ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 8–2–1967

50 ವರ್ಷಗಳ ಹಿಂದೆ
Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಭಾರತಕ್ಕೆ 20 ಲಕ್ಷ ಟನ್ ಅಮೆರಿಕ ಆಹಾರ: ಮುಂದಿನ ವಾರ ಒಪ್ಪಂದ
ನವದೆಹಲಿ, ಫೆ. 17– ಭಾರತದ ನಾಣ್ಯದಲ್ಲೇ ಬೆಲೆ ಪಡೆಯುವ ಷರತ್ತಿನಲ್ಲಿ ಅಮೆರಿಕದಿಂದ ಭಾರತವು 20 ಲಕ್ಷ ಟನ್ ಆಹಾರಧಾನ್ಯ ಖರೀದಿಸುವ ಒಪ್ಪಂದಕ್ಕೆ ಮುಂದಿನ ವಾರ ಸಹಿ ಬೀಳಲಿದೆ.
 
ಧಾನ್ಯ ಮಾರಾಟದಿಂದ ಬರುವ ಈ ಭಾರತೀಯ ನಾಣ್ಯಗಳನ್ನು ಭಾರತೀಯ ರೈತರಿಗೆ ಸಾಲವಾಗಿ ನೀಡಲು ಉಪಯೋಗಿ ಸುವ ವಿಚಾರವಿದೆ. ಈ ಬಗ್ಗೆ ವಿವರವನ್ನು ಒಪ್ಪಂದದಲ್ಲಿ ರೂಪಿಸಲಾಗಿಲ್ಲ.
 
**
ಮಹಾ ಚುನಾವಣೆ ಪ್ರಥಮ ಫಲಿತಾಂಶ: ಸ್ವತಂತ್ರರಿಗೆ 2 ಸ್ಥಾನ
ಇಂಫಾಲ್, ಫೆ. 17– ಇಂದು ರಾತ್ರಿ ಫಲಿತಾಂಶದಿಂದ ಸಾರಲಾಗಿರುವ ಮಣಿಪುರ ಅಸೆಂಬ್ಲಿಯ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಎಸ್.ಎಸ್.ಪಿ.ದೊಂದು  ಸ್ಥಾನವನ್ನೂ ಸ್ವತಂತ್ರ ಅಭ್ಯರ್ಥಿಗಳು ಎರಡು ಸ್ಥಾನಗಳನ್ನೂ ಪಡೆದಿದ್ದಾರೆ. ಅವಿರೋಧ ಆಯ್ಕೆಗಳು ಬಿಟ್ಟರೆ ನಾಲ್ಕನೇ ಮಹಾ ಚುನಾವಣೆಯ ಪ್ರಥಮ ಫಲಿತಾಂಶ ಇದಾಗಿದೆ. 
 
ಸಂಯುಕ್ತ ಸೋಷಲಿಸ್ಟ್ ಪಕ್ಷವು ಖುರೈ ಕ್ಷೇತ್ರವನ್ನು ಉಳಿಸಿಕೊಂಡಿದ್ದರೂ ಸಿಂಗ್  ಜಾಮಿ ಕ್ಷೇತ್ರವನ್ನು ಕಳೆದುಕೊಂಡಿದೆ.
 
**
ರಾಜ್ಯದ ರಸ್ತೆ ಸಾರಿಗೆ ರಾಷ್ಟ್ರೀಕರಣ ವಿಧಾನ ಪ್ರಶ್ನಿಸಿ ರಿಟ್ ಅರ್ಜಿ
ನವದೆಹಲಿ, ಫೆ. 17– ಬಸ್ ಸಾರಿಗೆ ಮಾರ್ಗವೊಂದರ ರಾಷ್ಟ್ರೀಕರಣ ಯೋಜನೆಯನ್ನು ಮೈಸೂರು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಹಾಗೂ ರಾಜ್ಯ ಸಾರಿಗೆ ಸಚಿವರು ಕಾರ್ಯಾಚರಣೆಗೆ ತಂದ ವಿಧಾನದ ರಾಜ್ಯಂಗಬದ್ಧತೆಯನ್ನು ಪ್ರಶ್ನಿಸಿ  ಬೆಂಗಳೂರಿನ  ಬಸ್ ಮಾಲೀಕರಾದ ಶ್ರೀ ಗುರುನಂಜಯ್ಯ ಹಾಗೂ ಶ್ರೀ ಕೆ.ಎನ್. ಸೋಮಯ್ಯ ಇವರುಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಸ್ವೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT