ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ತತ್ವಾರ; ನಾಗರಿಕರ ಆಕ್ರೋಶ

ಗಜೇಂದ್ರಗಡದಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ನೀರಿನ ಸಮಸ್ಯೆ; 15 ದಿನಕ್ಕೊಮ್ಮೆ ನೀರು
Last Updated 16 ಫೆಬ್ರುವರಿ 2017, 11:39 IST
ಅಕ್ಷರ ಗಾತ್ರ
ಗಜೇಂದ್ರಗಡ: ಪಟ್ಟಣದಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ನೀರಿಗೆ ತತ್ವಾರ ತಲೆದೋರಿದೆ. ಸಮರ್ಪಕವಾಗಿ ನೀರು ಪೂರೈಸದಿದ್ದರೆ ಪುರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ಪಟ್ಟಣದ ನಾಗರಿಕರು ಬುಧವಾರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
 
ಪಟ್ಟಣದ ಬನ್ನಿಕಟ್ಟಿ ಮತ್ತು ಡೊಳ್ಳಿನವರ ಓಣಿಯ 7 ಮತ್ತು 8 ನೇಯ ವಾರ್ಡ್‌ನಲ್ಲಿ 6 ತಿಂಗಳಿನಿಂದ ನೀರಿನ ತೊಂದರೆ ಇದ್ದು, ಟ್ಯಾಂಕರ್ ನೀರು ಕೂಡ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಸರಿಯಾದ ಪೈಪ್‌ಲೈನ್ ಜೋಡಣೆ ಮಾಡಬೇಕು ಎಂದು ಈ ಹಲವು ಸಲ ಹೇಳಿದ್ದರೂ ಪ್ರಯೋಜನ ಆಗುತ್ತಿಲ್ಲ ಎಂದು ಆರೋಪಿಸಿದರು.
 
ಇದಲ್ಲದೇ, ಚರಂಡಿಗಳು ತುಂಬಿ ಹರಿಯುತ್ತಿದ್ದರೂ ಅವುಗಳನ್ನು ತಿಂಗಳಾ ದರೂ ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಪುರಸಭೆ ಸದಸ್ಯರಾದ ಅಶೋಕ ವನ್ನಾಲ, ಮಂಜು ಬಡಿಗೇರ, ಶ್ರೀಕಾಂತ ಕಲಾಲ, ಸುಮಿತ್ರಾ ತೊಂಡಿಹಾಳ, ಚಂದ್ರಶೇಖರ ಚಳಗೇರಿ, ಶರಣಪ್ಪ ರೇವಡಿ, ಪ್ರಭು ಚವಡಿ ಅವರು ಪುರಸಭೆ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿ ಎದುರು ಅಹವಾಲು ಹೇಳಿಕೊಂಡರು. 15 ದಿನ ಗಳಲ್ಲಿ ಈ ಎಲ್ಲ ಸಮಸ್ಯೆ ಪರಿಹರಿಸದಿದ್ದರೆ ಪುರಸಭೆ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
 
ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮತ್ತು ಅಧ್ಯಕ್ಷೆ ಮಕ್ತುಂಬಿ ಹಣಗಿ ಮಾತನಾಡಿ, ಪಟ್ಟಣದಲ್ಲಿ ಅಂತ ರ್ಜಲ ಮಟ್ಟ ಕುಸಿದು ನೀರಿನ ಪ್ರಮಾಣ ಕಡಿಮೆಯಾಗಿದೆ. ಇದನ್ನು ಸರಿಪಡಿಸಲು 15 ದಿನ ಕಾಲಾವಕಾಶ ನೀಡಬೇಕು ಎಂದರು.
 
ಪ್ರತಿಭಟನೆಯಲ್ಲಿ ವಿರೇಶ ಡೊಳ್ಳಿನ, ಎ.ಎನ್.ಕವಡಿಮಟ್ಟಿ, ರಾಚಪ್ಪ ಡೊಳ್ಳಿನ, ಶಿದ್ದಪ್ಪ ಚುರ್ಚಾಳ, ಹೇಮಾ ಜಿಂಗಾಡೆ, ಶೋಭಾ ಬಳಗೇರ, ವಿದ್ಯಾ ಕಂಬಳಿ, ಶಾಂತವ್ವ ಕಂಬಳಿ, ಗಿರಿಜಾ ಗಾಳಿ, ದಾಕ್ಷಾಯಿಣಿ ಹಿರೇಮಠ, ದೇವಪ್ಪ ಗೊಣ್ಣಾಗರ, ಅಬ್ದುಲ್‌ಸಾಬ್  ನಾಲ ಬಂದ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT