ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತದೇಹ ಹಸ್ತಾಂತರಕೆħ ನಕಾರ

ನಮ್ ಕುಟುಂಬದವರ ಡಿಎನ್‌ಎ ಮಾದರಿಗೆ ಬೇಡಿಕೆ
Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕ್ವಾಲಾಲಂಪುರ: ವಿಮಾನ ನಿಲ್ದಾಣದಲ್ಲಿ ಹತ್ಯೆಯಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಮಲಸಹೋದರ ಕಿಮ್ ಜಾಂಗ್‌ ನಮ್‌ ಅವರ ಕುಟುಂಬದ ಸದಸ್ಯರು ತಮ್ಮ ಡಿಎನ್‌ಎ ಮಾದರಿ ನೀಡಿದ ಬಳಿಕವೇ ಮೃತದೇಹ ಹಸ್ತಾಂತರಿಸುವುದಾಗಿ ಮಲೇಷ್ಯಾ ಶುಕ್ರವಾರ ತಿಳಿಸಿದೆ. 
 
ನಮ್ ಅವರ ಮೃತದೇಹವನ್ನು ತಮಗೆ ಒಪ್ಪಿಸಬೇಕು ಎಂದು ಉತ್ತರ ಕೊರಿಯಾ ಮನವಿ ಮಾಡಿತ್ತು. 
 
ನಮ್ ಅವರ ದೇಹದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ ವಿಧಿವಿಜ್ಞಾನ ತಜ್ಞರು, ಅವರ ಸಾವಿಗೆ ಕಾರಣವಾದ ವಿಷದ ಮಾದರಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 
 
‘ಇದುವರೆಗೂ ನಮ್ ಅವರ ಕುಟುಂಬದ ಯಾವ ಸದಸ್ಯರೂ ದೇಹವನ್ನು ಗುರುತಿಸಲು ಬಂದಿಲ್ಲ. ಮೃತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಕುಟುಂಬದ ಸದಸ್ಯರ ಡಿಎನ್‌ಎ ಮಾದರಿ ನಮಗೆ ಬೇಕು’ ಎಂದು ಸೆಲಾಂಗೊರ್ ರಾಜ್ಯ ಪೊಲೀಸ್‌ ಮುಖ್ಯಸ್ಥ ಅಬ್ದುಲ್‌ ಸಮಹ್‌ ತಿಳಿಸಿದ್ದಾರೆ.
 
ಜಾಲದೊಳಗೆ ಸಿಲುಕಿದ ಯುವತಿ: ನಮ್ ಅವರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಮ್ಮ ದೇಶದ ಮಹಿಳೆ ಅಮಾಯಕಿ ಎಂದು ಇಂಡೊನೇಷ್ಯಾದ ಪೊಲೀಸರು ಹೇಳಿದ್ದಾರೆ.
 
ಕ್ಯಾಮೆರಾವನ್ನು ಅಡಗಿಸಿಟ್ಟು ಜನರಿಗೆ ಕೀಟಲೆ ಮಾಡುವ ‘ಕೇವಲ ತಮಾಷೆಗಾಗಿ’ ಮಾದರಿಯ ಟಿವಿ ಕಾರ್ಯಕ್ರಮದಲ್ಲಿ ಇಂಡೊನೇಷ್ಯಾದ ಸಿತಿ ಐಸ್ಯಾಹ್‌ ಕೆಲಸ ಮಾಡುತ್ತಿದ್ದಳು. ಕಣ್ಣು ಮುಚ್ಚುವಂತೆ ಪುರುಷರ ಮನವೊಲಿಸಿ ಅವರ ಮುಖದ ಮೇಲೆ ನೀರೆರಚಿ ತಮಾಷೆ ಮಾಡುವುದು ಕಾರ್ಯಕ್ರಮದ ಭಾಗವಾಗಿತ್ತು. ಅದಕ್ಕಾಗಿ ಆ ಯುವತಿಯರಿಗೆ ಕೆಲವು ಡಾಲರ್‌ ಹಣ ನೀಡಲಾಗುತ್ತಿತ್ತು. 
 
ನಾಲ್ಕೈದು ಜನರನ್ನು ಇದೇ ರೀತಿ ಕೀಟಲೆ ಮಾಡಲಾಗಿತ್ತು. ನಮ್ ಅವರನ್ನು ಕೊನೆಯ ಗುರಿಯಾಗಿ ಇರಿಸಿಕೊಳ್ಳಲಾಗಿತ್ತು. ಇದು ನಮ್ ಅವರನ್ನು ಹತ್ಯೆ ಮಾಡಲು ವಿದೇಶಿ ಏಜೆಂಟ್‌ಗಳು ರೂಪಿಸಿರುವ ಸಂಚು ಎಂದು ಐಸ್ಯಾಹ್‌ಗೆ ತಿಳಿದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT