಗಿ ಪರಿವರ್ತನೆಯಾಗಿದೆ’ ಎಂದು ಸಿರಿಗೆರೆ ತರಳಬಾಳು ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿರಿಗೆರೆಯಲ್ಲಿ ಶುಕ್ರವಾರ ರಾತ್ರಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸದ್ಧರ್ಮ ಸಿಂಹಾ ಸನರೋಣ ಪೀಠ ಅಲಂಕರಿಸಿದ ನಂತರ ಅವರು ಆಶೀರ್ವಚನ ನೀಡಿದರು.

‘ಎಲ್ಲ ಹೂಗಳು ಸೇರಿ ಹೂವಿನ ಉದ್ಯಾನವನ ನಿರ್ಮಾಣವಾಗುತ್ತದೆ. ಅಂತೆಯೇ ಎಲ್ಲ ಧರ್ಮಗಳೂ ಸೇರಿ ಇಡೀ ಜಗತ್ತಿನ ಕಲ್ಯಾಣಕ್ಕಾಗಿಯೇ ಸ್ಥಾಪ ನೆಯಾಗಿವೆ. ಧರ್ಮಗಳ ಅನುಯಾ ಯಿಗಳ ಸಂಕುಚಿತ ಮತಿಯಿಂದಾಗಿ ಧರ್ಮ– ಧರ್ಮಗಳ ನಡುವೆ ಸಂಘ ರ್ಷಕ್ಕೆ ಅವಕಾಶವಾಗಿದೆ’ ಎಂದರು.

‘ಧರ್ಮವನ್ನು ಆತ್ಮೋನ್ನತಿಗಾಗಿ, ಸಾಮಾಜಿಕ ಅಭ್ಯುದಯಕ್ಕಾಗಿ ಬಳಸಿಕೊಳ್ಳಬೇಕು. ಇಂದು ಸಂಪತ್ತಿನ ಅಮಲು ಜನರನ್ನು ಆವರಿಸಿದೆ. ಆದರೆ, ಮನುಷ್ಯನನ್ನು ಹಣ, ಸಂಪತ್ತಿನಿಂದ ತೃಪ್ತಿಪಡಿಸಲು ಸಾಧ್ಯವಿಲ್ಲ. ಹಾಗೆಂದು ಸಂಪತ್ತು ಬೇಡವೆಂದಲ್ಲ. ಅದು ಧರ್ಮದ ಚೌಕಟ್ಟಿನಲ್ಲಿದ್ದರೆ ಉತ್ತಮ’ ಎಂದು ವಿಶ್ಲೇಷಿಸಿದರು.

‘ಬರಗಾಲದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ತರಳಬಾಳು ಹುಣ್ಣಿಮೆ ಆಚರಣೆ ನಿಲ್ಲಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇನ್ನೂ  ಭೀಕರ ಬರ ತಲೆದೋರಿದೆ. ಭಕ್ತರ ಒತ್ತಾಸೆ ಮೇರೆಗೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ. ನಮ್ಮ ಉತ್ಸವ ಸಿರಿ ಗೆರೆಯಲ್ಲಿ ನಡೆಯಬೇಕೆಂಬ ಗ್ರಾಮಸ್ಥರ ಆಶಯ ಈಡೇರಿದೆ. ಪ್ರತಿವರ್ಷ ಸಿರಿಗೆರೆಯಲ್ಲಿಯೇ ತರಳಬಾಳು ಹುಣ್ಣಿಮೆ ನಡೆಯಬೇಕು ಎಂಬ ಹಿರಿಯ ಗುರುಗಳ ಆಶಯವನ್ನೂ ಈಡೇರಿಸಿದಂತಾಗಿದೆ’ ಎಂದು ನೆನಪಿಸಿಕೊಂಡರು.

‘ನಾವು ಆಯೋಜಿಸಿದ್ದ ಬೆಳೆ ವಿಮೆ ಸಂವಾದ ಫಲಕೊಟ್ಟಿದೆ. ಅಧಿಕಾರಿಗಳ ಮತ್ತು ರಾಜಕಾರಣಿಗಳ ಬಗ್ಗೆ ನಮ್ಮೊಳ ಗಿದ್ದ ಅಭಿಪ್ರಾಯ ಬದಲಾಯಿಸಿಕೊಳ್ಳ ಬೇಕೆಂದಿದ್ದೇವೆ. ನಮ್ಮ ಸೂಚನೆಯಂತೆ ಅಧಿಕಾರಿಗಳು ತಂತ್ರಾಂಶ ಅಭಿವೃದ್ಧಿ ಪಡಿಸಿದ್ದಾರೆ. ಆ ತಂತ್ರಾಂಶದಲ್ಲಿ ೫೦ ಲಕ್ಷ ಎಕರೆ ನಷ್ಟಕ್ಕೊಳಗಾದ ಜಮೀನನ ಮಾಹಿತಿ ಲಭ್ಯವಾಗಿದೆ. ಇದರಿಂದ ಪರಿ ಹಾರದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲು ಅನುಕೂಲವಾಗುತ್ತಿದೆ.

ಸರ್ಕಾರ ಬರ ಪರಿಹಾರಕ್ಕೆ ಹೆಕ್ಟೇರ್‌ಗೆ ₹ 6500 ಕೊಟ್ಟರೆ ಸಾಲುವು ದಿಲ್ಲ. ಉದ್ಯಮಿ ಮಲ್ಯನಿಗೆ ತೋರುವ ಉದಾರತೆಯನ್ನು ರೈತರಿಗೂ ತೋರಿಸ ಬೇಕು. ರೈತನಿಗೆ ನೀರು ಕೊಟ್ಟರೆ, ಅವರು ಬ್ಯಾಂಕ್‌ ಸಾಲ ತೀರಿಸುತ್ತಾರೆ. ರೈತ ಸುಖ ವಾಗಿದ್ದರೆ ದೇಶ ಸುಖವಾಗಿರುತ್ತದೆ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು’ ಎಂದರು.

‘ಚನ್ನಗಿರಿಯಂತೆ ಜಗಳೂರು ತಾಲ್ಲೂಕಿನ ಕೆರೆಗಳಿಗೆ ನೀರು ತರುವಂತಹ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಜತೆಗೆ ಸಾಸ್ವಿಹಳ್ಳಿ ಯೋಜನೆ ಜಾರಿಗೆ ಬರುತ್ತದೆ. ಇದೇ ರೀತಿ ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

‘ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸವಾಗಲಿ’

‘ಶಿಗ್ಗಾವಿಯಲ್ಲಿ ನಡೆದ ತರಳ ಬಾಳು ಹುಣ್ಣಿಮೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆ ಪ್ರಾಧಿಕಾರ ರಚಿಸುವುದಾಗಿ ಹೇಳಿ ದ್ದರು. ಅಂಥ ದೊಡ್ಡ ಪ್ರಯತ್ನ ಬೇಕಿಲ್ಲ. ಪ್ರತಿ ವರ್ಷ ಬಜೆಟ್‌ನಲ್ಲಿ ಇಂತಿಷ್ಟು ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಭರ ವಸೆ ನೀಡಿ, ಕಾರ್ಯರೂಪಕ್ಕೆ ತಂದರೆ ಸಾಕು’ ಎಂದು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT