ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಲಕ್ಷ ಕೋಟಿ ಮೊತ್ತದ ₹500 ಮುಖಬೆಲೆಯ ಹೊಸ ನೋಟು ಮುದ್ರಣ

Last Updated 17 ಫೆಬ್ರುವರಿ 2017, 12:10 IST
ಅಕ್ಷರ ಗಾತ್ರ

ನವದೆಹಲಿ: ನೋಟು ಮುದ್ರಣ ಘಟಕಗಳಿಂದ ನಿತ್ಯ ₹500 ಮುಖಬೆಲೆಯ 2.2 ಕೋಟಿ ನೋಟುಗಳು ಮುದ್ರಣಗೊಂಡು ರವಾನೆಯಾಗುತ್ತಿವೆ.

₹500 ಮುಖಬೆಲೆಯ ₹1 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳನ್ನು ಈಗಾಗಲೇ ಮುದ್ರಿಸಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

9 ಮುದ್ರಣಾ ಘಟಕಗಳನ್ನು ಹೊಂದಿರುವ ಎಸ್‌ಪಿಎಂಸಿಐಎಲ್‌ನ 11ನೇ ಸಂಸ್ಥಾಪನನಾ ದಿನದ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳ ಇಲಖೆಯ ಜಂಟಿ ಕಾರ್ಯದರ್ಶಿ ಪ್ರವೀಣ್‌ ಗರ್ಗ್‌ ಮಾತನಾಡಿದರು.

ನವೆಂಬರ್‌ 8 ರಂದು ನೋಟು ರದ್ಧತಿಯ ಸಮಯದಲ್ಲಿ ಆರ್‌ಬಿಐ ಬಳಿ ₹2000 ಮುಖಬೆಲೆಯ ₹4.95 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳ ಸಂಗ್ರಹವಿತ್ತು ಎಂಬುದು ಆರ್‌ಟಿಐ  ಪ್ರಶ್ನೆ ಮೂಲಕ ಬಹಿರಂಗ ಗೊಂಡಿತ್ತು. ಆದರೆ, ₹500ರ ಹೊಸ ನೋಟುಗಳ ಸಂಗ್ರಹವಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ಪ್ರಕ್ರಿಯೆ ಘೋಷಿಸುವ ದಿನ ದೇಶದಲ್ಲಿ ₹500 ಮುಖಬೆಲೆಯ 1716.5 ಕೋಟಿ ಹಾಗೂ ₹1000 ಮುಖಬೆಲೆಯ 685.8 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು.

ಆ ನೋಟುಗಳ ಒಟ್ಟು ಮೊತ್ತ ₹15.44 ಲಕ್ಷ ಕೋಟಿ(₹500ರ ₹8.58 ಲಕ್ಷ ಕೋಟಿ ಹಾಗೂ 1000 ರೂಪಾಯಿಯ ₹6.86 ಲಕ್ಷ ).

ಹೊಸ ನೋಟು ಅಗತ್ಯ ಪೂರೈಕೆಗಾಗಿ ಎಸ್‌ಪಿಎಂಸಿಐಎಲ್‌ ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ದಿನ 24 ಗಂಟೆಯೂ ಮುದ್ರಣ ಕಾರ್ಯ ಚಾಲನೆಯಲ್ಲಿರಿಸಿದೆ.

ಎಸ್‌ಪಿಎಂಸಿಐಎಲ್‌ ₹500ರ ಹೊಸ ನೋಟುಗಳನ್ನು ಮಾತ್ರ ಮುದ್ರಿಸುತ್ತಿದ್ದು, ₹2000 ಮುಖಬೆಲೆ ನೋಟುಗಳನ್ನು ಆರ್‌ಬಿಐ ಮುದ್ರಿಸುತ್ತಿದೆ. ಮುದ್ರಣಾ ಘಟಕಗಳಿಂದ ದೇಶದ ಪ್ರಮುಖ ನಗರಗಳಿಗೆ ವಾಯು ಮಾರ್ಗದಲ್ಲಿ ನೋಟು ರವಾನೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT