ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ: ಗುತ್ತಿಗೆದಾರರ ಪ್ರತಿಭಟನೆ

Last Updated 16 ಫೆಬ್ರುವರಿ 2017, 11:52 IST
ಅಕ್ಷರ ಗಾತ್ರ
ಹಾವೇರಿ: ಮರಳು, ಮುರ್ರಂ, ಖಡಿ, ಕಲ್ಲಿನ ಸಮಸ್ಯೆ ಸೇರಿದಂತೆ ಕಚ್ಚಾ ಸಾಮಗ್ರಿಗಳ ದರ ಪುನರ್‌ ಪರಿಷ್ಕರಿಸಿ ಗುತ್ತಿಗೆ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾ ಖೆಯ ಕಾರ್ಯನಿರ್ವಾಹಕ ಎಂಜನಿಯರಿಂಗ್‌ ಕಚೇರಿ ಎದುರು ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು. 
 
‘ಜಿಲ್ಲೆಯಲ್ಲಿ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ, ಕಾಮ ಗಾರಿಗಳಿಗೆ ಬೇಕಾದ ಕಚ್ಚಾ ವಸ್ತುಗಳು ನಿಗದಿತ ಸಮಯ ಹಾಗೂ ಸರ್ಕಾರ ನಿಗದಿಗೊಳಿಸಿದ ದರದಲ್ಲಿ ದೊರೆ ಯುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು. 
 
‘ಜಿಲ್ಲೆಯ ಕಾಮಗಾರಿಗಳನ್ನು ಬೇರೆ ಜಿಲ್ಲೆಗಳ ಮತ್ತು ಇತರ ರಾಜ್ಯಗಳ ಗುತ್ತಿಗೆ ದಾರರು  ಗುತ್ತಿಗೆ ಪಡೆಯುತ್ತಿದ್ದಾರೆ. ಸರ್ಕಾರ ನಿಗದಿಗೊಳಿಸಿದಕ್ಕಿಂತ ಶೇ10ರಿಂದ  ಶೇ 28 ರ ಕಡಿಮೆ ದರವನ್ನು ಹಾಕಿ ಗುತ್ತಿಗೆ ಪಡೆಯುತ್ತಾರೆ. ಇದರಿಂದಾಗಿ ಅನೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಇನ್ನು ಕೆಲವು ಕಳಪೆ ಗುಣಮಟ್ಟದಿಂದ ಕೂಡಿವೆ. ಆದರೆ,  ಅಧಿಕಾರಿಗಳು ಕಾಮಗಾರಿಗಳ ಗುಣ ಮಟ್ಟವನ್ನು ಪರಿಶೀಲಿಸಬೇಕು’ ಎಂದರು. 
 
ಮಲ್ಲಿಕಾರ್ಜುನ ಹಾವೇರಿ, ಲಿಂಗ ರಾಜ ಚಪ್ಪರದಹಳ್ಳಿ, ಸಂಜೀವ ಕುಮಾರ ನೀರಲಗಿ, ಮಹೇಶ ಹಾವೇರಿ, ರವೀಂದ್ರ ದುಂಡಿಗೌಡ್ರ ಮಾತನಾಡಿ ದರು. ನಿರಂಜನ ಮರಡೂರಮಠ, ತಿಮ್ಮಣ್ಣ ವಡ್ಡರ, ಬಿ.ಎಂ.ಪಾಟೀಲ್‌, ಮಂಜು ಮಾಲಿ, ಚಂದ್ರು ಹಟ್ಟಿ, ಅಶೋಕ ಬಣಕಾರ, ಗೋವಿಂದಪ್ಪ ಪುಜಾರ, ಪರ್ವತಗೌಡ್ರ ರಾಮನಗೌಡ್ರ, ಪ್ರವೀಣ ಶೆಟ್ಟರ್ ಮುತ್ತು ಅಕ್ಕಿ, ವೀರೇಶ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT