ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಫಿ ದರ್ಗಾದಲ್ಲಿ ಆತ್ಮಾಹುತಿ ದಾಳಿ 100 ಬಲಿ

Last Updated 16 ಫೆಬ್ರುವರಿ 2017, 19:41 IST
ಅಕ್ಷರ ಗಾತ್ರ

ಕರಾಚಿ : ಸಿಂಧ್‌ ಪ್ರಾಂತ್ಯದ ಸೆಹ್ವಾನ್‌ ಪಟ್ಟಣದಲ್ಲಿನ ಸೂಫಿ ದರ್ಗಾದ ಲಾಲ್‌ ಷಹಬಾಜ್‌ ಖಲಂದರ್‌ದೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಗುರುವಾರದ ‘ಧಮಾಲ್‌’ ನೃತ್ಯ ಮತ್ತು ಪ್ರಾರ್ಥನೆ ಸಲುವಾಗಿ ನೂರಾರು ಭಕ್ತರು ಮಂದಿರದ ಆವರಣದಲ್ಲಿ ನೆರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂದಿರದಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟ ಸ್ಥಳದಲ್ಲಿ ಈ ಆತ್ಮಾಹುತಿ ದಾಳಿ ನಡೆದಿದೆ. ಮುಖ್ಯದ್ವಾರದಿಂದ ಒಳ ಬಂದ ದಾಳಿಕೋರ ಮೊದಲು ನೃತ್ಯ ನಡೆಯುತ್ತಿದ್ದ ಸ್ಥಳದತ್ತ ಗ್ರೆನೇಡ್‌ ಎಸೆದ. ಆದರೆ ಅದು ಸ್ಫೋಟಗೊಳ್ಳಲಿಲ್ಲ. ಬಳಿಕ ತನ್ನನ್ನು ತಾನೇ ಸ್ಫೋಟಿಸಿಕೊಂಡ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT