ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಬಿಎ ಶಿಬಿರಕ್ಕೆ ಪ್ರಿಯಾಂಕ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಜೂನಿಯರ್ ಮಟ್ಟದ ಹಲವಾರು ಟೂರ್ನಿಗಳಲ್ಲಿ ಗಮನಾರ್ಹ ಸಾಮರ್ಥ್ಯ ನೀಡಿರುವ ಕರ್ನಾಟಕದ ಪ್ರಿಯಾಂಕ ಪ್ರಭಾಕರನ್‌ ಅವರು ಅಮೆರಿಕದಲ್ಲಿ ನಡೆಯಲಿರುವ 19 ವರ್ಷದ ಒಳಗಿನವರ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌  ಸಂಸ್ಥೆಯ (ಎನ್‌ಬಿಎ) ಬಾರ್ಡರ್‌ ಗ್ಲೋಬಲ್‌ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ವಿವಿಧ ವಯೋಮಿತಿಯೊಳಗಿನ  ಟೂರ್ನಿಗಳಲ್ಲಿ ನೀಡಿದ ಪ್ರದರ್ಶನವನ್ನು ಪರಿಗಣಿಸಿ ಅವರಿಗೆ ಈ ಅವಕಾಶ ಲಭಿಸಿದೆ. ವಿಶ್ವದ 67 ಸ್ಪರ್ಧಿಗಳು ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾನಗರದ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮೈಸೂರಿನ ಪ್ರಿಯಾಂಕ  ಹೋದ ವರ್ಷದ ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ 18 ವರ್ಷದ ಒಳಗಿನವರ ಫಿಬಾ ಏಷ್ಯಾ   ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

2014ರಲ್ಲಿ ಗುಜರಾತ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಯೂತ್‌ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. 2015ರಲ್ಲಿ ಕಣ್ಣೂರಿನಲ್ಲಿ ಜರುಗಿದ 35ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು. ಚಂಡೀಗಡ, ಲುಧಿಯಾನ ದಲ್ಲಿ ನಡೆದ ಜೂನಿಯರ್ ಮತ್ತು ಸೀನಿಯರ್ ಟೂರ್ನಿಯಲ್ಲಿ ಆಡಿದ್ದರು.

2016ರಲ್ಲಿ ಗೋವಾದಲ್ಲಿ ಜರುಗಿದ ಫೆಡರೇಷನ್‌ ಕಪ್‌ನಲ್ಲಿಯೂ ಆಡಿದ್ದರು. ಫೆಬ್ರುವರಿ 17ರಿಂದ ಮೂರು ದಿನ ಅಮೆರಿಕದ ಲೂಸಿಯಾನದ ನ್ಯೂ ಒರ್ಲೆನ್ಸ್‌ನಲ್ಲಿ ಯುವ ಆಟಗಾರ್ತಿಯರಿಗೆ  ವಾರ್ಷಿಕ ಬ್ಯಾಸ್ಕೆಟ್‌ಬಾಲ್‌ ತರಬೇತಿ ಶಿಬಿರ ನಡೆಯಲಿದೆ. ಇದು ಎನ್‌ಬಿಎ ಆಲ್‌ ಸ್ಟಾರ್ಸ್‌ನ ಒಂದು ಶಿಬಿರವಾಗಿದೆ.

ಇದರ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರಿಯಾಂಕ ‘ಪ್ರತಿಷ್ಠಿತ ಎನ್‌ಬಿಎನಲ್ಲಿ ಆಡಲು ಅವಕಾಶ ಲಭಿಸಿದ್ದರಿಂದ ತುಂಬಾ ಖುಷಿಯಾಗಿದೆ.  ಅಲ್ಲಿ ಬೇರೆ ಬೇರೆ ದೇಶಗಳ ಆಟ ಗಾರ್ತಿಯರು ಬಂದಿರುತ್ತಾರೆ. ಅವರಿಂದ ಕಲಿಯುವುದು ಸಾಕಷ್ಟಿದೆ.  ಇದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡ
ಬೇಕೆನ್ನುವ ನನ್ನ ಆಸೆಗೆ ಅಮೆರಿ ಕದಲ್ಲಿ ಲಭಿಸುವ ಅನುಭವ ನೆರವಾಗಲಿದೆ’ ಎಂದರು.

‘ವಿದ್ಯಾನಗರ ಕ್ರೀಡಾಶಾಲಾಗೆ ಬಂದಾಗಲೇ ಪ್ರಿಯಾಂಕ ಚುರುಕಾಗಿ ಓಡುವ ಮತ್ತು ವೇಗವಾಗಿ ಪಾಯಿಂಟ್ಸ್‌ ಕಲೆ ಹಾಕುವ ಕಲೆ ಹೊಂದಿದ್ದಳು. ಕಠಿಣ ಪರಿಶ್ರಮದಿಂದ ಆಟದಲ್ಲಿ ಈಗ ಮತ್ತಷ್ಟು ಸುಧಾರಣೆ ಕಂಡುಕೊಂಡಿದ್ದಾಳೆ. ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌   ನೆರವು ನೀಡಿದೆ’ ಎಂದು ಕ್ರೀಡಾ ಶಾಲೆಯ ಬ್ಯಾಸ್ಕೆಟ್‌ಬಾಲ್ ಕೋಚ್‌ ಸತ್ಯನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT