ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾತೀತ ದೇವರು

ವಾಚಕರ ವಾಣಿ
Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ದೇವರನ್ನು ಯಾವುದೇ ಲಿಂಗಕ್ಕೆ ಸೇರಿಸದೆ ತಟಸ್ಥ ಪರಿಭಾಷೆಯನ್ನು ಬಳಸಬೇಕು’ ಎಂದು ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪಾದ್ರಿಗಳ ಕಾಲೇಜೊಂದು ತನ್ನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ (ಪ್ರ.ವಾ., ಜ. 25). ತಡವಾಗಿಯಾದರೂ ಈ ನಿಟ್ಟಿನಲ್ಲಿ ಕಾಲೇಜಿಗೆ ಜ್ಞಾನೋದಯವಾದುದು ಮತ್ತು ಅದು ಬಹಿರಂಗವಾಗಿಯೇ ತನ್ನ ನಿಲುವನ್ನು ವ್ಯಕ್ತಪಡಿಸಿದ್ದು ಅಭಿನಂದನಾರ್ಹ.
 
ಈ ನಿಟ್ಟಿನಲ್ಲಿ ನಮ್ಮಲ್ಲಿ ಬಹುಮಂದಿ ಪ್ರಜ್ಞಾವಂತರು ಚರ್ಚೆ, ಮೀಮಾಂಸೆಗಳ ಮೂಲಕ ಬೆಳಕು ಕಾಣಿಸಿದ್ದಾರೆ. ಬಸವಣ್ಣನವರಿಂದ ಹಿಡಿದು ವಿವೇಕಾನಂದ, ಕುವೆಂಪು, ಡಿ.ವಿ.ಗುಂಡಪ್ಪ, ಎ.ಎನ್‌್‌. ಮೂರ್ತಿರಾಯರವರೆಗೆ ಅನೇಕ ಮಹನೀಯರು ‘ದೇವರು’ ಎಂಬ ಪದವನ್ನು ಎಲ್ಲರೂ ಗೌರವಿಸುವಂಥ  ಪೂಜ್ಯ ಸ್ಥಾನದಲ್ಲಿನ ಸಾಪೇಕ್ಷಧಾತುವಾಗಿ ಚಿತ್ರಿಸಿದ್ದಾರೆ. ಇವರು ದೇವರನ್ನು ಸ್ಥಾವರದಲ್ಲಾಗಲಿ, ಲಿಂಗ ಆಧಾರಿತದಿಂದಾಗಲಿ ಗುರುತಿಸಿಲ್ಲ ಎಂಬುದು ಸರ್ವವೇದ್ಯ.
-ಬಿ.ಲಕ್ಕಣ್ಣ, ಬೆಂಗಳೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT