ಮೆಲ್ಬೋರ್ನ್: ಪೆಸಿಫಿಕ್ ಮಹಾಸಾಗರದ ಅಡಿಯಲ್ಲಿ ಭಾರತ ಉಪ ಖಂಡದಷ್ಟು ದೊಡ್ಡದಾದ ನಾಡು ಹುದಗಿದೆ. ‘ಜೀಲ್ಯಾಂಡಿಯಾ’ ಎಂದು ಹೆಸರಿಸಿರುವ ಈ ನಾಡನ್ನು ಹೊಸ ಖಂಡವೆಂದು ಪರಿಗಣಿಸುವಂತೆ ಬಿಡುಗಡೆಯಾಗಿರುವ ಹೊಸ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.
ಪೆಸಿಫಿಕ್ ಸಾಗರದ ನೈಋತ್ಯ ಭಾಗದಲ್ಲಿ 49 ಲಕ್ಷ ಕಿ.ಮೀ. ವರೆಗೂ ಈ ಭೂಖಂಡ ವ್ಯಾಪಿಸಿದೆ. ಆಸ್ಟ್ರೇಲಿಯಾದಿಂದ ಪ್ರತ್ಯೇಕಗೊಂಡಿರುವ ಭೂಭಾಗ ಸಾಗರದಲ್ಲಿ ಹುದುಗಿದ್ದು, ಅಧಿಕ ಸಿಲಿಕಾಯುಕ್ತ ಬಂಡೆಕಲ್ಲುಗಳಿಂದ ಕೂಡಿದೆ. ಸಂಶೋಧಕರು ಇದನ್ನು ಜೀಲ್ಯಾಂಡಿಯಾ ಎಂದು ಕರೆದಿದ್ದಾರೆ.
ಭೂಖಂಡದ ಸರಿತ, ಭೂಭಾಗ ತೆಳುವಾಗುವುದು ಹಾಗೂ ಬೇರ್ಪಡುವ ಪ್ರಕ್ರಿಯೆಯಿಂದಾಗಿ ಸಾಗರದಲ್ಲಿ ಹುದುಗಿರುವ ಭೂಭಾಗದ ಕುರಿತು ಆಸ್ಟ್ರೇಲಿಯಾದ ಸಿಡ್ನಿ ವಿವಿ, ನ್ಯೂಜಿಲ್ಯಾಂಡ್‌ನ ವಿಕ್ಟೋರಿಯಾ ವಿವಿಯ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.