ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮ ಸಂಸ್ಕೃತಿಯ ಮಹತ್ವ ಅರಿಯಿರಿ

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ– ಡಾ.ಕೆ.ಉಮೇಶ್
Last Updated 18 ಫೆಬ್ರುವರಿ 2017, 7:06 IST
ಅಕ್ಷರ ಗಾತ್ರ
ಮೂಡಬಾಗಿಲು (ಎನ್‌.ಆರ್.ಪುರ): ವಿದ್ಯಾರ್ಥಿಗಳು ಬದುಕಿನಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ತಿಳಿಸಿದರು.
 
ತಾಲ್ಲೂಕಿನ ಮೂಡಬಾಗಿಲು ಗ್ರಾಮ ದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಸಮಾರೋಪ ಸಮಾರಂಭದಲ್ಲಿ  ಸಮಾರೋಪ ಭಾಷಣ ಮಾಡಿದರು.
 
ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಎನ್ಎಸ್‌ಎಸ್ ಸಹಕಾರಿಯಾಗಿದೆ. 1969ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶ್ರಮ ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಗುರಿ ಹೊಂದಿದೆ. ಗ್ರಾಮದಲ್ಲಿ ದೊರೆಯುವ ಶಾಂತಿ, ನಗರದಲ್ಲಿ ದೊರೆಯವುದಿಲ್ಲ. ಹಳ್ಳಿಯ ಬದುಕಿನ ಕಾಯಕ ನಿಷ್ಠೆ, ಸಂಪನ್ಮೂಲಗಳ ಬಳಕೆ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಬೇಕು.
 
ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ದೇಶದಲ್ಲಿ ಜಾತ್ಯತೀತ, ಧರ್ಮಾತೀತ ತತ್ವಗಳನ್ನು ಅಳವಡಿಸಿಕೊಂಡು ಭಾರತೀಯ ತೆಯನ್ನು ಬೆಳೆಸಿಕೊಳ್ಳಬೇಕು. ಸೇವೆ ಎಂಬುದು ನನಗಲ್ಲ. ನಿನಗೆ ಅನ್ನುವ ಧ್ಯೇಯವನ್ನು ಹೊಂದಿದೆ. ವಿದ್ಯಾರ್ಥಿ ಗಳು ವಿಮರ್ಶಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
 
ತಾಲ್ಲೂಕು ಪಂಚಾಯಿತಿ ಸದಸ್ಯ ನಾಗೇಶ್ ಮಾತನಾಡಿ, ಯುವಜ ನಾಂಗಕ್ಕೆ ರೈತಾಪಿ ಬದುಕು ಮಂಕಾಗಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿ ಕುಟುಂಬದಿಂದ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ರೈತಾಪಿ ಬದುಕಿನ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕೆಂದರು. 
 
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಸದಸ್ಯೆ ಹೇಮಾವತಿ ಮಾತನಾಡಿ, ಯುವಜನಾಂಗ ಟಿ.ವಿ,ಮೊಬೈಲ್ ನ ಅತಿಯಾದ ಬಳಕೆಯಿಂದ ತಪ್ಪುಹಾದಿ ತುಳಿಯುತ್ತಿದ್ದಾರೆ. ಹೆಣ್ಣು ಮಕ್ಕಳು ಸಮಾಜದಲ್ಲಿ ಸದೃಢವಾಗಿ ಬೆಳೆಯ ಬೇಕು. ತಂದೆ, ತಾಯಿಯನ್ನು ಪ್ರೀತಿ ಯಿಂದ ನೋಡಿಕೊಳ್ಳಬೇಕು. ಹಿರಿ ಯರಿಗೆ ಗೌರವ ನೀಡಬೇಕು ಎಂದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಕೆ.ಪೂರ್ಣೇಶ್, ನಾಲ್ಕು ಗೋಡೆಯ ಮಧ್ಯೆ ಕಲಿಯುವ ಶಿಕ್ಷಣಕ್ಕಿಂತಲೂ ಅದರಾಚೆಗೆ ಕಲಿಯುವ ಶಿಕ್ಷಣ ನಿಜವಾದ ಶಿಕ್ಷಣವಾಗಿದೆ. ಶಿಕ್ಷಣದ ಜತೆಗೆ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
 
ಬಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ  ವಸಂತಕುಮಾರ್, ಉಪಾಧ್ಯಕ್ಷೆ ಅಂ ಬಿಕಾ, ಸದಸ್ಯೆ ಸುಲೋಚನಾ, ಶಾಲಾ ಭಿವೃದ್ಧಿ ಸಮಿತಿಯ ಸದಸ್ಯೆ ಮಾಲತಿ ಪ್ರಕಾಶ್, ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಈಶ್ವರಾಚಾರ್, ಉಪನ್ಯಾಸಕ ಸುಜಿತ್, ಬಸವರಾಜ್ ವಿದ್ಯಾರ್ಥಿಗಳಾದ ನಿಥಿನ್‌ಮ್ಯಾಥ್ಯೂ, ಅಜಿತಾ, ಅಭಿಷೇಕ್, ಎಂ.ಕೆ.ಪ್ರಕೃತಿ ಇದ್ದರು.
 
* ಎಲ್ಲಿಯವರೆಗೆ ಶ್ರಮ ಸಂಸ್ಕೃತಿಯನ್ನು  ಅರಿಯಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ
ಡಾ.ಕೆ.ಉಮೇಶ್ಮುಖ್ಯಸ್ಥರು, ಸಮಾಜ ಕಾರ್ಯವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT