ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವಾರಣೆಯಾಗದ ಆತಂಕ

ವಾಚಕರ ವಾಣಿ
Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕೆಲವು ದಿನಗಳಿಂದ 10 ರೂಪಾಯಿ ಮುಖಬೆಲೆಯ ನಾಣ್ಯವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎಂಬ ವದಂತಿ ಹರಡಿದೆ. ‘ಇದು ನಿರಾಧಾರ’ ಎಂದು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿವೆ. ಆದರೂ ಸಾರ್ವಜನಿಕರ ಆತಂಕ ಕಡಿಮೆಯಾಗಿಲ್ಲ.
 
ಇದರ ವಾಸ್ತವ ಬೇರೆಯೇ ಇರಬಹುದು. ಹಲವು ವರ್ಷಗಳ ಹಿಂದೆ, 5, 10, 20 ಪೈಸೆ ನಾಣ್ಯಗಳ ಚಲಾವಣೆಯ ಕಾಲದಲ್ಲಿ, ಇವುಗಳನ್ನು ಕರಗಿಸಿ ಕೃತಕ ಆಭರಣ, ಪಾತ್ರೆಗಳನ್ನು  ತಯಾರಿಸಲು ಉಪಯೋಗಿಸುತ್ತಿದ್ದಾರೆಂಬ ಸುದ್ದಿ ಇತ್ತು. ಆ ಸಮಯದಲ್ಲಿ ಈ ನಾಣ್ಯಗಳ ಅಭಾವವೂ ಇತ್ತು.
 
ಬಹುಶಃ ಇಂತಹುದೇ ಯಾವುದಾದರೂ ಉದ್ದೇಶಕ್ಕೆ ಈಗ ಹತ್ತು ರೂಪಾಯಿ ನಾಣ್ಯ ಅಮಾನ್ಯಕ್ಕೆ ಸಂಬಂಧಿಸಿದ ವದಂತಿ ಹಬ್ಬಿರಬಹುದು. ಇದು ಪಟ್ಟಭದ್ರ ಹಿತಾಸಕ್ತಿಗಳ, ವಂಚಕರ ಹುನ್ನಾರವಿರಬಹುದು. ಇದರ ತಡೆ ಅತ್ಯವಶ್ಯಕ.
–ಕೆ.ಎಸ್.ಜೆ. ಗುಪ್ತ, ಬೆಂಗಳೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT