ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಿಯಲ್ಲಿ ಕಲೆಯ ಸಿದ್ಧಿ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹಳೆಯ ಪತ್ರಿಕೆ, ನಿಯತಕಾಲಿಕೆಗಳು ಮತ್ತು ಪುಸ್ತಕಗಳ ಕಾಗದ ಕಾಲಕ್ರಮೇಣ ರದ್ದಿ ಎನಿಸಿಕೊಂಡು ಕಸದ ಸ್ಥಾನ ಪಡೆಯುತ್ತವೆ. ಈ ರದ್ದಿ ಕಾಗದಕ್ಕೆ ಹೊಸ ಹೊಸ ರಂಗು ನೀಡಲು ಅನೇಕ ಸುಲಭ ದಾರಿಗಳಿವೆ. ಕಲೆ ಸೃಷ್ಟಿಸುವ ಬಯಕೆ, ಹೊಸತನ್ನು ತಯಾರಿಸುವ ಸೃಜನಶೀಲತೆ ಇದ್ದರೆ ಕತ್ತರಿ, ಗಮ್‌ ಹಿಡಿದು ಬಗೆಬಗೆಯ ವಸ್ತುಗಳನ್ನು ತಯಾರಿಸಬಹುದು.

ಹಳೆಯ ಪೇಪರ್‌ಗಳನ್ನು ಸುತ್ತಿ ಉದ್ದದ ಸ್ಟ್ರಾ ರೂಪ ನೀಡಿದರೆ ಅನೇಕ ಕಲಾತ್ಮಕ ವಸ್ತುಗಳನ್ನು ರೂಪಿಸಬಹುದು. ಪೆನ್‌ ಸ್ಟ್ಯಾಂಡ್‌, ಬುಟ್ಟಿ, ಬಾಕ್ಸ್‌, ಗಡಿಯಾರ, ವಾಲ್‌ ಹ್ಯಾಂಗಿಂಗ್‌ ಇತ್ಯಾದಿಗಳನ್ನು ಸೃಷ್ಟಿಸಬಹುದು. ಅಲ್ಲದೆ ದಿನನಿತ್ಯದ ಬಳಕೆಗೆ ಬೇಕಾದ ಪೇಪರ್‌ ಬ್ಯಾಗ್‌ಗಳನ್ನೂ  ಸುಲಭದಲ್ಲಿ ತಯಾರಿಸಿಕೊಳ್ಳಬಹುದು.

ಪೇಪರ್‌ ಮಣಿಗಳನ್ನು ತಯಾರಿಸಿ ಅವುಗಳಿಗೆ ಸರದ ರೂಪವನ್ನೂ ನೀಡಬಹುದು. ಕಿವಿಯೋಲೆ, ಆರ್ಗನೈಸರ್‌, ಮರದ ವಿನ್ಯಾಸ, ಬಗೆಬಗೆಯ ಬಾಕ್ಸ್‌ ಹೀಗೆ... ಗೂಗಲ್‌ನಲ್ಲೊಮ್ಮೆ ಇಣುಕಿದರೆ ಇಂಥ ನೂರೆಂಟು ವಿನ್ಯಾಸಗಳು ಕಾಣಸಿಗುತ್ತವೆ. ಯುಟ್ಯೂಬ್‌ನಲ್ಲಿ ಇವುಗಳನ್ನು ಮಾಡುವ ಬಗೆ ಹೇಗೆ ಎನ್ನುವ ಹಲವು ವಿಡಿಯೊಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT