ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಪ್ರೀಕ್ವಾರ್ಟರ್‌ಗೆ ಕಮಲ್, ಹರ್ಮೀತ್

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಚುರುಕಾದ ಆಟವಾಡಿದ ಭಾರತದ ಅಚಂತ ಶರತ್ ಕಮಲ್ ಮತ್ತು ಹರ್ಮೀತ್ ದೇಸಾಯಿ  ಅವರು  ಇಲ್ಲಿ ನಡೆಯುತ್ತಿರುವ ಐಟಿಟಿ ಎಫ್ ವಿಶ್ವ ಟೂರ್ ಇಂಡಿಯಾ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ ತಲುಪಿದರು.
 
ಗುರುವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ 112ನೇ  ರ್‌್ಯಾಂಕ್‌ನ ಹರ್ಮಿತ ದೇಸಾಯಿ   ಅವರು  11–4, 11–6, 11–9, 9–11, 9–11, 7–11, 11–6ರಿಂದ  77ನೇ  ರ್‌್್ಯಾಂಕ್‌ನಲ್ಲಿರುವ ಫ್ರಾನ್ಸ್‌ ಆಟಗಾರ ಟ್ರಿಸ್ಟನ್ ಫ್ಲೋರ್ ವಿರುದ್ಧ ಜಯಿಸಿದರು. ರೋಚಕವಾಗಿದ್ದ ಪಂದ್ಯದಲ್ಲಿ ಇಬ್ಬರೂ ಆಟಗಾರರು ಬಹಳಷ್ಟು ಬೆವರು ಹರಿಸಿದರು. 
 
ಮೊದಲ ಮೂರು ಗೇಮ್‌ಗಳಲ್ಲಿ ಗೆದ್ದ ಹರ್ಮಿತ್ ಅವರು ನಾಲ್ಕನೇ ಗೇಮ್‌ನಲ್ಲಿ ಎಡವಿದರು. ಇದರಿಂದಾಗಿ ಪಂದ್ಯವು ಮತ್ತಷ್ಟು ದೀರ್ಘವಾಯಿತು. ಐದು ಮತ್ತು ಆರನೇ ಗೇಮ್‌ನಲ್ಲಿ ತುರುಸಿನ ಪೈಪೋಟಿ ಕಂಡುಬಂದಿತು. ಆದರೂ ಫ್ರಾನ್ಸ್‌ ಆಟಗಾರ ಕೇವಲ 2 ಪಾಯಿಂಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದರು.  ಇದರಿಂದಾಗಿ 3–3 ಗೇಮ್‌ಗಳ ಸಮಬಲ ಸಾಧಿಸಿದರು. 
 
ನಂತರ ಏಳನೇ ಗೇಮ್ ಕುತೂಹಲದ ಗಣಿಯಾಗಿ ಮಾರ್ಪಟ್ಟಿತು.  ಈ ಗೇಮ್‌ನಲ್ಲಿ 5–6ರಿಂದ ಹಿನ್ನಡೆ ಯಲ್ಲಿದ್ದ ಹರ್ಮಿತ್ ತಮ್ಮ ಆಟದ ವೇಗ ಮತ್ತು  ಚುರುಕಾದ ಸರ್ವಿಸ್‌ಗಳ ಮೂಲಕ ಎದುರಾಳಿಗೆ ಚಳ್ಳೆಹಣ್ಣು ತಿನ್ನಿಸಿದರು. ಟಾಪ್‌ ಸ್ಪಿನ್‌ ಆಟವಾಡಿದ  ಹರ್ಮಿತ್ ಫ್ಲಾರ್ ಅವರ ತಂತ್ರಗಳನ್ನು ವಿಫಲಗೊಳಿಸಿದರು.  ಐದು ಅಂಕಗಳ ಅಂತರದಿಂದ ಗೆದ್ದು ಬೀಗಿದರು. 
 
ಕಮಲ್ ಹೋರಾಟ
ಒಲಿಂಪಿಯನ್ ಶರತ್ ಕಮಲ್ ಅವರು 11–5, 11–8, 11–4, 8–11, 11–8ರಿಂದ ಕ್ಯಾನ್ ಅಕ್ಕುಜು ವಿರುದ್ಧ ಗೆದ್ದರು. ಐದು ಗೇಮ್‌ಗಳ ಹೋರಾಟ ದಲ್ಲಿ ಕಮಲ್ 4–1ರಿಂದ ಮೇಲುಗೈ ಸಾಧಿಸಿ ದರು. 62ನೇ ಶ್ರೇಯಾಂಕದ ಕಮಲ್ ಅವರು ಮುಂದಿನ ಪಂದ್ಯದಲ್ಲಿ  ಜಪಾನ್ ತಂಡದ ಯುಟೊ ಮುರಾಮತ್ಸು ವಿರುದ್ಧ ಆಡಲಿದ್ದಾರೆ. 
 
ಡಬಲ್ಸ್‌ ಕ್ವಾರ್ಟರ್‌ಗೆ ಕಮಲ್ ಜೋಡಿ 
ಭಾರತದ ಶರತ್‌ ಕಮಲ್ ಮತ್ತು ಸನೀಲ್ ಶೆಟ್ಟಿ ಜೋಡಿಯು ಪುರುಷರ ಡಬಲ್ಸ್‌ನ ಎಂಟರ ಘಟ್ಟಕ್ಕೆ ಪ್ರವೇಶಿಸಿತು. ಜಪಾನಿನ ತೊಮೊಕಾಜು ಹರಿಮೊಟೊ ಜೋಡಿಯು ವಾಕ್‌ಓವರ್ ನೀಡಿದ್ದರಿಂದ ಕಮಲ್ ಜೋಡಿಯು ಕ್ವಾರ್ಟರ್‌ಫೈನಲ್ ತಲುಪಿತು. 
 
ಪುರುಷ ಮತ್ತು ಮಹಿಳೆಯರ ವಿಭಾಗದ ಡಬಲ್ಸ್‌ಗಳಲ್ಲಿ ಭಾರತದ ಇನ್ನುಳಿದ ಸ್ಪರ್ಧಿಗಳು ನಿರಾಸೆ ಮೂಡಿಸಿದರು. 
 
ಫಲಿತಾಂಶಗಳು: ಪುರುಷರ ಸಿಂಗಲ್ಸ್‌: ಹರ್ಮೀತ್ ದೇಸಾಯಿ (ಭಾರತ) ಅವರು 11–4, 11–6, 11–9, 9–11, 9–11, 7–11, 11–6ರಿಂದ  ಟ್ರಿಸ್ಟನ್ ಫ್ಲೋರ್ (ಫ್ರಾನ್ಸ್‌)  ವಿರುದ್ಧ; ಕೊಕಿ ನಿವಾ (ಜಪಾನ್) 11–4, 11–5, 15–13, 11–4ರಿಂದ ಅಂತೋನಿ ಅಮಲ್‌ರಾಜ್ (ಭಾರತ) ವಿರುದ್ಧ; ಯುಟೊ ಮುರಾ ಮತ್ಸು (ಜಪಾನ್) 12–10, 11–4, 11–7, 11–5ರಿಂದ ಅಬ್ದಿಲ್ ಖಾದರ್ ಸಲಿಫೌ (ಫ್ರಾನ್ಸ್) ವಿರುದ್ಧ ಗೆದ್ದರು. 
 
ಮಹಿಳೆಯರ ಸಿಂಗಲ್ಸ್‌:  ಹುಜುನ್ ಜಿಯಾಂಗ್ (ಹಾಂಗ್‌ಕಾಂಗ್) 11–6, 6–11, 11–7, 13–11, 8–11, 8–11, 19–17ರಿಂದ ಕ್ರಿಟ್ವಿಕಾ ರಾಯ್ (ಭಾರತ) ವಿರುದ್ಧ; ಮೌಸಮಿ ಪಾಲ್ (ಭಾರತ) 11–7, 8–11, 11–7, 11–4, 11–8ರಿಂದ ಮಣಿಕಾ ಬತ್ರಾ (ಭಾರತ) ವಿರುದ್ಧ; ಸುತ್ರಿತಾ ಮುಖರ್ಜಿ (ಭಾರತ) 11–5, 11–8, 11–8, 11–9ರಿಂದ ಅಂಕಿತಾ ದೇಸಾಯಿ (ಭಾರತ) ವಿರುದ್ಧ ಗೆದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT