ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧದ ಮರಗಳ್ಳರ ಪತ್ತೆಗೆ 2 ತಂಡ ರಚನೆ

ಎಚ್.ಡಿ.ಕೋಟೆ, ಹುಣಸೂರಿನ ಕಾಡಂಚಿನ ಭಾಗ ಹಾಗೂ ಮಲೆಮಹದೇಶ್ವರ ಬೆಟ್ಟದಲ್ಲಿ ಹುಡುಕಾಟ
Last Updated 15 ಫೆಬ್ರುವರಿ 2017, 11:40 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಲಿಂಗಾಂಬುಧಿ ಕೆರೆಯಲ್ಲಿ ಶನಿವಾರ ನಡೆದ ಗಂಧದ ಮರ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪರಾರಿಯಾಗಿರುವ ಕಳ್ಳರ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಎಚ್.ಡಿ.ಕೋಟೆ ಹಾಗೂ ಹುಣಸೂರಿನ ಕಾಡಂಚಿನ ಭಾಗಗಳಿಗೆ ಒಂದು ತಂಡ ಹಾಗೂ ಮಲೆಮಹದೇಶ್ವರ ಬೆಟ್ಟದ ಕಾಡಂಚಿಗೆ ಮತ್ತೊಂದು ತಂಡ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಕುವೆಂಪುನಗರದ ಅಪರಾಧ ವಿಭಾಗದ ಪೊಲೀಸರು ಶನಿವಾರದಿಂದ ಕಾಡಂಚಿನ ಹಾಡಿಗಳಲ್ಲಿ ನಾಪತ್ತೆಯಾಗಿ ರುವ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರ ಹಿಸಲಿದೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಲಿಂಗಾಂಬುಧಿ ಕೆರೆಯ ಆವರಣದಲ್ಲಿ ಗಸ್ತು ಕಾರ್ಯ ಹೆಚ್ಚಿಸಿ ದ್ದಾರೆ. ಹಗಲು ಮತ್ತು ರಾತ್ರಿ ಎರಡೂ ಪಾಳಿಗಳಲ್ಲಿ ಉಳಿದಿರುವ ಗಂಧದ ಮರಗಳನ್ನು ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

ಮರಳು ಸಾಗಣೆ; ವಾಹನ ವಶ

ಮೈಸೂರು: ಇಲ್ಲಿನ ವರುಣಾ ಸಮೀಪದ ಕುಪ್ಪೇಗಾಲದ ಬಳಿ ಮಂಗಳವಾರ ಬೆಳಿಗ್ಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಾರುತಿ ಒಮ್ನಿ ವಾಹನವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಹನ ಮೇಲಿದ್ದ ಮರಳಿನ ದೂಳು ಹಾಗೂ ಸೋರುತ್ತಿದ್ದ ಮರಳು ಗಮನಿ ಸಿದ ಪೊಲೀಸರು ವಾಹನ ಬೆನ್ನತ್ತಿದರು. ಇದರ ಸುಳಿವರಿತ ಚಾಲಕ ರಸ್ತೆಬದಿ ಯಲ್ಲಿ ವಾಹನ ನಿಲ್ಲಿಸಿ ಪರಾರಿ ಯಾಗು ವಲ್ಲಿ ಯಶಸ್ವಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು;  ಬಂಧನ

ಮೈಸೂರು:
ಕೆಲಸ ಮಾಡುತ್ತಿದ್ದ ಮನೆ ಯಲ್ಲೇ ಯುವತಿ ಹಾಗೂ ಆಕೆಯ ಗೆಳೆಯ ಚಿನ್ನಾಭರಣ ದೋಚಿರುವ ಘಟನೆ ಇಲ್ಲಿನ ಸರಸ್ವತಿಪುರಂ ಬಡಾವಣೆ ಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತುಳಸಿ ಹಾಗೂ ನವೀನ್‌ ಬಂಧಿತರು. ತುಳಸಿ ಸರಸ್ವತಿಪುರಂನ ಶೈಲಾ ಎಂಬು ವವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ಮನೆಯಲ್ಲಿ ಚಿನ್ನಾಭರಣ ಇರುವುದನ್ನು ಗಮನಿಸಿದ ಈಕೆ ಗೆಳೆಯ ನವೀನ್‌ ಜತೆಗೂಡಿ, ಬೀರುವಿನಲ್ಲಿ ಇಟ್ಟಿದ್ದ 230 ಗ್ರಾಂ ಚಿನ್ನಾಭರಣಗಳನ್ನು ಕೆಲ ದಿನಗಳ ಹಿಂದೆ ಕಳವು ಮಾಡಿದ್ದಾಳೆ. ಸೋಮವಾರ ಬೀರುವನ್ನು ಶೈಲಾ ತೆರೆದಾಗ ಚಿನ್ನಾಭರಣಗಳು ಇಲ್ಲದಿರು ವುದು ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸರು ತುಳಸಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ; ಸಾವು
ಮೈಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವ ನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ರೇವಣ್ಣ (25) ಮೃತಪಟ್ಟ ವ್ಯಕ್ತಿ. ಇವರು ಭಾನುವಾರ ಕಡಕೊಳದ ಸಮೀಪ ಬೈಕ್‌ನಲ್ಲಿ ಬರುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡರು. ನಂತರ, ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಯಿತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಡಿಕ್ಕಿ; ಧರ್ಮಗುರು ಸಾವು
ಮೈಸೂರು: ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಮುಸ್ಲಿಂ ಧರ್ಮಗುರು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

ರಾಜೀವ್‌ನಗರದ ನಿವಾಸಿ ಮೌಲ್ವಿ ಪ್ಯಾರಾಜಾನ್ (80) ಮೃತಪಟ್ಟವರು. ಇವರು ಬೆಂಗಳೂರು– ಮೈಸೂರು ರಸ್ತೆಯ ಕೆ.ಆರ್.ಮಿಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಕೊಲಂಬಿಯಾ ಆಸ್ಪತ್ರೆಯ ಜಂಕ್ಷನ್‌ ಕಡೆಯಿಂದ ಬೈಕ್‌ನಲ್ಲಿ ಬರುತ್ತಿದ್ದ ರಾಜೇಶ್‌ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಮೌಲ್ವಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ನರಸಿಂಹರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಲುಷಿತ  ನೀರು  ಕುಡಿದು  ಹೆಣ್ಣಾನೆ  ಸಾವು

ಹನೂರು: ಕಲುಷಿತ ನೀರು ಕುಡಿದು 15 ವರ್ಷದ ಹೆಣ್ಣಾನೆ ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯದಲ್ಲಿ ನಡೆದಿದೆ.

ಪಚ್ಚೆದೊಡ್ಡಿ ಶಾಖೆಯ ದಿನ್ನಳ್ಳಿ ಗಸ್ತು ಪ್ರದೇಶದಲ್ಲಿ ಆನೆ ಮೃತಪಟ್ಟಿದೆ. ಬರಗಾಲದ ಪರಿಣಾಮ ವನ್ಯಜೀವಿಧಾಮದ ಕೆರೆ, ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಕಾಡು ಪ್ರಾಣಿಗಳು ನೀರಿಗೆ ಪರದಾಡುವಂತಾಗಿದೆ. ಸೋಮವಾರ ನೀರು ಅರಸಿಕೊಂಡು ಬಂದ ಆನೆಯು ಗುಂಡಿಯಲ್ಲಿದ್ದ ಕಲುಷಿತ ನೀರು ಕುಡಿದು ನಿತ್ರಾಣಗೊಂಡು ಮೃತಪಟ್ಟಿದೆ.

ಮಂಗಳವಾರ ಗಸ್ತಿಗೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಆನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ವಲಯ ಅರಣ್ಯಾಧಿಕಾರಿ ಬಿ.ಸಿ. ಲೋಕೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT