ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೃದಯ’ ಸಮರ್ಪಿಸುವ ಬಗೆ ಹೀಗೆ...

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅವಳ ಮನಸ್ಸು ಗೆದ್ದಾಗಿದೆ. ಅವನೆಂದರೆ ಬಿಟ್ಟಿರಲಾರದ ಪ್ರೀತಿ ಅವಳಿಗೆ. ಮೊನ್ನೆ, ನಿನ್ನೆ ಅಂತ ಪ್ರತಿದಿನವೂ ಭೇಟಿ ತಪ್ಪಿಲ್ಲ. ಆದರೂ ಪ್ರೇಮಿಗಳ ದಿನದಂದು ಭೇಟಿಯಾಗಲೇಬೇಕು ಎಂಬುದು ಇಬ್ಬರ ನಡುವಿನ ವಾಗ್ದಾನ.

ಹೌದಲ್ಲ? ಈ ದಿನದ ಭೇಟಿಗೆ ಏನೋ ಹೊಸತನದ ಸ್ಪರ್ಶವಿದೆ. ಇಂದಿನ ಭೇಟಿ ಸದಾ ಕಾಲ ನೆನಪಿನಲ್ಲಿ ಉಳಿಯುವಂತೆ,  ಮೆಲುಕು ಹಾಕುವಂತೆ ಮಾಡುವುದು ಜಾಣ್ಮೆ. 

ನಿಮ್ಮದೇ ಆದ ಉಪಾಯಗಳನ್ನು ಕಂಡುಕೊಳ್ಳಲು ಪುರುಸೊತ್ತು ಇಲ್ಲ ಅಂತೀರಾ? ಫೇಸ್‌ಬುಕ್‌ ಹಾಗೂ ಯೂ ಟ್ಯೂಬ್‌ನಲ್ಲಿ ಒಮ್ಮೆ ಇಣುಕಿ. ವಿಡಿಯೊಗಳ  ಆಗರವೇ ಸಿಗುತ್ತದೆ.

ತಾಜಾ ಗುಲಾಬಿಯನ್ನು ಕೊಡಬೇಕೆಂದಿದ್ದರೂ ಅದನ್ನು ಆಕರ್ಷಕವಾದ ಪೊಟ್ಟಣದಲ್ಲಿ ಇರಿಸಿ ನಿಮ್ಮ ಪ್ರೇಮಿಯ ಕೈಗಿಟ್ಟರೆ ಎಷ್ಟು ಖುಷಿ ಆಗಬಹುದು? ಇಷ್ಟಕ್ಕೂ ಆ ಗಿಫ್ಟ್‌ ಪ್ಯಾಕೆಟ್‌ನ್ನು ನೀವೇ ಕೈಯಾರೆ ಮಾಡಿದ್ದಾದರೆ ನೀವು ಗೆದ್ದಂತೆಯೇ.

ಬರೇ 5–10ದೊಳಗೆ ಸಿದ್ಧಪಡಿಸಬಹುದಾದ ಗಿಫ್ಟ್‌ ಪ್ಯಾಕೆಟ್‌ಗಳು, ಪೊಟ್ಟಣಗಳು, ಬಣ್ಣದ ಕಾಗದಗಳಿಂದ ಆರಿಗಾಮಿ ಶೈಲಿಯಲ್ಲಿ ಕತ್ತರಿಸಿ ವಿಶಿಷ್ಟವಾದ ಉಡುಗೊರೆ ನೀಡಲೂ ಸಾಮಾಜಿಕ ಜಾಲತಾಣಗಳಲ್ಲಿ  ಉಪಾಯಗಳು ಸಿಗುತ್ತವೆ.

ಫೇಸ್‌ಬುಕ್‌ನಲ್ಲಿ ಒಂದು ವಾರದಿಂದೀಚೆ ‘ವ್ಯಾಲೆಂಟೈನ್ಸ್ ಡೇ ಫುಡ್‌ ಐಡಿಯಾಸ್‌’ ಎಂಬ ವಿಡಿಯೊಗಳು ಬಹಳ ಮೆಚ್ಚುಗೆ ಗಳಿಸುತ್ತಿವೆ.
ಹೆಬ್ಬೆಟ್ಟಿನಷ್ಟು ಗಾತ್ರದ ಎರಡು ಟೊಮೆಟೊಗಳನ್ನು ವಾರೆಯಾಗಿ ಕತ್ತರಿಸಿ  ಹೃದಯದಾಕಾರಕ್ಕೆ ಜೋಡಿಸಿ ಟೂತ್‌ಪಿಕ್‌ನ್ನು ಬಾಣದಂತೆ ಸಿಕ್ಕಿಸುವುದರೊಂದಿಗೆ ವಿಡಿಯೊ ಶುರುವಾಗುತ್ತದೆ.

‘4Seasons DIY’ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಹರಿಬಿಟ್ಟಿರುವ  ಹತ್ತಾರು ಕುತೂಹಲಕಾರಿ ವಿಡಿಯೊಗಳಲ್ಲಿ ಇದೂ ಒಂದು. ಫೆ. ಆರರಂದು ಈ ವಿಡಿಯೊ ಫೇಸ್‌ಬುಕ್‌ಗೆ ಅಪ್‌ಲೋಡ್ ಆಗಿದೆ. ಇದುವರೆಗೂ ಅಂದರೆ ಫೆ. 13ರ ಮಧ್ಯಾಹ್ನದವರೆಗೂ ಈ ವಿಡಿಯೊವನ್ನು ವೀಕ್ಷಣೆಯಾಗಿರುವುದು 1,63,65,515  (1.63 ಕೋಟಿ) ಸಲ! ‘ಥಾಯ್‌ಟ್ರಿಕ್‌’ ಬಿಡುಗಡೆ ಮಾಡಿರುವ ವಿಡಿಯೊಗಳೂ ಜನಪ್ರಿಯವಾಗಿವೆ.

ನಿಮ್ಮ ಪ್ರೇಮಿಗೆ ಪ್ರೇಮಿಗಳ ದಿನವನ್ನು ಅವಿಸ್ಮರಣೀಯವಾಗಿಸುವ ಪ್ರೇಮಮಾರ್ಗ ಯಾವುದು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ.
ಫೇಸ್‌ಬುಕ್‌ ಲಿಂಕ್‌: https://www.facebook.com/fourseasonsdiy/videos/1330735820282624/

ವಿಡಿಯೊ ನೋಡಲು ಲಿಂಕ್‌:  http://bit.ly/2kyYTqf

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT