ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನ ಮೇಳದಲ್ಲಿ ಜಾನಪದ ಸೊಗಡು

ಜನಪದ ನೃತ್ಯ, ಸೋಬಾನೆ ಪದ, ಗೀಗೀ ಪದ ಹಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು
Last Updated 16 ಫೆಬ್ರುವರಿ 2017, 5:59 IST
ಅಕ್ಷರ ಗಾತ್ರ
ದಾವಣಗೆರೆ: ಜಾನಪದ ತಂಡಗಳ ಕಲಾವಿದರ ದೊಡ್ಡ ಬಳಗವೇ ಅಲ್ಲಿ ನೆರೆದಿತ್ತು. ಕೆಲ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆಯುಟ್ಟು ಜನಪದ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು. ಮತ್ತೆ ಕೆಲವರು ಲಾವಣಿ ಪದಗಳಿಗೆ ಹೆಜ್ಜೆ ಹಾಕಿ ನಲಿದಾಡಿದರು.
 
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಬುಧವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಯುವ ಜನ ಮೇಳದಲ್ಲಿ ಈ ದೃಶ್ಯಗಳು ಕಂಡುಬಂದವು. 
 
ದಾವಣಗೆರೆ ಸೇರಿದಂತೆ ಹರಪನ ಹಳ್ಳಿ, ಹರಿಹರ, ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕುಗಳಿಂದ ನೂರಕ್ಕೂ ಹೆಚ್ಚು ಜಾನಪದ ಕಲಾವಿದರು ಬೆಳಿಗ್ಗೆ 9ರಿಂದಲೇ ಹೆಸರನ್ನು ನೋಂದಾಯಿಸಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದರು.
 
ಹರಪನಹಳ್ಳಿಯ ಸೇವಾಲಾಲ್‌ ಗ್ರಾಮೀಣಾಭಿವೃದ್ಧಿ ತಂಡದ ಕಲಾವಿದರು ಬಂಜಾರ ಸಮುದಾಯದ ಉಡುಗೆ ಗಳನ್ನು ತೊಟ್ಟು ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ದುರ್ಗಾಂಬಿಕಾ ಭಜನಾ ಸಂಘದ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ನಗರದ ಧವನ್‌ ಕಾಲೇಜಿನ ವಿದ್ಯಾರ್ಥಿನಿಯರ ಜಾನಪದ ನೃತ್ಯ ಆಕರ್ಷಣೀಯವಾಗಿತ್ತು. 
 
ಜಾನಪದ ಪ್ರಕಾರಗಳ ಅನಾವರಣ:  ಭಾವಗೀತೆ, ಗೀಗೀ ಪದ, ಕೋಲಾಟ, ವೀರಗಾಸೆ, ಡೊಳ್ಳುಕುಣಿತ, ರಂಗಗೀತೆ, ರಾಗಿ ಬೀಸುವ ಪದ, ಸೋಬಾನೆ ಪದ, ಭಜನೆ, ಜಾನಪದ ಗೀತೆ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆಗಳು ನಡೆದವು. 
 
‘ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಕಲಾವಿದರು ಹಾಗೂ ವಿವಿಧ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ (15ವರ್ಷದಿಂದ 35 ವರ್ಷದ ಒಳಗಿನ) ವಿದ್ಯಾರ್ಥಿಗಳು ಯುವಜನ ಮೇಳದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ ವಿಜೇತ ರಾದ ತಂಡಕ್ಕೆ ನಗದು ಬಹುಮಾನ ನೀಡಲಾಯಿತು.
 
ಜೊತೆಗೆ ಇಲ್ಲಿ ಆಯ್ಕೆ ಆದವರನ್ನು ತೀರ್ಥಹಳ್ಳಿ ತಾಲ್ಲೂಕಿನ ಮುಳಬಾಗಿಲಿನಲ್ಲಿ ಶೀಘ್ರದಲ್ಲಿ ನಡೆಯುವ ವಿಭಾಗೀಯ ಮಟ್ಟದ ಯುವ ಜನ ಮೇಳಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ಉಪ ನಿರ್ದೇಶಕ ಶ್ರೀನಿವಾಸ್‌ ಮಾಹಿತಿ ನೀಡಿದರು. 
 
ಯುವಜನ ಮೇಳದ ಫಲಿತಾಂಶ
 
ಏಕಪಾತ್ರ ಅಭಿನಯ (ದಾವಣಗೆರೆ: ಎಚ್‌.ಎನ್‌.ನೇಸರ, ಎ.ಎಂ.ಸುಮಂಗಲ). ರಾಗಿ ಬೀಸುವ ಪದ (ಹರಪನಹಳ್ಳಿ: ಜ್ಯೋತಿ ಮತ್ತು ಸಂಗಡಿಗರು). ಸೋಬಾನೆ ಪದ (ದಾವಣಗೆರೆ: ಬೆಳಗು ಜನಪದ ಸಂಘ). ಭಾವಗೀತೆ (ದಾವಣಗೆರೆ: ಪ್ರತೀಕಾ ಹೆಗಡೆ, ಎಂ.ಸಿ.ತಿಪ್ಪೇಶ್‌, ತಿಮ್ಮಣ್ಣ). ಗೀಗೀ ಪದ (ದಾವಣಗೆರೆ: ಸಿ.ಎಚ್‌.ಉಮೇಶ್‌ ತಂಡ). ಲಾವಣಿ (ದಾವಣಗೆರೆ: ಸಿ.ಎಚ್‌.ಉಮೇಶ್‌. ಹರಿಹರ: ಮಹಾದೇವಪ್ಪ. ಹರಪನಹಳ್ಳಿ: ತಿಮ್ಮಣ್ಣ). ಕೋಲಾಟ (ಚನ್ನಗಿರಿ: ಜುಂಜೇಶ್ವರ ಯುವಕರ ತಂಡ. ದಾವಣಗೆರೆ: ಡಾ.ಬಿ.ಆರ್‌. ಅಂಬೇಡ್ಕರ್‌ ಯುವಕರ ಸಂಘ). ವೀರಗಾಸೆ (ಹೊನ್ನಾಳಿ: ವೀರಭದ್ರೇಶ್ವರ ಯುವಕರ ಸಂಘ). ಡೊಳ್ಳು ಕುಣಿತ (ಹೊನ್ನಾಳಿ: ಕರಿಯಮ್ಮ ದೇವಿ ಯುವ ಸಂಘ). ರಂಗಗೀತೆ (ಹರಿಹರ: ಎಂ.ಜಿ. ಆಂಜನೇಯ. ಜಿ.ಆರ್‌. ಮಹಾದೇವಪ್ಪ. ಹರಪನಹಳ್ಳಿ: ಸೋಮ ಶೇಖರಗೌಡ). ಭಜನೆ. ಜಾನಪದ ಗೀತೆ (ಬಸಾಪುರ: ಬಸವಕಲಾ ಲೋಕ. ಹರಪನಹಳ್ಳಿ: ದುರ್ಗಾಂಬಿಕಾ ಭಜನಾ ಸಂಘ). ದೊಡ್ಡಾಟ (ಹರಪನಹಳ್ಳಿ: ಆಂಜನೇಯ ಗ್ರಾಮೀಣ ಹಾಗೂ ಸಾಂಸ್ಕೃತಿಕ ಸಂಘ). ಚರ್ಮವಾದ್ಯ (ಹರಿಹರ/ ದಾವಣಗೆರೆ: ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕ ಸಂಘ). ಏಕಪಾತ್ರಾಭಿನಯ (ಹರಪನಹಳ್ಳಿ: ಆಂಜನೇಯ, ನೂರುಲ್ಲ). ಯುವತಿಯರ ವಿಭಾಗ: ಭಾವಗೀತೆ (ದಾವಣಗೆರೆ: ನವ್ಯಶ್ರೀ, ಸಿರಿ, ಸ್ಫೂರ್ತಿ) ಗೀಗೀ ಪದ (ದಾವಣಗೆರೆ: ಬೆಳಗು ಕಲಾ ತಂಡ. ರಿಯಾ ಮತ್ತು ತಂಡ). ಲಾವಣಿ ಪದ, ಕೋಲಾಟ (ದಾವಣಗೆರೆ: ರುದ್ರಾಕ್ಷಿ ಬಾಯಿ, ಸುಮಂಗಲ, ಹರಪನಹಳ್ಳಿ: ಜ್ಯೋತಿ). ರಂಗಗೀತೆ (ದಾವಣಗೆರೆ: ಎ.ಎಂ.ಸುಮಂಗಲ). ಜನಪದ ನೃತ್ಯ (ದಾವಣಗೆರೆ: ದವನ್‌ ಪ್ಲೇಕ್ಸ್‌ ಆರ್ಟ್‌ ತಂಡ. ಹರಪನಹಳ್ಳಿ: ಸೇವಾಲಾಲ್‌ ಗ್ರಾಮೀಣಾಭಿವೃದ್ಧಿ ತಂಡ). ಭಜನೆ (ದಾವಣಗೆರೆ: ಬೆಳಗು
ಜನಪದ ತಂಡ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT