ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಸಲಹೆಗಾರ ರಾಜೀನಾಮೆ

ಅಮೆರಿಕ: ರಷ್ಯಾ ರಾಯಭಾರಿ ಜತೆ ಗೋಪ್ಯ ಮಾತುಕತೆ
Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ವಾಷಿಂಗ್ಟನ್‌: ರಷ್ಯಾ ಮೇಲಿನ ಅಮೆರಿಕ ನಿರ್ಬಂಧಕ್ಕೆ ಸಂಬಂಧಿಸಿದಂತೆ  ರಷ್ಯಾದ ರಾಜತಾಂತ್ರಿಕರೊಂದಿಗೆ ಗೋಪ್ಯ ಮಾತುಕತೆ ನಡೆಸಿದ ಆರೋಪ ಎದುರಿಸುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್‌ ಫ್ಲಿನ್‌ (58) ಮಂಗಳವಾರ ರಾಜೀನಾಮೆ ನೀಡಿದ್ದಾರೆ. 
 
ಟ್ರಂಪ್ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಅಮೆರಿಕದಲ್ಲಿನ ರಷ್ಯಾದ ರಾಯಭಾರಿ ಸರ್ಜೈ ಕಿಸ್ಲಿಯಾಕ್‌ ಜತೆ ಫ್ಲಿನ್ ರಹಸ್ಯ ಮಾತುಕತೆ ನಡೆಸಿದ್ದರು. ಬಳಿಕ ಆ ಮಾತುಕತೆಗಳ ವಿವರಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
 
ಫ್ಲಿನ್ ಅವರ ಗೋಪ್ಯ ಮಾತುಕತೆಯು ಬ್ಲ್ಯಾಕ್‌ಮೇಲ್‌ ನಡೆಸಲು ಪೂರಕವಾದ ಮಾಹಿತಿಗಳನ್ನು ರಷ್ಯನ್ನರಿಗೆ ಒದಗಿಸಿದೆ. ಆದರೆ ಈ ಬಗ್ಗೆ ಅವರು ಆಡಳಿತಾಧಿಕಾರಿಗಳ ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ನ್ಯಾಯಾಂಗ ಇಲಾಖೆಯು ಟ್ರಂಪ್‌ ಆಡಳಿತಕ್ಕೆ ಎಚ್ಚರಿಕೆ ನೀಡಿರುವುದಾಗಿ ವರದಿ  ಪ್ರಕಟವಾಗಿದ್ದವು. ಅದರ ಬೆನ್ನಲ್ಲೇ ಫ್ಲಿನ್‌ ಹುದ್ದೆ ತ್ಯಜಿಸಿದ್ದಾರೆ. 
 
ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಆಗಿರುವ ಫ್ಲಿನ್‌ ಮೂರು ವಾರದವರೆಗೆ ಮಾತ್ರ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT