ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಟ್‌ಮೆಂಟ್‌ನಲ್ಲಿ ಅರಣ್ಯ!

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರಪಂಚದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ದೇಶವೆಂಬ ಕುಖ್ಯಾತಿಗೆ ಗುರಿಯಾಗಿರುವ ಚೀನಾ ಈಗ ಅದರಿಂದ ಹೊರಬರುವ ಪ್ರಯತ್ನಗಳ ಬಗ್ಗೆ ಚಿಂತನೆ ನಡೆಸುತ್ತಿದೆ.

ವಾಹನಗಳ ಸಂಖ್ಯೆ ನಿಯಂತ್ರಣ, ಜನಸಂಖ್ಯೆ ನಿಯಂತ್ರಣ ಮುಂತಾದ ಹಲವು ಕಾರ್ಯಕ್ರಮಗಳ ಜೊತೆಗೆ ಈಗ ಬಹುಮಹಡಿ ಕಟ್ಟಡಗಳ ಮೇಲೆ ಮರಗಳನ್ನು ಬೆಳೆಸುವುದಕ್ಕೆ ಮುಂದಾಗಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಸಣ್ಣ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದು ಸಾಮಾನ್ಯ ಸಂಗತಿ. ಆದರೆ ಚೀನಾದಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಮರಗಳನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ.

ಚೀನಾದ ನಾಂಜಿಂಗ್‌ ಟವರ್ಸ್‌ನಲ್ಲಿ ಇದರ ಮೊದಲ ಪ್ರಯೋಗ ಪ್ರಾರಂಭವಾಗಿದೆ. ಹೀಗೆ ಕಟ್ಟಡಗಳ ಮೇಲೆ ಮರ ಬೆಳೆಸುವ ಪದ್ಧತಿಯನ್ನು ಅವರು ಲಂಬ ಕಾಡು (verticle forest) ಎಂದು ಕರೆದಿದ್ದಾರೆ.

ಅಕ್ಕಪಕ್ಕದಲ್ಲೇ ಇರುವ ಎರಡು ಬಹುಮಹಡಿ ಕಟ್ಟಡ ಸಮುಚ್ಚಯ ‘ನಾಂಜಿಂಗ್‌ ಟವರ್ಸ್‌’ನಲ್ಲಿ ಒಟ್ಟು 1100 ಮಧ್ಯಮಗಾತ್ರದ ಮರಗಳನ್ನು ಮತ್ತು 2500 ಗಿಡಗಳನ್ನು ಬೆಳೆಸಲಾಗುತ್ತದೆಯಂತೆ. ಇವು ದಿನಕ್ಕೆ 60 ಕೆ.ಜಿ ಆಮ್ಲಜನಕ ಹೊರಸೂಸುತ್ತವೆ. ವರ್ಷವೊಂದಕ್ಕೆ 25 ಟನ್ ಇಂಗಾಲವನ್ನು ಹೀರಿಕೊಳ್ಳುತ್ತವೆ ಎಂದು ಹೇಳಲಾಗಿದೆ.

ಈ ರೀತಿಯ ವರ್ಟಿಕಲ್ ಫಾರೆಸ್ಟ್‌ನ ಪ್ರಯೋಗ ಇದು ಮೊದಲಲ್ಲ. ಈ ಹಿಂದೆ ವಾಸ್ತುಶಿಲ್ಪಿ ಸ್ಟೆಫಾನೋ ಬೋಯ್ರಿ ಅವರ ಬೋಯ್ರಿ ಸ್ಟುಡಿಯೋಸ್‌ ಸಂಸ್ಥೆ ಇಟಲಿಯ ಮಿಲಾನ್‌ನಲ್ಲಿ 2009ರಲ್ಲಿಯೇ ಈ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಚೀನಾದ ನಾಂಜಿಂಗ್ ಟರ್ವರ್ಸ್‌ನಲ್ಲಿ ಲಂಬ ಕಾಡು ನಿರ್ಮಾಣವನ್ನೂ ಇದೇ ಇದೇ ಬೋಯ್ರಿ ಸ್ಟುಡಿಯೋಸ್‌ ಮಾಡುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT