ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು, ಉಳ್ಳಾಲ ನಗರಸಭೆ ಶಾಂತಿಯುತ ಉಪಚುನಾವಣೆ

Last Updated 13 ಫೆಬ್ರುವರಿ 2017, 11:18 IST
ಅಕ್ಷರ ಗಾತ್ರ

ಪುತ್ತೂರು/ ಉಳ್ಳಾಲ: ಪುತ್ತೂರು ನಗರ ಸಭೆಯ ತೆರವಾಗಿದ್ದ  6 ಸ್ಥಾನಗಳಿಗೆ ಭಾ ನುವಾರ ನಡೆದ ಉಪಚುನಾವ ಣೆಯು ಶಾಂತಿಯುತವಾಗಿ ಕೊನೆಗೊಂಡಿದ್ದು,  ಒಟ್ಟು ಶೇ 65.66 ಮತದಾನವಾಗಿದೆ.

4,832 ಮಹಿಳೆಯರು  ಮತ್ತು 4,7 60 ಪುರುಷರು ಸೇರಿದಂತೆ ಒಟ್ಟು 9592 ಮತದಾರರ  ಪೈಕಿ 3263 ಮಹಿಳೆಯರು ಮತ್ತು 3035ಪುರುಷರು ಸೇರಿದಂತೆ ಒಟ್ಟು 6298 ಮಂದಿ ಮತ ಚಲಾಯಿ ಸಿದ್ದು, 15 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

4 ಅಭ್ಯರ್ಥಿಗಳು ಕಣದಲ್ಲಿರುವ 6 ಚಿಕ್ಕಮುಡ್ನೂರು 1ನೇ ವಾರ್ಡಿನಲ್ಲಿ ಶೇ 73.02ರಷ್ಟು ಮತ್ತು 16ನೇ ಪುತ್ತೂರು ಕಸಬಾ 9ನೇ  ವಾರ್ಡಿನಲ್ಲಿ ಶೇ 56. 75ರಷ್ಟು ಮತದಾನವಾಗಿದೆ. ಇದೇ 15 ರಂದು ಮತ ಎಣಿಕೆ ನಡೆಯುಲಿದೆ.

ಉಳ್ಳಾಲ ನಗರಸಭೆಗೆ ನಡೆದ ಉಪ ಚುನಾವಣೆಯಲ್ಲಿ ಚೆಂಬುಗುಡ್ಡೆ ವಾರ್ಡ್‌ ನಲ್ಲಿ ಶೇ 58 ಮತದಾನವಾದರೆ, ಕಲ್ಲಾ ಪು ವಾರ್ಡ್‌ನಲ್ಲಿ  ಅತ್ಯಧಿಕ ಶೇ 72.9 ಮತದಾನವಾಗಿದೆ. ಎರಡೂ ವಾರ್ಡ್‌ ಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT