ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಗೆ ಭರ್ಜರಿ ಗೆಲುವು

ಬಾಗಲವಾಡ ತಾಲ್ಲೂಕು ಪಂಚಾಯಿತಿ ಉಪ ಚುನಾವಣೆ
Last Updated 16 ಫೆಬ್ರುವರಿ 2017, 6:35 IST
ಅಕ್ಷರ ಗಾತ್ರ
ಮಾನ್ವಿ: ತಾಲ್ಲೂಕಿನ ಬಾಗಲವಾಡ ತಾಲ್ಲೂಕು  ಪಂಚಾಯಿತಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಮನಪ್ಪ ಯಾದವ್‌ 762 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
 
ಫೆ.12ರಂದು ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ  ನಡೆಯಿತು. ಚುನಾವಣೆಯಲ್ಲಿ  ಕ್ಷೇತ್ರದ  ಒಟ್ಟು 9,094 ಮತದಾರರ  ಪೈಕಿ 5,082 ಮತದಾರರು ಮತ ಚಲಾಯಿಸಿದ್ದರು. ಕಣದಲ್ಲಿ ಉಳಿದಿದ್ದ ಕಾಂಗ್ರೆಸ್‌ ಅಭ್ಯರ್ಥಿ  ಯಮನಪ್ಪ ಯಾದವ್ 2,882 ಮತ್ತು ಬಿಜೆಪಿ ಅಭ್ಯರ್ಥಿ ರೇಣುಕಾದೇವಿ ಮಲ್ಲನಗೌಡ 2,120 ಮತಗಳನ್ನು ಪಡೆದರು. 80 ‘ನೋಟಾ’ ಮತಗಳು  ಚಲಾವಣೆಯಾಗಿರುವುದು ವಿಶೇಷವಾಗಿದೆ.
 
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಾಗರೆಡ್ಡೆಪ್ಪಗೌಡ ಅವರು ಕಾಂಗ್ರೆಸ್‌ನ ಯಮನಪ್ಪ ಯಾದವ್‌ ವಿರುದ್ಧ ಗೆಲುವು ಸಾಧಿಸಿದ್ದರು. ನಾಗರೆಡ್ಡೆಪ್ಪಗೌಡ ಅವರ ನಿಧನದಿಂದಾಗಿ ಕ್ಷೇತ್ರ ತೆರವಾಗಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯುವ ಮೂಲಕ ಯಮನಪ್ಪ ಯಾದವ್‌ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರ ಕೈ ಹಿಡಿದಿದ್ದಾರೆ.  ಫಲಿತಾಂಶ ಸುದ್ದಿ ತಿಳಿಯುತ್ತಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭಮಾಚರಣೆ ನಡೆಸಿದರು. 
 
ತಾಲ್ಲೂಕು ಪಂಚಾಯಿತಿಯ ಒಟ್ಟು 29 ಸ್ಥಾನಗಳ ಪೈಕಿ 13ಸ್ಥಾನ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಾಗಲವಾಡ ಕ್ಷೇತ್ರದ ಗೆಲುವಿನಿಂದ ಒಟ್ಟು ಸ್ಥಾನಗಳ ಸಂಖ್ಯೆ 14ಕ್ಕೆ ಏರಿದೆ. 12ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 11ಕ್ಕೆ ಕುಸಿದಿದೆ.
 
ಸಂತಸ: ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಯಮನಪ್ಪ ಯಾದವ್‌, ತಮ್ಮ ಮೇಲೆ ವಿಶ್ವಾಸ ಇಟ್ಟು ಬೆಂಬಲಿಸಿದ ಎಲ್ಲಾ ಮತದಾರರು ಮತ್ತು ಚುನಾವಣೆಯಲ್ಲಿ ಕೆಲಸ ಮಾಡಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT