ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಮೋನಾ, ಮಿಥಾಲಿ

ಮಹಿಳೆಯರ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: ದ.ಆಫ್ರಿಕಾ ವಿರುದ್ಧ ಭಾರತ ಜಯಭೇರಿ
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೊಲಂಬೊ: ಮೋನಾ ಮೆಷ್ರಮ್‌ (55) ಹಾಗೂ ಮಿಥಾಲಿ ರಾಜ್‌ (64) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ಮಹಿಳೆಯರ ವಿಶ್ವಕಪ್‌ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್ ಹಂತದ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ  50 ಓವರ್‌ಗಳಲ್ಲಿ 8 ವಿಕೆಟ್‌ಗೆ 205 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 46.4 ಓವರ್‌ಗಳಲ್ಲಿ 156 ರನ್‌ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಶಿಖಾ, ಏಕ್ತಾ ಮಿಂಚು:  ಭಾರತದ ಬೌಲರ್‌ಗಳ ಕರಾರುವಾಕ್ಕಾದ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ಬೇಗನೆ ಕುಸಿತ ಅನುಭವಿಸಿತು. ಆರಂಭಿಕ ಆಟಗಾರ್ತಿಯರು ಪೆವಿಲಿಯನ್ ಸೇರಿದ ಬಳಿಕ ಮಿಂಗನೊನ್ ಡು ಪ್ರೀಜ್‌ (15) ಹಾಗೂ ತ್ರಿಷಾ ಚೆಟ್ಟಿ (51) ಅಲ್ಪಮಟ್ಟಿನ ಚೇತರಿಕೆ ನೀಡಿದರು. ಆದರೆ ಶಿಖಾ ಪಾಂಡೆ (34 ಕ್ಕೆ4 ) ಹಾಗೂ ಏಕ್ತಾ ಬಿಸ್ಟ್‌ (22ಕ್ಕೆ3) ಎದುರಾಳಿ ತಂಡದ ಬ್ಯಾಟ್ಸ್‌ವುಮನ್‌ಗಳಿಗೆ ಸಿಂಹಸ್ವಪ್ನವಾದರು.

ಮಿಥಾಲಿ, ಮೆಷ್ರಮ್‌ ಜತೆಯಾಟ: ಆರಂಭಿಕ ಆಟಗಾರ್ತಿಯರಾದ ನಾಯಕಿ ಮಿಥಾಲಿ ರಾಜ್ (64) ಹಾಗೂ ಮೋನಾ ಮೆಷ್ರಮ್‌ (55) ಅವರ 96 ರನ್‌ಗಳ ಜತೆಯಾಟದಿಂದಾಗಿ ಭಾರತ ತಂಡ 200ರ ಗಡಿ ದಾಟಿತು. 85 ಎಸೆತಗಳನ್ನು ಎದುರಿಸಿದ ಮಿಥಾಲಿ   10 ಬೌಂಡರಿ
ಗಳನ್ನು ಸಿಡಿಸಿದರೆ, ಮೆಷ್ರಮ್ 85 ಎಸೆತಳಿಗೆ 5 ಬೌಂಡರಿ ಬಾರಿಸಿದರು.

ಬಳಿಕ ಬಂದ ಆಟಗಾರ್ತಿಯರು ಬೇಗನೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ಗಳಲ್ಲಿ ಬಾಲಂಗೋಚಿ ಶಿಖಾ ಪಾಂಡೆ 21 ರನ್‌ ದಾಖಲಿಸಿ ನೆರವಾದರು.

ಬಾಂಗ್ಲಾದೇಶಕ್ಕೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 7 ವಿಕೆಟ್‌ಗಳಿಂದ ಐರ್ಲೆಂಡ್‌ ಎದುರು ಗೆದ್ದಿದೆ. ಶ್ರೀಲಂಕಾ ತಂಡ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 205 (ಮೋನಾ ಮೆಷ್ರಮ್‌ 55, ಮಿಥಾಲಿ ರಾಜ್‌ 64; ಮರಿಜನ್‌ ಕಪ್‌ 23ಕ್ಕೆ2). ದಕ್ಷಿಣ ಆಫ್ರಿಕಾ: 46.4 ಓವರ್‌ಗಳಲ್ಲಿ 156 (ಮಿಂಗನೊನ್ ಡು ಪ್ರೀಜ್‌ 15,  ತ್ರಿಷಾ ಚೆಟ್ಟಿ 51; ಶಿಖಾ ಪಾಂಡೆ 34ಕ್ಕೆ4), ಏಕ್ತಾ ಬಿಷ್ಠ್‌ 22ಕ್ಕೆ3, ದೀಪ್ತಿ ಶರ್ಮಾ 35ಕ್ಕೆ1). ಫಲಿತಾಂಶ: ಭಾರತಕ್ಕೆ 49 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT