ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅರ್ಥವಾಗುವಂತಿರಲಿ

ವಾಚಕರ ವಾಣಿ
Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಪ್ರಶ್ನೆಪತ್ರಿಕೆಯನ್ನು ಈ ಬಾರಿ ಇಂಗ್ಲಿಷ್‌ ಜೊತೆಗೆ ಕನ್ನಡದಲ್ಲಿಯೂ ಮುದ್ರಿಸುತ್ತಿರುವುದು (ಪ್ರ.ವಾ., ಫೆ. 11) ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ. ಅವರು ವೈದ್ಯಕೀಯ, ಎಂಜಿನಿಯರಿಂಗ್‌ನಂತಹ  ವೃತ್ತಿಪರ ಕೋರ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಇದರಿಂದ ಸ್ವಲ್ಪಮಟ್ಟಿಗಾದರೂ ಸಹಾಯವಾಗಬಹುದು.
 
ಆದರೆ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸುವುದು  ಹೆಸರಿಗಷ್ಟೇ ಎಂಬಂತೆ  ಆಗಬಾರದು. ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ, ತಪ್ಪು ಅರ್ಥ ಕೊಡದಂತೆ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದ ರೀತಿಯಲ್ಲಿ ಕನ್ನಡ ಮುದ್ರಣವಿರಬೇಕು. ಪಾರಿಭಾಷಿಕ ಶಬ್ದಗಳು ಕನ್ನಡದೊಂದಿಗೆ ಇಂಗ್ಲಿಷ್‌ನಲ್ಲಿಯೂ  ಇರಲಿ. ಅಚ್ಚಗನ್ನಡದಲ್ಲಿ ಇರುವುದಾದರೆ ಅರ್ಥವಾಗುವಂತೆ ಇರಲಿ. ಇಲ್ಲವಾದರೆ ವಿದ್ಯಾರ್ಥಿಗಳು ಕನ್ನಡಕ್ಕಿಂತ ಇಂಗ್ಲಿಷೇ ಚೆನ್ನಾಗಿ ತಿಳಿಯುತ್ತದೆ ಎಂದುಕೊಳ್ಳುವ ಅಪಾಯ ಇದೆ. 
-ಹಜರತಅಲಿ ದೇಗಿನಾಳ, ಕೆಂಗಲಗುತ್ತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT