ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್ ತೀರ್ಪು ಮರುಪರಿಶೀಲನೆಗೆ ಮನವಿ

ತೀರ್ಪಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮಾರಕ: ಡಿಎಸ್‌ಎಸ್
Last Updated 15 ಫೆಬ್ರುವರಿ 2017, 9:54 IST
ಅಕ್ಷರ ಗಾತ್ರ
ಯಾದಗಿರಿ: ಸುಪ್ರೀಂಕೋರ್ಟ್  ಪರಿಶಿಷ್ಟ ನೌಕರರ ಬಡ್ತಿ ಮೀಸಲು ರದ್ದುಪಡಿಸಿರುವುದನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
 
ಸುಪ್ರೀಂಕೋರ್ಟ್ ಫೆ.9 ರಂದು ನೀಡಿರುವ ತೀರ್ಪಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮಾರಕವಾಗಿದೆ. ಸ್ವತಂತ್ರ ಸಿಕ್ಕಿ ಈ 60 ವರ್ಷಗಳಲ್ಲಿ ಒಬ್ಬ ದಲಿತ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಿಲ್ಲ. ಕಾರಣ 2002ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಬಡ್ತಿ ಮೀಸಲಾತಿಯಿಂದ ಕೇವಲ ದಲಿತ ನೌಕರರು ಹಲವು ಹುದ್ದೆಗಳಿಗೆ ಬಡ್ತಿ ಕೋಡಲಾಗಿತ್ತು. ಆದರೆ, ಮತ್ತೆ ರದ್ದು ಮಾಡಿರುವುದರಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ದಲಿತ ನೌಕರರಿಗೆ ಅನ್ಯಾಯವಾಗಿದೆ ಎಂದು ಅವರು ದೂರಿದರು.

ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಮಿಸಲಾತಿ ರದ್ದತಿ ಆದೇಶವನ್ನು ಮುಖ್ಯಮಂತ್ರಿ ಹಾಗೂ ಕಾನೂನು ಇಲಾಖೆ ಗಂಭೀರವಾಗಿ ಮೀಸಲಾತಿ ಹಾಗೂ ಪ್ರಾತಿನಿಧ್ಯ ಮಾನ-ದಂಡಗಳನ್ನು ಸುಪ್ರೀಂ ಕೋರ್ಟ್ ಮೂಲಕ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
 
ಬಡ್ತಿ ಮೀಸಲಾತಿ ಕುರಿತು ದಲಿತ ಸಂಸದರು, ಶಾಸಕರು ಮತ್ತು ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಮದು ಪ್ರತಿಭಟನಾಕಾರರು ಆಗ್ರಹಿಸಿದರು.
 
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಬಡಿಗೇರ್, ಜಿಲ್ಲಾ ಪ್ರಧಾನ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ರಾಜು ಅಣಬಿ, ಹಣ್ಮಂತ ಹೊಸ್ಮನಿ, ಮರುಳಸಿದ್ದಪ್ಪ ನಾಯಕ್, ನರೇಂದ್ರಕುಮಾರ್ ಅನವಾರ್, ರಾಘವೇಂದ್ರ ಚಟ್ಟನಳ್ಳಿ, ಶವಲಿಂಗಪ್ಪ ಚಟ್ಟಳ್ಳಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT