ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊದಲ್ಲಿ ಗಿನ್ನಿಸ್‌ ದಾಖಲೆ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಏನನ್ನಾದರೂ ಸಾಧಿಸುವ ಮನಸ್ಸಿದರೆ, ಹಲವು ದಾರಿಗಳು ಕಾಣುತ್ತವೆ ಎಂಬುದಕ್ಕೆ ಚೆನ್ನೈನ ಜಗದೀಶ್‌ ಎಂ. ಉತ್ತಮ ಉದಾಹರಣೆ. ಆಟೊರಿಕ್ಷಾ ಚಾಲಕರಾಗಿರುವ ಇವರು,  ವಿಭಿನ್ನ ದಾಖಲೆಯೊಂದನ್ನು ಮಾಡಿ ಜನಪ್ರಿಯರಾಗಿದ್ದಾರೆ.

ಆಟೊರಿಕ್ಷಾದಲ್ಲಿಯೇ ವೀಲಿಂಗ್‌ (ಮೂರು ಚಕ್ರದ ರಿಕ್ಷಾದಲ್ಲಿ ಒಂದು ಚಕ್ರವನ್ನು ಮೇಲೆತ್ತಿ ಚಲಾಯಿಸುವುದು) ಮಾಡುವ ಮೂಲಕ ಗಿನ್ನಿಸ್‌ ದಾಖಲೆಯ ಮನ್ನಣೆ ಗಳಿಸಿದ್ದಾರೆ.

ಬೈಕ್‌ನಲ್ಲಿ ವೀಲಿಂಗ್‌ ಮಾಡುವುದನ್ನು ಚಿಕ್ಕವರಿದ್ದಾಗಲೇ ಕರಗತ ಮಾಡಿಕೊಂಡಿದ್ದ ಇವರಿಗೆ ಆಟೊದಲ್ಲಿಯೂ ವೀಲಿಂಗ್‌ ಮಾಡುವ ಹಂಬಲ ಇತ್ತಂತೆ. ಆದರೆ ವೀಲಿಂಗ್‌ ಅಭ್ಯಾಸವೇ ಮಾಡುತ್ತಿದ್ದರೆ ಹೊಟ್ಟೆ ತುಂಬಬೇಕಲ್ವಾ, ಹಾಗಾಗಿ ಇವರು ರಾತ್ರಿ ವೇಳೆ ಅಭ್ಯಾಸ ಮಾಡುತ್ತಿದ್ದರು.

ವೀಲಿಂಗ್ ವೇಳೆ ಗಂಟೆಗೆ 80 ಕಿ.ಮೀ. ವೇಗವನ್ನು ಕಾಪಾಡಿಕೊಂಡು  ಸುಮಾರು 2.2 ಕಿ.ಮೀ ಕ್ರಮಿಸಿದ್ದಾರೆ. ‘ಈ ರೀತಿಯ ಸಾಧನೆ ಮಾಡುವುದು ನನ್ನ ಬಹುದಿನದ ಕನಸು. ಆದರೆ ಇಷ್ಟು ಬೇಗ ನೆರವೇರುತ್ತದೆ ಎಂದುಕೊಂಡಿರಲಿಲ್ಲ’ ಎಂದು ಹಮ್ಮೆಯಿಂದ ಹೇಳುತ್ತಾರೆ 27 ವರ್ಷದ ಜಗದೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT