ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಾರಿಬೆಳಕು ಎಕ್ಸೆಲ್‌ ಅಕಾಡೆಮಿಕ್ಸ್‌

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದಲ್ಲಿ ಪ್ರತಿಷ್ಠಿತ ತರಬೇತಿ ಕೇಂದ್ರ ಎಂದು ಹೆಸರು ಗಳಿಸಿರುವ ಸಂಸ್ಥೆ ‘ಎಕ್ಸೆಲ್ ಅಕಾಡೆಮಿಕ್ಸ್.’ 
ಬಲಾಗುತ್ತಿರುವ ಶಿಕ್ಷಣ ವ್ಯವಸ್ಥೆ ಹಾಗೂ ಆಧುನಿಕ ಪ್ರಪಂಚದ ಬೇಡಿಕೆಗಳಿಗೆ ಅನುಗುಣವಾಗಿ ಈ ತರಬೇತಿ ಕೇಂದ್ರ  ರೂಪುಗೊಂಡಿದೆ.

ಶಿಕ್ಷಣ ಕ್ಷೇತ್ರದ ಹೊಸ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ತಮವಾದ ಶಿಕ್ಷಕ ವರ್ಗ ಹಾಗೂ ಶಿಕ್ಷಣ ಪರಿಕರಗಳನ್ನು ಸಂಸ್ಥೆ ಹೊಂದಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದುಡಿಯುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಸಿ.ಇ.ಟಿ., ಕಾಮೆಡ್‌–ಕೆ, ಜೆ. ಇ. ಮೈನ್‌ ಅಂಡ್ ಅಡ್ವಾನ್‌ಸ್ಡ್‌, ಎನ್‌ಇಇಟಿ, ಎಐಐಎಂಎಸ್, ಜೆಐಪಿಎಂಇಆರ್‌, ಬಿಐಟಿಎಸ್‌, ವಿಐಟಿ, ಎಂಎಎಚ್‌ಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ.  ರಾಜ್ಯದ ನುರಿತ ಉಪನ್ಯಾಸಕರು  ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದೆ.

ಎಕ್ಸೆಲ್‌ ಅಕಾಡೆಮಿಕ್ಸ್ ಸಂಸ್ಥೆಯ ತರಬೇತಿ ಕೇಂದ್ರ ರಾಜ್ಯದ ಅನೇಕ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್‌, ಎಂಜಿನಿಯರಿಂಗ್‌ ಹಾಗೂ ಐ.ಐ.ಟಿ. ರ‍್ಯಾಂಕ್‌ಗಳು ಸಿಗುವಂತೆ ಮಾಡಿದೆ.

ಕೇವಲ ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗುಜರಾತ್‌, ದೆಹಲಿ ಸೇರಿದಂತೆ  ವಿವಿಧ ರಾಜ್ಯಗಳ ಅನೇಕ ವಿದ್ಯಾರ್ಥಿಗಳು ಬೆಂಗಳೂರಿನ ಯಲಹಂಕದಲ್ಲಿರುವ ಎಕ್ಸೆಲ್‌ ಸಂಸ್ಥೆಗೆ ತರಬೇತಿಗಾಗಿ ಬರುತ್ತಿದ್ದಾರೆ.

ಸಿಇಟಿ, ಕಾಮೆಡ್‌–ಕೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆಯುವಲ್ಲಿ ಎಕ್ಸೆಲ್‌ ಕೋಚಿಂಗ್‌ ಸೆಂಟರ್‌ ವಿದ್ಯಾರ್ಥಿಗಳಿಗೆ ನೆರವಾಗಿದೆ. ಈ ಬಾರಿ ಬೇಸಿಗೆ ತರಗತಿಗಳಿಗೆ ದಾಖಲಾತಿ ಆರಂಭವಾಗಿದ್ದು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದು.

ಪ್ರಥಮ ಪಿಯುಸಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಏಪ್ರಿಲ್ 6 ರಿಂದ ಮೇ 22ರ ವರೆಗೆ ತರಗತಿ ನಡೆಯುತ್ತದೆ. ಪ್ರಥಮ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ, ಸಿ.ಇ.ಟಿ. ಮತ್ತು ನೀಟ್‌ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯಕ್ರಮಗಳನ್ನು ಬೋಧನೆ ಮಾಡಲಾಗುತ್ತದೆ.

ಬ್ರಿಡ್ಜ್‌ ಕೋರ್ಸ್‌
ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಮೇ 1ರಿಂದ 27ರ ವರೆಗೆ ತರಗತಿಗಳು ನಡೆಯುತ್ತವೆ. 10ನೇ ತರಗತಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಗೆ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಸಾಮಾನ್ಯ ಜ್ಞಾನ ಹಾಗೂ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಬೋಧನೆ ಮಾಡಲಾಗುತ್ತದೆ. 10ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ಸಂಬಂಧ ಕಲ್ಪಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಒಂದು ಕಾರ್ಯಕ್ರಮವೇ ಬ್ರಿಡ್ಜ್‌ಕೋರ್ಸ್‌.

ಸಿ.ಇ.ಟಿ. ಕ್ರ್ಯಾಷ್‌ ಕೋರ್ಸ್‌
ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮಾರ್ಚ್‌ 30ರಿಂದ ಏಪ್ರಿಲ್‌ 30ರವರೆಗೆ ನಡೆಯಲಿದೆ. ಕರ್ನಾಟಕ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕ್ರಾಷ್‌ ಕೋರ್ಸ್‌ನಲ್ಲಿ  ತರಬೇತಿ ಪಡೆಯಲು ಬರುತ್ತಿದ್ದಾರೆ.

ಈ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕೂಡ ಲಭ್ಯವಿರುತ್ತದೆ. ಈ ಕೋರ್ಸ್‌ ಎಂಜಿನಿಯರಿಂಗ್‌ ಓದಲು ಬಯಸುವ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಪರೀಕ್ಷೆಯ ನೆಲೆಯಲ್ಲಿ ತರಬೇತಿಯನ್ನು ನೀಡುತ್ತದೆ. ಈ ಕೋರ್ಸ್‌ಗೆ ಪ್ರತಿ ವರ್ಷ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗುತ್ತಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ  ಮೆಡಿಕಲ್‌ ಕೋರ್ಸ್‌ಗೆ ಸಹಾಯವಾಗುವಂತೆ ದೀರ್ಘಾವಧಿ ಮೆಡಿಕಲ್ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರುತ್ತಾರೆ.

ಸಂಸ್ಥೆಯ ಬಗ್ಗೆ
ಎಕ್ಸೆಲ್‌ ಅಕಾಡೆಮಿಕ್ಸ್‌ ಸಂಸ್ಥೆ  ವಿಶಾಲವಾದ ಕಟ್ಟಡದಲ್ಲಿ ತರಬೇತಿ ವ್ಯವಸ್ಥೆಯನ್ನು ನೀಡುತ್ತಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕೂಡ ಸಂಸ್ಥೆ ನೀಡುತ್ತದೆ. ದೀರ್ಘಾವಧಿ ಮೆಡಿಕಲ್ ಕೋರ್ಸ್‌ಗೆ ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲದೇ ಉತ್ತಮ ಸಾಧನೆಯನ್ನೂ ಮಾಡಿದ್ದಾರೆ.

ಅದಕ್ಕೆ ಉದಾಹರಣೆಯೆಂದರೆ  –ಶಿವಾನಂದ ಎಸ್‌. ಎಂಬ ವಿದ್ಯಾರ್ಥಿ ‘ಆಲ್ ಇಂಡಿಯಾ ಕೋಟಾ ಕ್ಯಾಟಗರಿಯಲ್ಲಿ 1ನೇರ‍್ಯಾಂಕ್ ಪಡೆದಿರುವುದು. ಪ್ರಜ್ವಲ್‌ ಕೆ. 18ನೇ ರ‍್ಯಾಂಕ್‌, ಚೇತನ್‌ ಎಂ. 44ನೇ ರ‍್ಯಾಂಕ್‌ ಪಡೆದು ಸಂಸ್ಥೆ ಉತ್ತಮ ತರಬೇತಿ ನೀಡುತ್ತಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ವಿಳಾಸ: ಯಲಹಂಕ ನ್ಯೂ ಟೌನ್, ದೊಡ್ಡಬಳ್ಳಾಪುರ ರಸ್ತೆ, ರೈಲ್ ವೀಲ್ ಫ್ಯಾಕ್ಟರಿ ಎದುರು, ಬೆಂಗಳೂರು – 560064
ಸಂಪರ್ಕಕ್ಕೆ: 9535656277, 9880155284, 8105290660. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT